ಹೊಸ ವರ್ಷದ ಸಂಭ್ರಮದಲ್ಲಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ. ರಿಲಯನ್ಸ್ ಜಿಯೋ ಶುಕ್ರವಾರ ಹ್ಯಾಪಿ ನ್ಯೂ ಇಯರ್ ಆಫರ್ ಘೋಷಿಸಿದೆ. ಈ ಆಫರ್ ಅಡಿಯಲ್ಲಿ 100% ಕ್ಯಾಶ್ ಬ್ಯಾಕ್ ಸಿಗಲಿದೆ.
ಹೊಸ ವರ್ಷದ ಸಂಭ್ರಮದಲ್ಲಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿದೆ. ರಿಲಯನ್ಸ್ ಜಿಯೋ ಶುಕ್ರವಾರ ಹ್ಯಾಪಿ ನ್ಯೂ ಇಯರ್ ಆಫರ್ ಘೋಷಿಸಿದ್ದು, ಈ ಆಫರ್ ಅಡಿಯಲ್ಲಿ ಗ್ರಾಹಕರಿಗೆ 100% ಕ್ಯಾಶ್ ಬ್ಯಾಕ್ ಸಿಗಲಿದೆ.
100% ಕ್ಯಾಶ್ ಬ್ಯಾಕ್ ಆಫರ್
ರೂ. 399 ರೀಚಾರ್ಜ್ ಮಾಡಿಸಿಕೊಳ್ಳುವವರಿಗೆ ಆಫರ್ ಅಡಿಯಲ್ಲಿ 100% ಕ್ಯಾಶ್ ಬ್ಯಾಕ್ ಸಿಗಲಿದೆ. ಕ್ಯಾಶ್ ಬ್ಯಾಕ್ ಅನ್ನು ಮೈಜಿಯೋ ಆಪ್ ನಲ್ಲಿನ AJIO coupon ಮೂಲಕ ಪಡೆಯಬಹುದು. ಅಂದರೆ ರೂ. 399 ರೀಚಾರ್ಜ್ ಮಾಡಿದರೆ ಮೊಬೈಲ್ ಅಪ್ಲಿಕೇಷನ್ ಮೈಜಿಯೋನಲ್ಲಿರುವ ಮೈಕೂಪನ್ಸ್ ಗೆ ರೂ. 399 ಕ್ರೆಡಿಟ್ ಆಗುತ್ತದೆ.
ಹ್ಯಾಪಿ ನ್ಯೂ ಇಯರ್ ಆಫರ್ ಪಡೆಯೋದು ಹೇಗೆ?
ಗ್ರಾಹಕರು ತಮ್ಮ ಜಿಯೋ ನಂಬರ್ ಗೆ ರೂ. 399 ರೀಚಾರ್ಜ್ ಮಾಡಬೇಕು. ಮೈಜಿಯೋ ಅಪ್ಲಿಕೇಶನ್ ನ ಮೈಕೂಪನ್ಸ್ ವಿಭಾಗದಲ್ಲಿ ರೂ. 399 ಮೌಲ್ಯದ AJIO ಕೂಪನ್ ಗಳನ್ನು ಕ್ರೆಡಿಟ್ ಮಾಡುತ್ತದೆ. AJIO ಅಪ್ಲಿಕೇಶನ್ ನಲ್ಲಿ ಕೂಪನ್ ಅನ್ನು ಮರು ಬಳಸಲು ರೂ. 1,000 ರಷ್ಟು ಕನಿಷ್ಠ ಖರೀದಿ ಮಾಡಬೇಕು.
ಆಫರ್ ಖರೀದಿಯ ಅವಧಿ
ಈ ಆಫರ್ ಈಗಾಗಲೇ ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರಿಗೆ ಲಭ್ಯವಿದೆ. ಹ್ಯಾಪಿ ನ್ಯೂ ಈಯರ್ ಆಫರ್ ನ್ನು ಡಿಸೆಂಬರ 28 ರಿಂದ ಜನೆವರಿ 30, 2019 ವರೆಗೆ ರೀಚಾರ್ಜ್ ಮಾಡಬಹುದು. ರಿಲಾಯನ್ಸ್ ಜಿಯೋ ಚಂದಾದಾರರು ಈ ಕೂಪನ್ ಗಳನ್ನು ಮಾರ್ಚ್ 15, 2019ರ ಮುಂಚಿತವಾಗಿ ಸದುಪಯೋಗಪಡಿಸಿಕೊಳ್ಳಬೇಕು..
ರೂ. 399 ಪ್ಲಾನ್
ರೂ. 399 ಪ್ಲಾನ್ ಜಿಯೋ ಸಂಸ್ಥೆಯ ಅತಿಹೆಚ್ಚಿನ ಪ್ರಿಪೇಡ್ ಗ್ರಾಹಕರು ಈ ಯೋಜನೆಯನ್ನು ಬಳಸುತ್ತಿದ್ದಾರೆ. ಎಲ್ಲಾ ಅಪರೇಟರ್ ಗಳ ನಡುವೆ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಅನಿಯಮಿತವಾಗಿರುತ್ತದೆ.
ವ್ಯಾಲಿಡಿಟಿ: 84 ದಿನಗಳು
ಸ್ಥಳೀಯ-ಎಸ್ಟಿಡಿ ಕರೆ: ಅನಿಯಮಿತ
ರೋಮಿಂಗ್ ಹೊರ ಹೋಗುವ ಕರೆ: ಅನಿಯಮಿತ
ರೋಮಿಂಗ್ ಒಳಬರುವ ಕರೆ: ಅನಿಯಮಿತ
ಸ್ಥಳೀಯ, ರಾಷ್ಟ್ರೀಯ, ರೋಮಿಂಗ್ ಎಸ್ಎಂಎಸ್: ಅನಿಯಮಿತ
4G ಡೇಟಾ: 1.5GB ಪ್ರತಿದಿನ (ಒಟ್ಟು 126GB)
ಕ್ಯಾಶ್ ಬ್ಯಾಕ್ ಆಫರ್
ಜಿಯೋ ಡಿಸ್ಕೌಂಟ್ ಆಫರ್, ಡಿಸ್ಕೌಂಟ್, ಪ್ರೋಮೊ ಕೋಡ್ ಬಗ್ಗೆ ಮಾಹಿತಿ ಇಲ್ಲಿದೆ.


Click it and Unblock the Notifications