ಡಿಸೆಂಬರ್ ೨೨ ರಂದು ನಡೆದ ಸಭೆಯಲ್ಲಿ ಹಲಚು ಸರಕುಗಳ ಮೇಲಿನ ತೆರಿಗೆ ಕಡಿತ ಮಡಲು ನಿರ್ಧರಿಸಿ, ಶೇ. 28ರ ತೆರಿಗೆ ಶ್ರೇಣಿಯಲ್ಲಿದ್ದ ಸರಕುಗಳ ತೆರಿಗೆಯನ್ನು ಕಡಿತಗೊಳಿಸಿತ್ತು.
ಹೊಸ ವರ್ಷಕ್ಕೆ ಸರ್ಕಾರ ಸಿಹಿಸುದ್ಇ ನೀಡಿದ್ದು, ಸರಕು ಮತ್ತು ಸೇವಾ ತೆರಿಗೆ ಅಡಿಯಲ್ಲಿ 2019ರ ಜನವರಿ 1ರಿಂದ ಸಿನಿಮಾ ಟಿಕೆಟ್ ಸೇರಿದಂತೆ ಒಟ್ಟು 23 ವಸ್ತುಗಳು ಅಗ್ಗವಾಗಲಿವೆ.

ಡಿಸೆಂಬರ್ ೨೨ ರಂದು ನಡೆದ ಸಭೆಯಲ್ಲಿ ಹಲಚು ಸರಕುಗಳ ಮೇಲಿನ ತೆರಿಗೆ ಕಡಿತ ಮಡಲು ನಿರ್ಧರಿಸಿ, ಶೇ. 28ರ ತೆರಿಗೆ ಶ್ರೇಣಿಯಲ್ಲಿದ್ದ ಸರಕುಗಳ ತೆರಿಗೆಯನ್ನು ಕಡಿತಗೊಳಿಸಿತ್ತು. ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕೆಲ ವಸ್ತುಗಳನ್ನು ಶೇ. 28 ರಿಂದ ಶೇ. 18 ರ ದರಕ್ಕೆ ಇಳಿಕೆ ಮಾಡಿದೆ. ಕೆಲ ವಸ್ತುಗಳು ಶೇ. 18 ರಿಂದ ಶೇ. 12 ಕ್ಕೆ ಇಳಿಕೆ ಮಾಡಲಾಗಿದೆ. 100 ರೂಪಾಯಿವರೆಗಿನ ಸಿನಿಮಾ ಟಿಕೆಟ್ ಬೆಲೆ ಶೇಕಡಾ 18 ರ ದರದಿಂದ ಶೇಕಡಾ 12ಕ್ಕೆ ಇಳಿಕೆಯಾಗಿದೆ.
ತೆರಿಗೆ ಕಡಿತದ ಪರಿಣಾಮವಾಗಿ ಸಿನಿಮಾ ಟಿಕೆಟ್, ಮಾನಿಟರ್, 32 ಇಂಚು ಟಿ.ವಿ ಸ್ಕ್ರೀನ್, ಟೈರ್, ಗೇರ್ ಬಾಕ್ಸ್, ವಿಡಿಯೊ ಗೇಮ್, ಡಿಜಿಟಲ್ ಕ್ಯಾಮೆರಾ, ವಿಡಿಯೊ ರೆಕಾರ್ಡರ್, ಅಂಗವಿಕಲ ವ್ಯಕ್ತಿಗಳಿಗೆ ಬೇಕಾಗುವ ಸಾಧನಗಳು, ಪವರ್ ಬ್ಯಾಂಕ್‌ಗಳ ಲಿಥಿಯಂ ಬ್ಯಾಟರಿ, ಮ್ಯೂಸಿಕ್ ಬುಕ್, ಸೋಲಾರ್ ಪವರ್, ಸೌರ ವಿದ್ಯುತ್ ಉತ್ಪಾದನಾ ಘಟಕ, ಯಾತ್ರಾ ಸ್ಥಳಗಳಿಗೆ ವಿಮಾನ ಪ್ರಯಾಣ, ಸರಕು ಸಾಗಣೆಯ ವಾಹನಗಳ ವಿಮೆ ಪ್ರೀಮಿಯಂ, ಜನ್ ಧನ್ ಬೇಸಿಕ್ ಸೇವಿಂಗ್ ಬ್ಯಾಂಕ್ ಠೇವಣಿ ಖಾತೆ (ಬಿಎಸ್‌ಬಿಡಿ) ಕುರಿತ ಸೇವೆ ಅಗ್ಗವಾಗಲಿದೆ.
ಮಾರ್ಬಲ್, ನೈಸರ್ಗಿಕ ಶಿಲೆ, ವಾಕಿಂಗ್ ಸ್ಟಿಕ್ ಮೇಲೆಯೂ ತೆರಿಗೆಯನ್ನು ಶೇ. 5ಕ್ಕೆ ತಗ್ಗಿಸಲಾಗಿದೆ.


Click it and Unblock the Notifications