For Quick Alerts
ALLOW NOTIFICATIONS  
For Daily Alerts

ಡಿಸೆಂಬರ್‌ನಲ್ಲಿ ಜಿಎಸ್ಟಿ ಸಂಗ್ರಹ ರೂ. 94,726 ಕೋಟಿಗೆ ಇಳಿಕೆ

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ಕಳೆದ ಡಿಸೆಂಬರ್‌ನಲ್ಲಿ ರೂ. 94,726 ಕೋಟಿಗೆ ಇಳಿಕೆಯಾಗಿದೆ. ಕಳೆದ ನವೆಂಬರ್‌ನಲ್ಲಿ ರೂ. 97,637 ಕೋಟಿ ಸಂಗ್ರಹವಾಗಿತ್ತು.

|

ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ಕಳೆದ ಡಿಸೆಂಬರ್‌ನಲ್ಲಿ ರೂ. 94,726 ಕೋಟಿಗೆ ಇಳಿಕೆಯಾಗಿದೆ. ಕಳೆದ ನವೆಂಬರ್‌ನಲ್ಲಿ ರೂ. 97,637 ಕೋಟಿ ಸಂಗ್ರಹವಾಗಿತ್ತು. ಡಿಸೆಂಬರ್ ನಲ್ಲಿ ಸೇಲ್ಸ್ ರಿಟರ್ನ್ಸ್ ಅಥವಾ ಜಿಎಸ್ಟಿಆರ್ -3ಬಿ ರೂ. 72.44 ಲಕ್ಷ ಸಲ್ಲಿಕೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.

ಡಿಸೆಂಬರ್‌ನಲ್ಲಿ ಜಿಎಸ್ಟಿ ಸಂಗ್ರಹ ರೂ. 94,726 ಕೋಟಿಗೆ ಇಳಿಕೆ

ಡಿಸೆಂಬರ್ ನಲ್ಲಿ ಸಂಗ್ರಹವಾಗಿರುವ ಜಿಎಸ್ಟಿ ರು. 94,726 ಕೋಟಿ ಪೈಕಿ ಸಿಜಿಎಸ್ಟಿ ರೂ. 16,442 ಕೋಟಿ, ರಾಜ್ಯ ಜಿಎಸ್ಟಿ ರೂ. 22,459 ಕೋಟಿ,ಸಂಯೋಜಿತ ಜಿಎಸ್ಟಿ (ಐಜಿಎಸ್‌ಟಿ) ರೂ. 47,936 ಕೋಟಿ ಮತ್ತು ಸೆಸ್ ರೂ. 7,888 ಕೋಟಿ ಆಗಿದೆ.

ಕಳೆದ ಏಪ್ರಿಲ್‌-ಡಿಸೆಂಬರ್‌ ಅವಧಿಯಲ್ಲಿ ರೂ. 8.71 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹಿಸಲಾಗಿತ್ತು. 2018-19ರ ಬಜೆಟ್ ಅಂದಾಜಿನ ಪ್ರಕಾರ ವಾರ್ಷಿಕ ಸಂಗ್ರಹದ ಗುರಿ ರೂ. 13.48 ಲಕ್ಷ ಕೋಟಿ ಆಗಿದೆ. 2017ರ ಜುಲೈ ಹಾಗೂ 2018ರ ಮಾರ್ಚ್‌ ಅವಧಿಯಲ್ಲಿ ಮಾಸಿಕ ಸರಾಸರಿ ರೂ. 89,885 ಕೋಟಿ ಸಂಗ್ರಹವಾಗಿದೆ.

Read more about: gst money
English summary

GST collection drops to Rs 94,726 crore in December

collection dropped to Rs 94,726 crore in December 2018, lower than Rs 97,637 crore collected in the previous month.
Story first published: Wednesday, January 2, 2019, 15:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X