2018-19ರಲ್ಲಿ ಜಿಡಿಪಿ ಶೇ. 7.2 ರಷ್ಟು ಏರಿಕೆ ಸಾಧ್ಯತೆ

2018-19ರ ಸಾಲಿನ ಆರ್ಥಿಕ ವರ್ಷಕ್ಕೆ ಜಿಡಿಪಿ (ಒಟ್ಟು ದೇಶೀಯ ಉತ್ಪನ್ನ)ಶೇ. 7.2 ರಷ್ಟು ಬೆಳವಣಿಗೆ ಆಗಲಿದ್ದು, ಹಿಂದಿನ ವರ್ಷದಲ್ಲಿ ಜಿಡಿಪಿ ಶೇ. 6.7 ರಷ್ಟಿತ್ತು ಎಂದು ಕೇಂದ್ರಿಯ ಅಂಕಿಅಂಶಗಳ ಸಂಘಟನೆ (ಸಿಎಸ್ಒ) ವರದಿ ಮಾಡಿದೆ.

"ರಾಷ್ಟ್ರೀಯ ಆದಾಯದ ಮೊದಲ ಮುನ್ನಡೆ ಅಂದಾಜು 2018-19" ಎಂಬ ಶೀರ್ಷಿಕೆಯಡಿ ಸಚಿವಾಲಯದ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನದ ವರದಿಯ ಒಂದು ಭಾಗವಾಗಿದೆ.

2017-18 ರಲ್ಲಿನ ಶೇ. 6.7ರ ಆರ್ಥಿಕ ಬೆಳವಣಿಗೆಯನ್ನು ಈ ವರ್ಷ ಹಿಂದಿಕ್ಕಲಿದೆ. ಕೃಷಿ ಮತ್ತು ಉತ್ಪಾದನಾ ವಲಯದ ಸುಧಾರಣೆಯ ಪರಿಣಾಮ ಜಿಡಿಪಿ ದರ ಶೇ. 7.2 ರಷ್ಟು ವೃದ್ದಿ ಸಾಧಿಸಲಿದೆ ಎಂದು ಹೇಳಿದೆ. ಕೃಷಿ, ಅರಣ್ಯ ಮತ್ತು ಮೀನುಗಾರಿಕೆಯಲ್ಲಿ ಬೆಳವಣಿಗೆಯ ಮಟ್ಟ ಶೇ. 3.4 ರಿಂದ ಶೇ. 3.8 ಕ್ಕೆ ಏರಿಕೆ ಆಗಲಿದೆ.
ಉತ್ಪಾದನಾ ವಲಯದ ಬೆಳವಣಿಗೆ ಕೂಡ ಶೇ. 5.7ರಿಂದ ಶೇ. 8.3 ಕ್ಕೆ ವೃದ್ಧಿಸುವ ನಿರೀಕ್ಷೆ ಇದೆ.

ಭಾರತದ ಆರ್ಥಿಕ ಬೆಳವಣಿಗೆ ದರ ಕಳೆದ ತ್ರೈ ಮಾಸಿಕದಲ್ಲಿ ಇಳಿಕೆಯಾಗಿತ್ತು. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬದಲಾವಣೆ, ಬಡ್ಡಿ ದರದಲ್ಲಿನ ಏರಿಕೆ, ರಫ್ತು ಬೇಡಿಕೆ ದುರ್ಬಲಗೊಂಡ ಕಾರಣಗಳ ಪರಿಣಾಮ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ತಡೆಯುಂಟಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+