ಜಿಎಸ್ಟಿ ಮಂಡಳಿ: ತೆರಿಗೆ ವಿನಾಯಿತಿ ಮಿತಿ ದುಪ್ಪಟ್ಟು

ಸರಕು ಮತ್ತು ಸೇವಾ ತೆರಿಗೆ ಮಂಡಳಿ ಜನವರಿ 10 ರಂದು ನಡೆದ ಸಭೆಯಲ್ಲಿ ಸಣ್ಣ ಉದ್ದಿಮೆದಾರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ದುಪ್ಪಟ್ಟುಗೊಳಿಸಿದೆ.

ಸರಕು ಮತ್ತು ಸೇವಾ ತೆರಿಗೆ ಮಂಡಳಿ ಜನವರಿ 10 ರಂದು ನಡೆದ ಸಭೆಯಲ್ಲಿ ಸಣ್ಣ ಉದ್ದಿಮೆದಾರರಿಗೆ ತೆರಿಗೆ ವಿನಾಯಿತಿ ಮಿತಿಯನ್ನು ದುಪ್ಪಟ್ಟುಗೊಳಿಸಿದೆ.

ಜಿಎಸ್ಟಿ ಮಂಡಳಿ: ತೆರಿಗೆ ವಿನಾಯಿತಿ ಮಿತಿ ದುಪ್ಪಟ್ಟು

ಸಣ್ಣ ತೆರಿಗೆದಾರರು ಅಥವಾ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSMEs) ಅನುಷ್ಠಾನದ ವೆಚ್ಚವನ್ನು ಕಡಿಮೆಗೊಳಿಸಲು ಮುಂದಾಗಿದೆ. ಜಿಎಸ್ಟಿ ವಿನಾಯಿತಿ ಮಿತಿಯನ್ನು ರೂ. 20 ಲಕ್ಷದಿಂದ ರೂ. 40 ಲಕ್ಷಗಳಿಗೆ ದುಪ್ಪಟ್ಟು ಮಾಡಿದೆ. ರೂ. 40 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ವ್ಯಾಪಾರಗಳು ಈಗ ನೋಂದಣಿ ಮತ್ತು ಜಿಎಸ್ಟಿ ಪಾವತಿಯಿಂದ ವಿನಾಯಿತಿ ಪಡೆದಿರುತ್ತವೆ.

ಈಶಾನ್ಯ ರಾಜ್ಯಗಳಿಗೆ ರೂ. 20 ಲಕ್ಷದವರೆಗೆ ಮತ್ತು ದೇಶದ ಉಳಿದ ಭಾಗದಲ್ಲಿ ರೂ. 40 ಲಕ್ಷದವರೆಗೂ ಜಿಎಸ್ಟಿ ವಿನಾಯಿತಿ ಮಿತಿಯನ್ನು ಏರಿಕೆ ಮಾಡಲಾಗಿದೆ.
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಸಣ್ಣ ವ್ಯಾಪಾರಿಗಳು ವಹಿವಾಟಿನ ಆಧಾರದ ಮೇಲೆ ತೆರಿಗೆ ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ.
ಜಿಎಸ್ಟಿ ಸಂಯೋಜನೆ (composition scheme) ವ್ಯಾಪ್ತಿಯನ್ನು ರೂ. 1 ಕೋಟಿಯಿಂದ ರೂ. 1.55 ಕೋಟಿವರೆಗೆ ಏರಿಕೆ ಮಾಡಲಾಗಿದ್ದು, ಇದು ದೇಶದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವರ್ಗದ ಉದ್ದಿಮೆದಾರರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+