ಸೆಪ್ಟೆಂಬರ್ 2018ರ ತನಕ ಇರುವ ಅಂಕಿಅಂಶಗಳ ಪ್ರಕಾರ, ಕೇಂದ್ರ ಸರ್ಕಾರ ಸಾಲ ಜೂನ್ 2014ರ ವರೆಗೆ ರೂ. 54,90,763 ಕೋಟಿ ಆಗಿತ್ತು. ಆದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆಗಿರುವ ಒಟ್ಟು ಸಾಲ ರೂ. 82,03,253 ಕೋಟಿ ಎಂದು ಹಣಕಾಸು ಸಚಿವಾಲಯ ದಾಖಲೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನಾಲ್ಕೂವರೆ ವರ್ಷದ ಅವಧಿಯಲ್ಲಿ ಎಷ್ಟು ಸಾಲ ಆಗಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತದೆ.
ನರೇಂದ್ರ ಮೋದಿ ಆಡಳಿತಾವಧಿಯ ಕೇವಲ ನಾಲ್ಕೂವರೆ ವರ್ಷದಲ್ಲಿ ದೇಶದ ಸಾಲದ ಪ್ರಮಾಣ ಶೇ. 49 ರಷ್ಟು ಏರಿಕೆಯಾಗಿದ್ದು, ರೂ. 82 ಲಕ್ಷ ಕೋಟಿಗೆ ತಲುಪಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಸರ್ಕಾರಿ ಸಾಲದ ಸ್ಥಿತಿಗತಿ ಪತ್ರದ 8ನೇ ಆವೃತ್ತಿಯಲ್ಲಿ ವರದಿಯಾಗಿದೆ.
ಒಟ್ಟು ಸಾಲದ ಪ್ರಮಾಣ
ಸೆಪ್ಟೆಂಬರ್ 2018ರ ತನಕ ಇರುವ ಅಂಕಿಅಂಶಗಳ ಪ್ರಕಾರ, ಕೇಂದ್ರ ಸರ್ಕಾರ ಸಾಲ ಜೂನ್ 2014ರ ವರೆಗೆ ರೂ. 54,90,763 ಕೋಟಿ ಆಗಿತ್ತು. ಆದರೆ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಆಗಿರುವ ಒಟ್ಟು ಸಾಲ ರೂ. 82,03,253 ಕೋಟಿ ಎಂದು ಹಣಕಾಸು ಸಚಿವಾಲಯ ದಾಖಲೆಗಳಲ್ಲಿ ತಿಳಿಸಿದೆ.
ಸಾಲದ ಏರಿಕೆ ಪ್ರಮಾಣ
ಮೋದಿ ಆಡಳಿತದ ಅವಧಿಯಲ್ಲಿ ಸಾರ್ವಜನಿಕ ಸಾಲ ರೂ. 48 ಲಕ್ಷ ಕೋಟಿಯಿಂದ ರೂ. 73 ಲಕ್ಷ ಕೋಟಿಗ ಏರಿಕೆಯಾಗಿದೆ. ಅಂದರೆ ಶೇ. 51.7 ರಷ್ಟು ಹೆಚ್ಚಾಗಿದೆ. ಆಂತರಿಕ ಸಾಲ ಶೇ. 54 ಏರಿಕೆಯಾಗಿ ರೂ. 68 ಲಕ್ಷ ಕೋಟಿ ಆಗಿದೆ. ಮಾರುಕಟ್ಟೆ ಸಾಲ ಶೇ. 47.5 ಏರಿಕೆಯಾಗಿ ರೂ. 52 ಲಕ್ಷ ಕೋಟಿ ಏರಿಕೆ ಕಂಡಿದೆ.
ಚಿನ್ನದ ಬಾಂಡ್ ಮೂಲಕ ಸಾಲ ಏರಿಕೆ
ಕೇಂದ್ರ ಸರ್ಕಾರ ಜೂನ್ 2014ರ ಕೊನೆಯವರೆಗೆ ಚಿನ್ನದ ಬಾಂಡ್ ಮೂಲಕ ಪಡೆಯಲಾದ ಸಾಲ ಶೂನ್ಯವಾಗಿತ್ತು. ಆದರೆ 2018ರವರೆಗೆ ಚಿನ್ನದ ಹಣಗಳಿಕೆ ಯೋಜನೆ ಸೇರಿದಂತೆ ಸಾಲದ ಮೊತ್ತ ರೂ. 9,089 ಕೋಟಿ ಆಗಿದೆ.
ವಿತ್ತಿಯ ಕೊರತೆ
ಪ್ರಸ್ತುತ ದೇಶದ ವಿತ್ತಿಯ ಕೊರತೆ ನವೆಂಬರ್ 2018ರ ತನಕ 7.17 ಲಕ್ಷ ಕೋಟಿಯಾಗಿದ್ದು, ಶೇ. 114.8 ರಷ್ಟಾಗಿದೆ. ಇಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲದ ವಿಸ್ತೃತ ವಿಶ್ಲೇಷಣೆ ನೀಡಲಾಗಿದ್ದು, 2010-2011ರಿಂದ ಇದೇ ರೀತಿ ಸರ್ಕಾರದ ಸಾಲದ ಬಗ್ಗೆ ಇರುವ ದಾಖಲೆಗಳನ್ನು ಪ್ರತಿ ವರ್ಷ ಬಿಡುಗಡೆ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.


Click it and Unblock the Notifications