For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ನಿಂದ ದೀರ್ಘಾವಧಿಗಾಗಿ ಹೊಸ ಪ್ರೀಪೇಯ್ಡ್ ಯೋಜನೆ

|

ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ನಿಯಾಮಿತ (ಬಿಎಸ್ಎನ್ಎಲ್) ಸಂಸ್ಥೆ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಆದರೆ, ಸದ್ಯಕ್ಕೆ ಇದು ಸೀಮಿತ ಟೆಲಿಕಾಂ ಸರ್ಕಲ್ ಗಳಲ್ಲಿ ಲಭ್ಯವಾಗಲಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಜಾರಿಗೆ ಬರಲಿದೆ. ಹೀಗಾಗಿ, ಕರ್ನಾಟಕದ ಗಡಿಭಾಗಗಳಲ್ಲಿ ಲಭ್ಯವಿರಲಿದೆ.

 

899 ರೂ. ಮೌಲ್ಯದ ಈ ಹೊಸ ಯೋಜನೆಯು 180ದಿನಗಳ ಅವಧಿಯನ್ನು ಹೊಂದಿದೆ. ದೀರ್ಘಾವಧಿ ಯೋಜನೆ ಹೊಂದಲು ಬಯಸುವವರಿಗೆ ಈ ಯೋಜನೆ ಸೂಕ್ತವಾಗಿದೆ.

 

ಬಿಎಸ್ಎನ್ಎಲ್ ರೀಚಾರ್ಚ್ ಮಾಡಿಸಿ, ಹೆಚ್ಚುವರಿ ಟಾಕ್ ಟೈಂ ಗಳಿಸಿ

ಈ ಹೊಸ ಯೋಜನೆಯಲ್ಲಿ ದಿನನಿತ್ಯ 1.5 ಜಿಬಿ ಹೈಸ್ಪೀಡ್ 4ಜಿ ಡೇಟಾದಂತೆ ಆರು ತಿಂಗಳಿಗೆ 270 ಜಿಬಿಯ ಡೇಟಾ ಒದಗಿಸಲಾಗುತ್ತದೆ. ಇದರೊಂದಿಗೆ ಸ್ಥಳೀಯ ಹಾಗೂ ಎಸ್.ಟಿ.ಡಿ. ಅನಿಯಮಿತ ಕರೆ ಸೌಲಭ್ಯವು ಸಿಗಲಿದೆ.

 ಬಿಎಸ್ಎನ್ಎಲ್ ನಿಂದ ದೀರ್ಘಾವಧಿಗಾಗಿ ಹೊಸ ಪ್ರೀಪೇಯ್ಡ್ ಯೋಜನೆ

ಆದರೆ ಈ ಆಫರ್ ನಲ್ಲಿರುವ ಅನ್ ಲಿಮಿಟೆಡ್ ಕರೆ ಸೌಲಭ್ಯ, ಮುಂಬೈ ಹಾಗೂ ಮುಂಬೈ ವೃತ್ತಕ್ಕೆ ಅನ್ವಯಿಸುವುದಿಲ್ಲ ಎಂದು ಬಿಎಸ್ಎನ್ಎಲ್ ಸ್ಪಷ್ಟಪಡಿಸಿದೆ. 50 ಎಸ್ಎಂಎಸ್ ಪ್ರತಿ ದಿನಕ್ಕೆ ಸಿಗಲಿದೆ.

ಜಿಯೋಗೆ ಸ್ಪರ್ಧೆ ನೀಡಬೇಕೆಂಬ ಉದ್ದೇಶದಿಂದ ಬಿಎಸ್ಎನ್ಎಲ್ ಈ ಆಫರ್ ಹೊರ ತಂದಿದ್ದು, ಜಿಯೋ 1,999 ಅರ್ಧವಾರ್ಷಿಕ ಯೋಜನೆಯಲ್ಲಿ 125 ಜಿಬಿ ಒಟ್ಟಾರೆ ಡೇಟಾ ಗ್ರಾಹಕರಿಗೆ ಸಿಗಲಿದೆ, ಜಿಯೋ ಆಪ್ ಚಂದಾದಾರಿಕೆ, ದಿನನಿತ್ಯ 100 ಎಸ್ಎಂಎಸ್ ಗಳು 180 ದಿನಗಳ ವ್ಯಾಲಿಡಿಟಿ ಇರಲಿದೆ.

ಬಿಎಸ್ಎನ್ಎಲ್ ಸಿಬ್ಬಂದಿಗೆ ಸಿಹಿಸುದ್ದಿ ನೀಡಲಿದೆ ಮೋದಿ ಸರ್ಕಾರ್!

ಬಿಎಸ್ಎನ್ಎಲ್ ನ 999 ಯೋಜನೆಗೆ ಪೂರಕವಾಗಿ 899 ರು ಯೋಜನೆ ಕಾರ್ಯನಿರ್ವಹಿಸಲಿದೆ. 999 ರು ಯೋಜನೆಯಲ್ಲಿ 181 ದಿನಗಳಿಗೆ 3.21 ಜಿಬಿ ಡೇಟಾ ಸಿಗಲಿದೆ.

English summary

BSNL Launches New Rs. 899 Prepaid Recharge, Offers 1.5GB Data Per Day for 180 Days

BSNL has reportedly now launched a new Rs. 899 prepaid recharge with a validity of 180 days. The new recharge is said to have been launched in select circles, and offer 1.5GB data per day.
Story first published: Tuesday, January 22, 2019, 18:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X