ಐಟಿಸಿ ಸಮೂಹ ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಬುಧವಾರ(ಜನವರಿ 23)ದಂದು ಪ್ರಕಟಿಸಿದೆ. ಡಿಸೆಂಬರ್ 31, 2018ಕ್ಕೆ ಕೊನೆಗೊಂಡ ತ್ರೈಮಾಸಿಕ ವರದಿಯಂತೆ ಐಟಿಸಿ ಸಂಸ್ಥೆಯ ಲಾಭದಲ್ಲಿ ಶೇ 3.84ರಷ್ಟು ಏರಿಕೆ ಕಂಡು 3,209.07 ಕೋಟಿ ರು ನಿವ್ವಳ ಲಾಭ ಬಂದಿದೆ.
ಕಳೆದ ವರ್ಷ ಅಕ್ಟೋಬರ್- ಡಿಸೆಂಬರ್ ತ್ರೈಮಾಸಿಕದಲ್ಲಿ 3,090.20 ಕೋಟಿ ರು ಲಾಭ ಮಾತ್ರ ಗಳಿಸಿತ್ತು ಎಂದು ಬಿಎಸ್ಇಗೆ ಐಟಿಸಿ ಮಾಹಿತಿ ನೀಡಿದೆ.
ಮಾರಾಟದ ನಿವ್ವಳ ಆದಾಯ ಶೇ 15.09ರಷ್ಟು ಏರಿಕೆ ಕಂಡು 11,340.15 ಕೋಟಿ ರು ಗಳಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 9,852.74 ಕೋಟಿ ರು ಆದಾಯ ಬಂದಿತ್ತು. ಒಟ್ಟಾರೆ, ಈ ತ್ರೈಮಾಸಿಕದಲ್ಲಿ ಖರ್ಚು ವೆಚ್ಚ 7,446.46 ಕೋಟಿ ರು ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 6,377.90 ಕೋಟಿ ರು ಆಗಿತ್ತು.
ಬುಧವಾರದಂದು ಬಿಎಸ್ಇಯಲ್ಲಿ ಐಟಿಸಿ ಷೇರುಗಳು ಶೇ 1.73ರಷ್ಟು ಹೆಚ್ಚಳವಾಗಿ 284.75 ರು ನಂತೆ ವ್ಯವಹಾರ ನಡೆಸಿತ್ತು.