ವಿಜಯ ಬ್ಯಾಂಕ್ 3ನೇ ತ್ರೈಮಾಸಿಕ ವರದಿ: ಲಾಭದಲ್ಲಿ ಶೇ 80ರಷ್ಟು ಹೆಚ್ಚಳ

ಸರ್ಕಾರಿ ಸ್ವಾಮ್ಯದ ವಿಜಯ ಬ್ಯಾಂಕ್ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಬುಧವಾರ (ಜನವರಿ 24)ದಂದು ಪ್ರಕಟಿಸಿದೆ. ಡಿಸೆಂಬರ್ 2018 ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಶೇ 80.2ರಷ್ಟು ಆದಾಯ ಏರಿಕೆ ಕಂಡು 143.38 ನಿವ್ವಳ ಲಾಭ ಬಂದಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 75.96ಕೋಟಿ ರು ಮಾತ್ರ ನಿವ್ವಳ ಲಾಭ ಗಳಿಸಿತ್ತು. 3ನೇ ತ್ರೈಮಾಸಿಕ ಅವಧಿ ಮುಕ್ತಾಯಕ್ಕೆ ಬ್ಯಾಂಕಿನ ಒಟ್ಟಾರೆ, ಆದಾಯವು 4,106.42 ಕೋಟಿ ರು ಗೇರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,450.81 ಕೋಟಿ ರು ಗಳಿಸಿತ್ತು ಎಂದು ಬಿಎಸ್ಇಗೆ ವಿಜಯ್ ಬ್ಯಾಂಕ್ ಹೇಳಿದೆ.

ಬ್ಯಾಂಕಿನ ಎನ್ ಪಿಎ ಕೊಂಚ ಇಳಿಮುಖವಾಗಿದ್ದು, ಈ ತ್ರೈಮಾಸಿಕದಲ್ಲಿ ಶೇ 6.14ರಷ್ಟಾಗಿದೆ. ಕಳೆದ ತ್ರೈಮಾಸಿಕದಲ್ಲಿ ಶೇ 6.17ರಷ್ಟಿತ್ತು. ಆದರೆ, ನಿವ್ವಳ ಎನ್ ಪಿಎ ಶೇ 4.08ರಷ್ಟು ಏರಿಕೆ ಕಂಡಿದೆ. ಕಳೆದ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ಈ ಪ್ರಮಾಣ ಶೇ 3.99ರಷ್ಟಿತ್ತು.

ವಿಜಯ ಬ್ಯಾಂಕ್ 3ನೇ ತ್ರೈಮಾಸಿಕ ವರದಿ: ಲಾಭದಲ್ಲಿ ಶೇ 80ರಷ್ಟು ಹೆಚ್ಚಳ

ಅನಪೇಕ್ಷಿತ ಸಾಲದ ಪ್ರಮಾಣ ದ್ವಿಗುಣಗೊಂಡಿದ್ದು, ಕಳೆದ ವರ್ಷ 333.26 ಕೋಟಿ ರು ಇದ್ದದ್ದು, ಈ ಬಾರಿ 582.22 ಕೋಟಿ ರುಗೇರಿದೆ.

ಏಪ್ರಿಲ್ 01, 2019ರೊಳಗೆ ಬ್ಯಾಂಕ್ ಆಫ್ ಬರೋಡಾ ಜತೆಗೆ ಸಂಪೂರ್ಣ ವಿಲೀನವಾಗಲಿದ್ದು, ಇದಕ್ಕೂ ಮುನ್ನ ಇದು ವಿಜಯ್ ಬ್ಯಾಂಕಿನ ಎರಡು ತ್ರೈಮಾಸಿಕ ವರದಿಗಳನ್ನು ಕಾಣಬಹುದಾಗಿದೆ. ಬುಧವಾರದಂದು ವಿಜಯ ಬ್ಯಾಂಕಿನ ಷೇರುಗಳು ಬಿಎಸ್ಇನಲ್ಲಿ 85 ಪೈಸೆ ಅಥವಾ 1.87% ಕುಸಿದು, 44.50ರು ನಂತೆ ವ್ಯವಹಾರ ನಡೆಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+