ನವದೆಹಲಿ, ಜನವರಿ 25: ಸರಕಾರ ಈಗಾಗಲೇ 1.25 ಲಕ್ಷಗಳಷ್ಟು ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಶಾಖೆಗಳನ್ನು ಆರಂಭಿಸಿದೆ. ಸದ್ಯದಲ್ಲೇ 1.5 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಪೇಮೆಂಟ್ಸ್ ಬ್ಯಾಂಕ್ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಮಾಧ್ಯಮ ಸಚಿವ ಮನೋಜ್ ಸಿನ್ಹಾ ಶುಕ್ರವಾರ ಹೇಳಿದ್ದಾರೆ.
ಬ್ಯಾಂಕ್ ಇಲ್ಲದ ಅಥವಾ ಕಡಿಮೆ ಸಂಖ್ಯೆಯ ಬ್ಯಾಂಕ್ ಗಳಿರುವ ಜನರಿಗಾಗಿಯೇ ಅಂಚೆ ಇಲಾಖೆಯಿಂದ ಇಂಡಿಯಾ ಪೋಸ್ಟ್ ಪೇಮಂಟ್ಸ್ ಬ್ಯಾಂಕ್ ಆರಂಭಿಸಲಾಗಿದೆ. ಅದರಲ್ಲಿ ಒಟ್ಟಾರೆ 1.25 ಲಕ್ಷಗಳಷ್ಟು ಶಾಖೆಗಳಿವೆ. ಶೀಘ್ರದಲ್ಲೇ ಅದು 1.5 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಶಾಖೆ ಹೊಂದಿರಲಿದೆ ಎಂದು ಅವರು ಹೇಳಿದ್ದಾರೆ.
ಪಾರ್ಸೆಲ್ ನೆಟ್ವರ್ಕ್ ಹೆಚ್ಚಿಸಲು ವೆಬ್ ತಾಣ ತೆರೆದ ಇಂಡಿಯಾ ಪೋಸ್ಟ್
ಕಳೆದ ವರ್ಷ ಸೆಪ್ಟೆಂಬರ್ 1ರಂದು IPPB ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. 3 ಲಕ್ಷದಷ್ಟಿರುವ ಪೋಸ್ಟ್ ಮನ್ ಹಾಗೂ ಗ್ರಾಮೀಣ್ ಡಾಕ್ ಸೇವರ್ ರನ್ನು ಸಜ್ಜುಗೊಳಿಸಿ, ಡಿಜಿಟಲ್ ಸಲಕರಣೆ ಮೂಲಕ ಪ್ರತಿಯೊಬ್ಬ ನಾಗರಿಕರ ಮನೆಮನೆಗೆ ಬ್ಯಾಂಕಿಂಗ್ ಹಣಕಾಸು ಸೇವೆ ತಲುಪಿಸಬೇಕು ಎಂಬ ಉದ್ದೇಶ ಅವರದು.

ಈ ಪೇಮೆಂಟ್ ಬ್ಯಾಂಕ್ ಮೂಲಕ ಒಂದು ಲಕ್ಷದ ತನಕ ಠೇವಣಿ ಸ್ವೀಕರಿಸಲಾಗುತ್ತದೆ. ಜತೆಗೆ ಮೊಬೈಲ್ ಪಾವತಿ/ ವರ್ಗಾವಣೆ/ ಖರೀದಿ ಮತ್ತು ಇತರ ಬ್ಯಾಂಕ್ ಸೇವೆಗಳಾದ ಎಟಿಎಂ/ಡೆಬಿಟ್ ಕಾರ್ಡ್ಸ್, ನೆಟ್ ಬ್ಯಾಂಕಿಂಗ್ ಮತ್ತು ಮೂರನೇ ವ್ಯಕ್ತಿಗೆ ಹಣ ವರ್ಗಾವಣೆ ಇತ್ಯಾದಿ ಸೌಲಭ್ಯ ಪಡೆಯಬಹುದು. ಇದರಡಿ ನೇರವಾಗಿ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ನೀಡುವುದಿಲ್ಲ.
"ಸ್ವಾತಂತ್ರ್ಯ ಬಂದಾಗಿನಿಂದ 1.3 ಲಕ್ಷದಷ್ಟು ಬ್ಯಾಂಕ್ ಶಾಖೆಗಳಿದ್ದವು. ನಾವು ಅದಕ್ಕಿಂತ ಹೆಚ್ಚು ಶಾಖೆಗಳನ್ನು ಒದಗಿಸುತ್ತೇವೆ" ಎಂದು ಸಿನ್ಹಾ ಹೇಳಿದ್ದಾರೆ.
More From GoodReturns

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?



Click it and Unblock the Notifications