For Quick Alerts
ALLOW NOTIFICATIONS  
For Daily Alerts

2020ರಿಂದ ಟಾಟಾ ನ್ಯಾನೋ ಕಾರು ಉತ್ಪಾದನೆ ಬಂದ್

|

ರತನ್ ಟಾಟಾ ಅವರ ಕನಸಿನ ಕಡಿಮೆ ಬಜೆಟ್ ಕಾರು 'ನ್ಯಾನೋ ಕಾರು' ಉತ್ಪಾದನೆ ಮುಂದಿನ ವರ್ಷದಿಂದ ಬಂದ್ ಆಗಲಿದೆ. ಟಾಟಾ ಮೋಟರ್ಸ್ ಭಾರತ್ ಸ್ಟೇಜ್-ಆರು (ಬಿಎಸ್- VI) ಪರಿಸರದ ಗುಣಮಟ್ಟಗಳಿಗೆ ಅನುಗುಣವಾಗಿ ನವೀಕರಿಸುವ ಯೋಜನೆ ಹೊಂದಿಲ್ಲ. 2020ರ ವೇಳೆಗೆ ಸಣ್ಣ ಕಾರಿನ ಉತ್ಪಾದನೆ ರದ್ದಾಗಲಿದೆ ಎನ್ನುವ ಸೂಚನೆ ಸಿಕ್ಕಿದೆ.

ಗುಜರಾತಿನಲ್ಲಿ ನ್ಯಾನೋ ಕಾರ್ ಉತ್ಪಾದನೆ ನಡೆಯುತ್ತಿದೆ. ಏಪ್ರಿಲ್ ನಲ್ಲಿ ಹೊಸ ಸುರಕ್ಷಾ ಮಾನದಂಡ ಜಾರಿಗೆ ಬರಲಿದೆ. ಅಕ್ಟೋಬರ್ ನಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ. 2020 ರ ವೇಳೆಗೆ ಬಿಎಸ್- VI ಜಾರಿಗೆ ಬರಲಿದೆ. ಎಲ್ಲ ಕಾರುಗಳ ನವೀಕರಣ ಸಾಧ್ಯವಿಲ್ಲ. ಇದಕ್ಕೆ ಹೆಚ್ಚುವರಿ ಹೂಡಿಕೆ ಮಾಡಲು ಕಂಪನಿ ಬಯಸುವುದಿಲ್ಲ. ಈ ಪಟ್ಟಿಯಲ್ಲಿ ನ್ಯಾನೋ ಕೂಡ ಸೇರಿದೆ ಎಂದು ಅವರು ಹೇಳಿದ್ದಾರೆ.

ದೇಶದ ಅಗ್ಗದ ಕಾರು ನ್ಯಾನೊ ಗೆ 'ಟಾಟಾ'

2009 ರಲ್ಲಿ ಭಾರತದ ಮಾರುಕಟ್ಟೆಗೆ ಬಂದ ನ್ಯಾನೋ ಕಾರು ಕೇವಲ 1 ಲಕ್ಷ ರೂಪಾಯಿಗೆ ಕಾರು ಗ್ರಾಹಕರ ಕೈ ಸೇರುವ ಭರವಸೆ ಸಿಕ್ಕಿದ್ದರಿಂದ ಕಡಿಮೆ ಬಜೆಟ್ ನ ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿತ್ತು. ಮಧ್ಯಮ ವರ್ಗದ ಜನತೆಯ ಕಾರು ಕೊಳ್ಳುವ ಕನಸು ಈಡೇರಿಸುವ ಉದ್ದೇಶಕ್ಕೆ ರತನ್ ಟಾಟಾ ಈ ಕಾರನ್ನು ಮಾರುಕಟ್ಟೆಗೆ ತಂದಿದ್ದರು. ಆದರೆ, ಗುಜರಾತಿನ ಸನದ್ ಘಟಕದಲ್ಲಿ ಈಗ ಉತ್ಪಾದನೆ ನಿಲ್ಲಿಸಬೇಕಿದೆ.

2020ರಿಂದ ಟಾಟಾ ನ್ಯಾನೋ ಕಾರು ಉತ್ಪಾದನೆ ಬಂದ್

ಜನವರಿ, ಏಪ್ರಿಲ್, ಅಕ್ಟೋಬರ್ ಹೀಗೆ ಕಾಲ ಕಾಲಕ್ಕೆ ಬಿಎಸ್ 6 ನಿಯಮಾವಳಿಯ ಪರೀಕ್ಷೆಗೆ ಒಳಪಡಬೇಕಿದೆ. ನ್ಯಾನೋ ಕಾರು ಈ ಸುರಕ್ಷತಾ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟವಾಗಿದ್ದು, ನ್ಯಾನೋ ಘಟಕದ ಮೇಲೆ ಹೂಡಿಕೆ ಮಾಡದಿರಲು ಟಾಟಾ ಮೋಟರ್ಸ್ ನಿರ್ಧರಿಸಿದೆ.

Read more about: tata ಟಾಟಾ
English summary

Tata Motors to bid adieu to Nano from April 2020

Tata Motors has no plans to invest and upgrade Ratan Tata's dream car Nano to meet BS-VI standards, a senior company official said Thursday indicating that the production and sales of the vehicle would stop from April 2020.
Story first published: Friday, January 25, 2019, 18:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X