ಇ-ವ್ಯಾಲೆಟ್ (e-wallets) ಫೆಬ್ರವರಿ ಅಂತ್ಯದ ವೇಳೆಗೆ ಬಂದ್ ಆಗಲಿದೆ!

ಇ-ವ್ಯಾಲೆಟ್ ಜಮಾನದಲ್ಲಿರುವವರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಇತ್ತೀಚಿನ ದಿನಗಳಲ್ಲಿ ಇ-ವ್ಯಾಲೆಟ್ ಬಳಸುವ ಗ್ರಾಹಕರು ಹೆಚ್ಚಿದ್ದಾರೆ. ಆದರೆ ಫೆಬ್ರವರಿ ತಿಂಗಳ ನಂತರ ಹಲವು ಇ-ವ್ಯಾಲೆಟ್ ಕಂಪನಿಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ.

ಇ-ವ್ಯಾಲೆಟ್ ಜಮಾನದಲ್ಲಿರುವವರಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಇತ್ತೀಚಿನ ದಿನಗಳಲ್ಲಿ ಇ-ವ್ಯಾಲೆಟ್ ಬಳಸುವ ಗ್ರಾಹಕರು ಹೆಚ್ಚಿದ್ದಾರೆ. ಆದರೆ ಫೆಬ್ರವರಿ ತಿಂಗಳ ನಂತರ ಹಲವು ಇ-ವ್ಯಾಲೆಟ್ ಕಂಪನಿಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚಾಗಿದೆ.

ಸರ್ಕಾರ ಇ ಕಾಮರ್ಸ್ ನಿಯಮಗಳನ್ನು ಬಿಗಿಗೊಳಿಸಿದ ನಂತರ ಕೆಲ ಇ-ವ್ಯಾಲೆಟ್ ಸಂಸ್ಥೆಗಳು ಅನಿಶ್ಚಿತತೆಗೆ ಸಿಲುಕಿವೆ. ಈ ಕಾರಣದಿಂದ ಲಕ್ಷಾಂತರ ಮೊಬೈಲ್ ವಾಲೆಟ್ ಗಳು ನಿಷ್ಕ್ರಿಯ ಆಗುವ ಸಾಧ್ಯತೆಯಿದೆ.

ಕೆವೈಸಿ ಕಡ್ಡಾಯ

ಕೆವೈಸಿ ಕಡ್ಡಾಯ

ಸುಪ್ರೀಂ ಕೋರ್ಟ್ ಗ್ರಾಹಕರ ಅಧಿಕೃತತೆಯನ್ನು ಸಾರುವ ಕೆವೈಸಿ ವ್ಯವಸ್ಥೆ ಕಡ್ಡಾಯ ಜಾರಿಗೊಳಿಸುವಂತೆ ನಿರ್ದೇಶನ ಮಾಡಿತ್ತು. ಇದರ ಆಧಾರದಲ್ಲಿ ಕೆವೈಸಿ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯ ನಡೆದಿತ್ತು. ಇ-ವ್ಯಾಲೆಟ್ ಬಳಕೆಗೆ ಕೆವೈಸಿ ಕಡ್ಡಾಯವಾಗಿರುತ್ತದೆ.

ಮೊಬೈಲ್ ಬಳಕೆದಾರರು ಅನರ್ಹರಾಗುವ ಸಾಧ್ಯತೆ

ಮೊಬೈಲ್ ಬಳಕೆದಾರರು ಅನರ್ಹರಾಗುವ ಸಾಧ್ಯತೆ

ಈ ಹಿಂದೆ ಪೂರ್ಣ ಪ್ರಮಾಣದಲ್ಲಿ ಕೆವೈಸಿ ಇಲ್ಲದಿದ್ದರೂ ಕೆಲವೊಂದು ದಾಖಲೆ ನೀಡಿದ್ದರೆ, ಒಟಿಪಿ ಆಧಾರದಲ್ಲಿ ಹಣ ವರ್ಗಾವಣೆ ಮಾಡಲು ಅವಕಾಶವಿತ್ತು. ಆದರೆ ಅದಕ್ಕೂ ನಿರ್ಬಂಧ ಹೇರಲಾಗುತ್ತಿದ್ದು, ಕೆವೈಸಿ ನೀಡದ ಮೊಬೈಲ್ ಬಳಕೆದಾರರು ಇ-ವ್ಯಾಲೆಟ್ ಸೇವೆಯನ್ನು ಬಳಸಿಕೊಳ್ಳಲು ಅನರ್ಹರಾಗುವ ಸಾಧ್ಯತೆ ಹೆಚ್ಚಾಗಿದೆ.

ಅಮೆಜಾನ್, ಪೇಟಿಎಂ ಮೇಲೆ ಹೆಚ್ಚು ಪ್ರಭಾವ

ಅಮೆಜಾನ್, ಪೇಟಿಎಂ ಮೇಲೆ ಹೆಚ್ಚು ಪ್ರಭಾವ

ಶೇ. 80 ರಷ್ಟು ಇ-ವ್ಯಾಲೆಟ್ ಬಳಕೆದಾರರು ಇನ್ನೂ ಕೆವೈಸಿ ಅನುಸರಿಸಬೇಕಿದೆ ಎಂದು ಅಂದಾಜಿಸಲಾಗಿದೆ. ಈ ಪ್ರಕ್ರಿಯೆಯು ಕಿರಿಕಿರಿಯೆನಿಸುತ್ತಿರುವುದರಿಂದ ಜನರು ಯುಪಿಐ (ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಗೆ ವರ್ಗಾವಣೆಯಾಗುತ್ತಿದ್ದಾರೆ. ಹೆಚ್ಚು ಗ್ರಾಹಕರನ್ನು ಹೊಂದಿರುವ ಅಮೆಜಾನ್, ಪೇಟಿಎಂನಂತಹ ಸಂಸ್ಥೆಗಳ ಮೇಲೆ ಇದು ಪ್ರಭಾವ ಬೀರಲಿದೆ. ಬ್ಯಾಂಕಿಂಗ್/ಇ-ವ್ಯಾಲೆಟ್ ವ್ಯವಹಾರ ಸುರಕ್ಷತೆಗೆ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳು

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+