ಕೇಂದ್ರ ಸರ್ಕಾರ ನಾಳೆ ಫೆಬ್ರವರಿ ೧ರಂದು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದು, ಗೃಹ ಸಾಲ, ರೈತರು, ಮಧ್ಯಮ ವರ್ಗದವರಿಗೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರ ನಾಳೆ ಫೆಬ್ರವರಿ ೧ರಂದು ಮಧ್ಯಂತರ ಬಜೆಟ್ ಮಂಡನೆ ಮಾಡಲಿದ್ದು, ಗೃಹ ಸಾಲ, ರೈತರು, ಮಧ್ಯಮ ವರ್ಗದವರಿಗೆ ಹೆಚ್ಚಿನ ಆದ್ಯತೆ ಸಿಗುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆಯ ಪೂರ್ವದಲ್ಲಿಯೇ ಪಿಎಂ ಅವಾಸ ಯೋಜನೆಯಡಿ ಗೃಹ ಸಾಲದ ಮೇಲೆ ಹೆಚ್ಚಿನ ಜನರು ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ.

ಗೃಹ ಸಾಲದ ಸಬ್ಸಿಡಿಗೆ ಸಂಬಂಧಿಸಿದಂತೆ ಹೊಸ ಆದೇಶ ಜಾರಿಗೆ ಬರುವ ನಿರೀಕ್ಷೆ ಇದ್ದು, ಪ್ರಧಾನ ಮಂತ್ರಿ ಆವಾಸ ಯೋಜನೆ ಮೂಲಕ ನಗರಗಳಲ್ಲಿ ಗೃಹ ಸಾಲ ಸಬ್ಸಿಡಿ ವಿತರಣೆಗೆ ನೂತನ ವಿಧಾನ ಅಳವಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಮೊದಲ ಬಾರಿ ಮನೆ ಖರೀದಿಸುವವರು ಸಬ್ಸಿಡಿ ಸಾಲ ಪಡೆಯುವುದಕ್ಕಾಗಿ ಬ್ಯಾಂಕ್ ಶಾಖೆಗಳಲ್ಲಿ ಕಾಯುವ ಬದಲು, ಸಬ್ಸಿಡಿ ಗೃಹ ಸಾಲ ಪಡೆಯಲು ಸುಲಭವಾಗುವ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ಸಂಭಾವ್ಯ ಫಲಾನುಭವಿಗಳನ್ನು ಗುರುತಿಸಿ ಪ್ರಮಾಣಪತ್ರಗಳನ್ನು ನೀಡಲು ಮುಂದಾಗಿದೆ. ಐಟಿ ಇಲಾಖೆ ಫಲಾನುಭವಿಗಳನ್ನು ಗುರುತಿಸಿದ ನಂತರ ಪ್ರಮಾಣ ಪತ್ರ ಪಡೆದು ಸಬ್ಸಿಡಿ ಸಹಿತ ಸಾಲ ಪಡೆಯಲು ಅದನ್ನು ಬಳಸಿಕೊಳ್ಳಬಹುದು.
ವಾರ್ಷಿಕವಾಗಿ ರೂ. 18 ಲಕ್ಷ ಆದಾಯ ಹೊಂದಿದವರು ಮೊದಲ ಬಾರಿ ಮನೆ ಖರೀದಿ, ಅಪಾರ್ಟ್‌ಮೆಂಟ್, ಮನೆ ನಿರ್ಮಾಣಕ್ಕಾಗಿ ಸೌಲಭ್ಯ ಪಡೆಯಬಹುದಾಗಿದೆ. 20 ವರ್ಷಗಳ ಅವಧಿಗೆ ರೂ. 6 ಲಕ್ಷವರೆಗೂ ಸಬ್ಸಿಡಿ ಪಡೆಯಬಹುದು. ರೂ. 2.5 -2.7 ಲಕ್ಷವರೆಗೆ ತಕ್ಷಣದ ರಿಯಾಯಿತಿ ಬಡ್ಡಿ ಸಬ್ಸಿಡಿ ಪಡೆಯಬಹುದು.


Click it and Unblock the Notifications