Q3 ತ್ರೈಮಾಸಿಕದಲ್ಲಿ ಲಾಭ: ಟೆಕ್ ಮಹೀಂದ್ರಾ ಷೇರುಗಳು ಏರಿಕೆ

ಪ್ರಮುಖ ಐಟಿ ಕಂಪನಿ ಟೆಕ್ ಮಹೀಂದ್ರಾ ಸಂಸ್ಥೆ ಷೇರುಗಳು ಬುಧವಾರದಂದು ಶೇ7 ರಷ್ಟು ಏರಿಕೆ ಕಂಡಿದೆ. ಡಿಸೆಂಬರ್ ಅಂತ್ಯಕ್ಕೆಕೊನೆಗೊಂಡ ತ್ರೈಮಾಸಿಕದಲ್ಲಿ ಟೆಕ್ ಮಹೀಂದ್ರಾಗೆ ಶೇ 27.5ರಷ್ಟು ನಿವ್ವಳ ಲಾಭ ದಾಖಲಾಗಿತ್ತು.

ಬಿಎಸ್ಇಯಲ್ಲಿ 782 ರು ನೊಂದಿಗೆ ವಹಿವಾಟು ಆರಂಭಿಸಿದ ಷೇರುಗಳು ಶೇ 8.13ರಷ್ಟು ಏರಿಕೆ ಕಂಡು 61 ರು ಹೆಚ್ಚುವರಿ ಗಳಿಸಿ, 811ರು ನಂತೆ ವ್ಯಾಪಾರ ಮಾಡಿತು. ಇದೇ ವೇಳೆ ಎನ್ ಎಸ್ ಇಯಲ್ಲಿ ಶೇ 8.04ರಷ್ಟು ಏರಿಕೆ ಕಂಡು 60.35ರು ಹೆಚ್ಚುವರಿ ಗಳಿಕೆ ಮೂಲಕ 811.35ರು ನಂತೆ ವಹಿವಾಟು ನಡೆಸಿತು. ಇದು ಈ ವರ್ಷದಲ್ಲಿ ಟೆಕ್ ಮಹೀಂದ್ರಾ ಷೇರುಗಳು ಕಂಡಿರುವ ಗರಿಷ್ಠ ಮೌಲ್ಯವಾಗಿದೆ.

ಟೆಕ್ ಮಹೀಂದ್ರಾಗೆ ಶುಭ ಸುದ್ದಿ, 'ಇಡಿ' ಜಪ್ತಿಗೆ ಬ್ರೇಕ್ ಹಾಕಿದ ಹೈಕೋರ್ಟ್

ಟೆಕ್ ಮಹೀಂದ್ರಾ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಮಂಗಳವಾರ ಪ್ರಕಟಿಸಿತ್ತು. ನಿವ್ವಳಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇ 27.5ರಷ್ಟು ಏರಿಕೆ ಕಂಡು 1,203 ಕೋಟಿ ರು ಹೆಚ್ಚುವರಿ ಗಳಿಕೆಯಾಗಿತ್ತು.

Q3 ತ್ರೈಮಾಸಿಕದಲ್ಲಿ ಲಾಭ: ಟೆಕ್ ಮಹೀಂದ್ರಾ ಷೇರುಗಳು ಏರಿಕೆ

ಒಟ್ಟಾರೆ, ಆದಾಯದಲ್ಲಿ ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 15ರಷ್ಟು ಏರಿಕೆ ಕಂಡು 8,944 ಕೋಟಿ ರು ಗಳಿಕೆ ದಾಖಲಿಸಿದೆ. ಈ ತ್ರೈಮಾಸಿಕ ಅವಧಿಯಲ್ಲಿ 3,451 ಉದ್ಯೋಗಿಗಳು ಸೇರಿದಂತೆ ಒಟ್ಟಾರೆ, ಉದ್ಯೋಗಿಗಳ ಸಂಖ್ಯೆ 1,21,842 ಆಗಿದೆ. 5 ಹೊಸ ಸಂಸ್ಥೆಗಳು ಸೇರಿದಂತೆ 935 ಕ್ಕೂ ಅಧಿಕ ಕ್ಲೈಂಟ್ ಗಳನ್ನು ಟೆಕ್ ಮಹೀಂದ್ರಾ ಹೊಂದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+