Karnataka Budget 2019 LIVE : ರೈತರಿಗಾಗಿ 'ಗೃಹಲಕ್ಷ್ಮಿ' ಯೋಜನೆ

ಬೆಂಗಳೂರು, ಫೆಬ್ರವರಿ 08: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ದೋಸ್ತಿ ಸರ್ಕಾರದ ಎರಡನೇ ಬಜೆಟ್ ಅನ್ನು ಮಂಡಿಸುದ್ದಾರೆ. ಇಂದಿನ ವಿಧಾನಸಭಾ ಅಧಿವೇಶನದ ಸಾಕಷ್ಟು ನಾಟಕೀಯ ಬದಲಾವಣೆಗಳಾಗಬಹುದು ಎಂಬ ನಿರೀಕ್ಷೆಗಳೆಲ್ಲ ಸುಳ್ಳಾಗಿದ್ದು, ಸುಸೂತ್ರವಾಗಿ ಬಜೆಟ್ ಮಂಡನೆಯಾಗಿದೆ.

ಕುಮಾರಸ್ವಾಮಿ ಬಜೆಟ್ ಮಂಡನೆ: ಬಿಜೆಪಿ ತಂತ್ರವೇನು?

ಬುಧವಾರದಿಂದ ಆರಂಭವಾಗಿದ್ದ ಬಜೆಟ್ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣಕ್ಕೂ ಅವಕಾಶ ನೀಡದೆ, ಯಾವುದೇ ರೀತಿಯ ಚರ್ಚೆಗೂ ಎಡೆಮಾಡಿಕೊಡದೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರು. ಸರ್ಕಾರದ ಬಳಿ ಬಹುಮತವಿಲ್ಲ, ಆದ್ದರಿಂದ ಬಜೆಟ್ ಮಂಡಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗಿ, ಬಿಜೆಪಿ ಶಾಸಕರು ಅಧಿವೇಶನಕ್ಕೆ ಅಡ್ಡಿಪಡಿಸಿದ್ದರು.

ಕಾಂಗ್ರೆಸ್ ಶಾಸಕರಿಗೆ ವ್ಹಿಪ್ ಜಾರಿಗೊಳಿಸಲಾಗಿದ್ದರೂ, ಕಾಂಗ್ರೆಸ್ ನ ಎಂಟಕ್ಕೂ ಹೆಚ್ಚು ಶಾಸಕರು ಮತ್ತು ಜೆಡಿಎಸ್ ನ ಓರ್ವ ಶಾಸಕ ಬುಧವಾರದಿಂದಲೂ ಗೈರಾಗಿದ್ದರು. ಇಂದು ಸಹ ಐವರು ಶಾಸಕರು ಗೈರಾಗಿದ್ದರೆ, ಬಜೆಟ್ ಮಂಡನೆಯಾಗುತ್ತಿದ್ದಂತೆಯೇ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿಬಿಟ್ಟರು.

ಬಜೆಟ್ ಅಧಿವೇಶನ ನಡೆಯಲು ಬಿಡದ ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Karnataka Budget 2019 LIVE :ರೈತರಿಗಾಗಿ 'ಗೃಹಲಕ್ಷ್ಮಿ' ಯೋಜನೆ

ಬಜೆಟ್ ನಲ್ಲಿ ರೈತರಿಗೆ ಮತ್ತು ಜಲಸಂಪನ್ಮೂಲ ಇಲಾಖಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ರೈತರ ಆಭರಣದ ಮೇಲೆ ಸಾಲ ನೀಡುವ ಗೃಹಲಕ್ಷ್ಮಿ ಯೋಜನಯಿಂದ ಹಿಡಿದು, ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಸದನದಲ್ಲಿ ಮುಂದುವರಿದ ಬಿಜೆಪಿ ಗದ್ದಲ, ಕಲಾಪ ಮುಂದೂಡಿಕೆ

ಕರ್ನಾಟಕ ಬಜೆಟ್ ಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಯನ್ನು ಗುಡ್ ರಿಟರ್ನ್ಸ್ ಕನ್ನಡ ಮತ್ತು ಒನ್ ಇಂಡಿಯಾ ಕನ್ನಡ ನೀಡಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+