For Quick Alerts
ALLOW NOTIFICATIONS  
For Daily Alerts

ಬೃಹತ್ ಮನಿ ಲಾಂಡರಿಂಗ್ ಹವಾಲ ಜಾಲ ಪತ್ತೆ! 20 ಸಾವಿರ ಕೋಟಿ ಅವ್ಯವಹಾರ

ಮನಿ ಲಾಂಡರಿಂಗ್ ನಡೆಸುತ್ತಿದ್ದ ಹವಾಲಾ ಅಪರೇಟರ್ಸ್ ಸುಮಾರು 20 ಸಾವಿರ ಕೋಟಿ ರೂಪಾಯಿ ಹಣದ ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.

|

ದೇಶದ ರಾಜಧಾನಿ ದೆಹಲಿಯಲ್ಲಿ ನಕಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಜಾಲಗಳನ್ನು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.

ಬೃಹತ್ ಮನಿ ಲಾಂಡರಿಂಗ್ ಹವಾಲ ಜಾಲ ಪತ್ತೆ! 20 ಸಾವಿರ ಕೋಟಿ ಅವ್ಯವಹಾರ

ಮನಿ ಲಾಂಡರಿಂಗ್ ನಡೆಸುತ್ತಿದ್ದ ಹವಾಲಾ ಅಪರೇಟರ್ಸ್ ಸುಮಾರು 20 ಸಾವಿರ ಕೋಟಿ ರೂಪಾಯಿ ಹಣದ ವಹಿವಾಟು ನಡೆಸಿದ್ದಾರೆ ಎನ್ನಲಾಗಿದೆ.

ಕಳೆದ ಕೆಲ ವಾರದಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ನಡೆಸಿದ್ದ ಸರಣಿ ದಾಳಿಗಳಲ್ಲಿ ಹಲವು ಅಕ್ರಮ ವ್ಯವಹಾರಗಳು ಬಯಲಿಗೆ ಬಂದಿವೆ. ಹಳೆ ದೆಹಲಿಯ ಅನೇಕ ಭಾಗಗಳ ವ್ಯವಹಾರ ಪ್ರದೇಶಗಳಲ್ಲಿ ತನಿಖೆಯನ್ನು ನಡೆಸಲಾಗಿದೆ. ಈ ಕಾರ್ಯಾಚರಣೆಯ ಮೂಲಕ ಪ್ರಮುಖವಾಗಿ ಮೂರು ಗುಂಪುಗಳ ವ್ಯವಹಾರಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಯಾ ಬಾಜಾರ್ ಪ್ರದೇಶದಲ್ಲಿ ದಾಳಿ ನಡೆಸಿದ ವೇಳೆ ಸುಮಾರು 18 ಸಾವಿರ ಕೋಟಿ ಮೌಲ್ಯದ ನಕಲಿ ಬಿಲ್‌ ಗಳು ಪತ್ತೆಯಾಗಿವೆ. ಹನ್ನೆರಡಕ್ಕೂ ಹೆಚ್ಚು ಘಟಕಗಳ ಮೂಲಕ ನಕಲಿ ದಂಧೆ ನಡೆಸುತ್ತಿದ್ದು, ಆರೋಪಿಗಳು ಹಲವು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ನಕಲಿ ರಫ್ತುಗಳ ಪ್ರಾಥಮಿಕ ಅಂದಾಜು ರೂ 1,500 ಕೋಟಿಗಿಂತ ಹೆಚ್ಚಾಗಿದೆ. 20 ಸಾವಿರ ಕೋಟಿ ರೂ. ಮೊತ್ತದ ತೆರಿಗೆ ವಂಚನೆ ಪತ್ತೆಯಾಗಿದೆ ಎಂದು ಇಲಾಖೆ ಹೇಳಿದೆ.

English summary

I-T Department unearths Rs 20,000 crore hawala, money laundering racket in Delhi

The Income Tax Department on Monday claimed to have busted a nexus of hawala operators who were running a money laundering racket in the national capital estimated to be worth Rs 20,000 crore.
Story first published: Tuesday, February 12, 2019, 11:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X