ಏರ್ ಡೆಕ್ಕನ್ಏವಿಯೇಷನ್ಲಿಮಿಟೆಡ್(ಡಿಎಎಲ್) ಸ್ಥಾಪಕ, ಕನ್ನಡಿಗ ಜಿ. ಆರ್. ಗೋಪಿನಾಥ್ಅವರ ಮೇಲೆ ಸಿಬಿಐ ಸಂಸ್ಥೆ ಕಣ್ಣು ನೆಟ್ಟಿದೆ ಎಂದು ಎಕಾನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಎಸ್ ಬಿಐ ಸೇರಿದಂತೆ ವಿವಿಧ ಬ್ಯಾಂಕುಗಳಿಂದ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್ನಿನಲ್ಲಿ ನೆಲೆಸಿರುವ ವಿಜಯ್ಮಲ್ಯ ಅವರಿಗೆ ಸಾಲ ಪಡೆಯಲು ಜಿಆರ್ ಗೋಪಿನಾಥ್ಅವರು ಈ ಹಿಂದೆ ನೆರವಾಗಿದ್ದೇ ಅವರಿಗೆ ಮುಳುವಾಗುವ ಸಾಧ್ಯತೆಯಿದೆ.
2007ರಲ್ಲಿ ಏರ್ ಡೆಕ್ಕನ್ ಸಂಸ್ಥೆಯನ್ನು ಮಲ್ಯ ಅವರಿಗೆ ಮಾರಾಟ ಮಾಡಿದ ಗೋಪಿನಾಥ್ ಅವರು ಕಿಂಗ್ ಫಿಷರ್ ಏರ್ ಲೈನ್ಸ್ ನ ನಿರ್ದೇಶಕರಾಗಿದ್ದರು.

ಡೆಕ್ಕನ್ ಏವಿಯೇಷನ್ಲಿಮಿಟೆಡ್ ನ ಎಸ್ಬಿಐನಿಂದ 340 ಕೋಟಿ ರೂ. ಸಾಲ ಸಿಕ್ಕಿತ್ತು. ಈ ಸಾಲ ಪಡೆಯಲು ಜಿ. ಆರ್ ಗೋಪಿನಾಥ್ ಅವರು ಸಹಿ ಹಾಕಿದ್ದರು. ಆದರೆ, ಡೆಕ್ಕನ್ ಏವಿಯೇಷನ್ ಅನ್ನು ಕಿಂಗ್ಫಿಶರ್ ಮಾರಾಟ ಮಾಡಿದ ಬಳಿಕ 2008 ರಲ್ಲಿ ಗೋಪಿನಾಥ್ ಅವರಿಗೆ ಕಿಂಗ್ ಫಿಶರ್ನಿಂದ 30 ಕೋಟಿ ರೂ ನೀಡಲಾಗಿತ್ತು. ಈ ಹಣಕಾಸು ವ್ಯವಹಾರದ ಬಗ್ಗೆ ವಿಚಾರಣೆ ನಡೆಸುವ ಸಾಧ್ಯತೆಯಿದೆ.
ಇದೇ ವೇಳೆಯಲ್ಲಿ ಎಸ್ಬಿಐನಿಂದ ಕಿಂಗ್ಫಿಷರ್ ಏರ್ಲೈನ್ಸ್ಗೆ 29.96 ಕೋಟಿ ರೂ.ಗಳನ್ನ ಫೆಬ್ರವರಿ 1 2008 ರಂದು ಬಿಡುಗಡೆ ಮಾಡಲಾಗಿದೆ. ಗುರುತರವಾದ ಆರ್ಥಿಕ ವಂಚನೆಗಳ ತನಿಖಾಧಿಕಾರಿಗಳು 2017ರಲ್ಲಿ ನೀಡಿದ ವರದಿಯಂತೆ, 30 ಕೋಟಿ ರೂ ಹಣ ಬಿಡುಗಡೆ ಮಾಡಿರುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಗೋಪಿನಾಥ್ಅವರು ಈ ಬಗ್ಗೆ ಹೈಕೋರ್ಟ್ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.
ಡೆಕ್ಕನ್ ಏವಿಯೇಷನ್ ನಲ್ಲಿ ಅತಿ ಕಡಿಮೆ ಪಾಲು ಹೊಂದಿದ್ದೆ ಎಂದು ಗೋಪಿನಾಥ್ ಅವರು ಸಮರ್ಥನೆ ನೀಡಿದ್ದರು. 2016ರಲ್ಲಿ ಮಲ್ಯ ವಿರುದ್ಧ ಹಾಕಲಾದ ಮೊದಲ ಎಫ್ಐಆರ್ ನಲ್ಲಿ ಎಸ್ ಬಿಐನಿಂದ 1600 ಕೋಟಿ ರು, ಪಿಎನ್ ಬಿ ಹಾಗೂ ಐಡಿಬಿಐ ನಿಂದ ತಲಾ 800 ಕೋಟಿ ರು, ಬ್ಯಾಂಕ್ ಆಫ್ ಇಂಡಿಯಾದಿಂದ 650 ಕೋಟಿ ರು, ಬ್ಯಾಂಕ್ ಆಫ್ ಬರೋಡಾ 550 ಕೋಟಿ ರು ಹಾಗೂ ಸೆಂಟಲ್ ಬ್ಯಾಂಕ್ ಆಫ್ ಇಂಡಿಯಾದಿಂದ 410 ಕೋಟಿ ರು ಪಡೆದಿರುವುದಾಗಿ ಉಲ್ಲೇಖಿಸಲಾಗಿದೆ.


Click it and Unblock the Notifications