For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ 3 ದಿನ ಮುಷ್ಕರ: ಕಾರಣ ಹಾಗು ಬೇಡಿಕೆಗಳೇನು ಗೊತ್ತೆ..?

ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯಿಂದಾಗಿ ಬಿಎಸ್ಎನ್ಎಲ್ ಸಂಸ್ಥೆ ನಷ್ಟದ ಹಾದಿಯಲ್ಲಿದ್ದು, ಕಂಪನಿಯನ್ನು ಮುಚ್ಚಲು ಸರ್ಕಾರ ಚಿಂತನೆ ನಡೆಸುತ್ತಿರುವ ನಡುವೆಯೇ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ.

|

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ಉದ್ಯೋಗಿಗಳು ಹಾಗು ಅಧಿಕಾರಿಗಳು ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಫೆಬ್ರವರಿ 18 ರಿಂದ ಮುಷ್ಕರ ಕೈಗೊಳ್ಳಲಿದ್ದಾರೆ

ಖಾಸಗಿ ಕಂಪನಿಗಳ ತೀವ್ರ ಪೈಪೋಟಿಯಿಂದಾಗಿ ಬಿಎಸ್ಎನ್ಎಲ್ ಸಂಸ್ಥೆ ನಷ್ಟದ ಹಾದಿಯಲ್ಲಿದ್ದು, ಕಂಪನಿಯನ್ನು ಮುಚ್ಚಲು ಸರ್ಕಾರ ಚಿಂತನೆ ನಡೆಸುತ್ತಿರುವ ನಡುವೆಯೇ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಜಿಯೋ ಪ್ರವೇಶಾತಿ ಬಳಿಕ ಬಿಎಸ್ಎನ್ಎಲ್ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದ್ದು, ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಾಗಿದೆ. ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ಭಾರಿ ಸಂಖ್ಯೆಯ ಸಿಬ್ಬಂದಿಗಳಿದ್ದು, ಅದರಲ್ಲಿಯೂ ಹಿರಿಯರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇದೆ.

ವಿವಿಧ ಬೇಡಿಕೆಗಾಗಿ 3 ದಿನ ಮುಷ್ಕರ

ವಿವಿಧ ಬೇಡಿಕೆಗಾಗಿ 3 ದಿನ ಮುಷ್ಕರ

ಫೆಬ್ರವರಿ 18-20 ಮೂರು ದಿನಗಳವರೆಗೆ ಬಿಎಸ್ಎನ್ಎಲ್ ನೌಕರರು ಮುಷ್ಕರ ನಡೆಸಲಿದ್ದಾರೆ.
- ವೇತನ ಪರಿಷ್ಕರಣೆ
- 4 ಜಿ ತರಂಗಾಂತರಗಳನ್ನು ಬಿಎಸ್ಎನ್ಎಲ್ ಗೆ ಹಂಚಿಕೆ ಮಾಡಲು ಒತ್ತಾಯ
- ಬಿಎಸ್ಎನ್ಎಲ್ ಖಾಸಗೀಕರಣಕ್ಕೆ ವಿರೋಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಿದ್ದಾರೆ.

ಸ್ವಯಂ ನಿವೃತ್ತಿ ಯೋಜನೆ?

ಸ್ವಯಂ ನಿವೃತ್ತಿ ಯೋಜನೆ?

ಪ್ರಸ್ತುತ ಬಿಎಸ್ಎನ್ಎಲ್ ತುಂಬಾ ನಷ್ಟದಲ್ಲಿದ್ದು, ಇದರ ಪುನಶ್ಚೇತನಕ್ಕಾಗಿ ನಿವೃತ್ತಿ ವಯಸ್ಸನ್ನು ಇಳಿಕೆ ಮಾಡಲು ಹಾಗೂ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ನಿವೃತ್ತಿ ವಯಸ್ಸನ್ನು ೫೮ಕ್ಕೆ ಇಳಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಯೋಜನೆ ಜಾರಿಯಾದರೆ?

ಯೋಜನೆ ಜಾರಿಯಾದರೆ?

ಸ್ವಯಂ ನಿವೃತ್ತಿ ಯೋಜನೆ ಜಾರಿಯಾದರೆ ೫೪ ಸಾವಿರ ಉದ್ಯೋಗಗಳು ಕಡಿತವಾಗಲಿವೆ. ಇದು ಕೂಡ ಉದ್ಯೋಗಿಗಳ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಜೊತೆಗೆ ಖಾಸಗೀಕರಣ ಮಾಡುವ ಭೀತಿಯೂ ಕಾಡುತ್ತಿದೆ. ಮುಷ್ಕರಕ್ಕೆ ದೇಶದ ವಿವಿಧ ಕಾರ್ಮಿಕ ಸಂಘಟನೆಗಳು ಬೆಂಬಲ ಸೂಚಿಸಿವೆ.

ಮೂರು ಆಯ್ಕೆಗಳು?

ಮೂರು ಆಯ್ಕೆಗಳು?

ಬಿಎಸ್ಎನ್ಎಲ್ ಗಾಗಿ ಸರ್ಕಾರ ಈ ಮೂರು ಅಂಶಗಳನ್ನು ಪರಿಗಣಿಸುತ್ತಿದೆ ಎಂಬುದನ್ನು ನಾವು ಗಮನಿಸಬಹುದು.
ಮುಚ್ಚುವಿಕೆ: ಬಿಎಸ್ಎನ್ಎಲ್ ಮತ್ತು ಅದರ ಎಲ್ಲ ಕಾರ್ಯಚರಣೆಗಳನ್ನು ಸ್ಥಗಿತಗೊಳಿಸದಂತಾಗುತ್ತದೆ.
ಕಾರ್ಯತಂತ್ರದ ಹೂಡಿಕೆ: ಬಿಎಸ್ಎನ್ಎಲ್ ಚಾಲನೆಯಲ್ಲಿರುವ ಸಲುವಾಗಿ ಖಾಸಗಿ ಸಂಸ್ಥೆಗಳ ಪ್ರವೇಶವ ಕ್ಕೆ ಅವಕಾಶ ನೀಡಬೇಕಾಗುತ್ತದೆ.
ಫಂಡ್: ಸಂಸ್ಥೆಯ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಸರಕಾರದಿಂದ ಹೆಚ್ಚಿನ ಹಣವನ್ನು ಅಳವಡಿಸುವುದು. ಬಿಎಸ್ಎನ್ಎಲ್ ಮುಚ್ಚಲು ಚಿಂತನೆ! ಉದ್ಯೋಗಿಗಳ ಭವಿಷ್ಯವೇನು?

Read more about: bsnl telecom business money strike
English summary

BSNL 3 day strike: What are the Reasons and Demands?

BSNL employees have announced a three-day nationwide strike.
Story first published: Friday, February 15, 2019, 10:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X