ಅಗ್ಗದ ಪ್ಲಾನ್ ಗಳನ್ನು ಪರಿಚಯಿಸುವುದರಲ್ಲಿ ಜಿಯೋ ಸದಾ ಮುಂದಿರುತ್ತದೆ! ಜಿಯೋ ಪ್ರವೇಶಾತಿಯ ಪರಿಣಾಮ ಇನ್ನಿತರ ಟೆಲಿಕಾಂ ಕಂಪನಿಗಳ ಮೇಲೆ ಬಿದ್ದಿದ್ದು, ಬಿಎಸ್ಎನ್ಎಲ್ ಮುಚ್ಚುವ ಹಂತಕ್ಕೆ ತಲುಪಿರುವುದು ಉದ್ಯೋಗಿಗಳ ಆತಂಕಕ್ಕೆ ಕಾರಣವಾಗಿದೆ.
ಅಗ್ಗದ ಪ್ಲಾನ್ ಗಳನ್ನು ಪರಿಚಯಿಸುವುದರಲ್ಲಿ ಜಿಯೋ ಸದಾ ಮುಂದಿರುತ್ತದೆ! ಜಿಯೋ ಪ್ರವೇಶಾತಿಯ ಪರಿಣಾಮ ಇನ್ನಿತರ ಟೆಲಿಕಾಂ ಕಂಪನಿಗಳ ಮೇಲೆ ಬಿದ್ದಿದ್ದು, ಬಿಎಸ್ಎನ್ಎಲ್ ಮುಚ್ಚುವ ಹಂತಕ್ಕೆ ತಲುಪಿರುವುದು ಉದ್ಯೋಗಿಗಳ ಆತಂಕಕ್ಕೆ ಕಾರಣವಾಗಿದೆ.
ಟೆಲಿಕಾಂ ಕಂಪನಿಗಳು ಹೊಸ ಗ್ರಾಹಕರನ್ನು ಸೆಳೆಯಲು ಮತ್ತು ಈಗಾಗಲೇ ಇರುವ ಗ್ರಾಹಕರನ್ನು ಉಳಿಸಲು ಹೊಸ ಹೊಸ ಯೋಜನೆಗಳನ್ನು ಘೋಷಿಸುತ್ತಿವೆ. ಇದರಲ್ಲಿ ಜಿಯೋ ಮೊದಲ ಸಾಲಿನಲ್ಲಿದೆ.
ದೀರ್ಘಾವಧಿ ಯೋಜನೆಗಾಗಿ..
ದೀರ್ಘಾವಧಿ ಯಾವ ಯೋಜನೆಗಾಗಿ ಉತ್ತಮ ಎಂದು ನೀವು ಚಿಂತಿಸುತ್ತಿದ್ದರೆ ಹಾಗು ನೀವು ಜಿಯೋ ಗ್ರಾಹಕರಾಗಿದ್ದರೆ ಈ ಯೋಜನೆಯನ್ನು ಆಯ್ಕೆ ಮಾಡಬಹುದು. ಪದೇ ಪದೇ ರೀಚಾರ್ಜ್ ಮಾಡುವ ಬದಲು ದೀರ್ಘಾವಧಿ ಕಾಲದ ರೀಚಾರ್ಜ್ ಬಯಸಿದ್ದರೆ ಜಿಯೋದ ರೂ. 1699 ಹಾಗು ರೂ. 399 ಪ್ಲಾನ್ ಉತ್ತಮ ಆಯ್ಕೆಯಾಗಬಲ್ಲದು.
ರೂ. 1699 ಪ್ಲಾನ್
ಜಿಯೋ ಪರಿಚಯಿಸಿರುವ ಈ ಯೋಜನೆಯಡಿ ಪ್ರತಿ ದಿನ 1.5 ಜಿಬಿ ಡೇಟಾ ಲಭ್ಯವಿರುತ್ತದೆ. ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಕರೆ ಸೌಲಭ್ಯ (ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್) ಸಿಗಲಿದೆ. ಪ್ರತಿ ದಿನ 100 ಎಸ್ಎಂಎಸ್ ಇರಲಿದ್ದು, ಒಂದು ವರ್ಷದ (365 ದಿನ) ವ್ಯಾಲಿಡಿಟಿ ಹೊಂದಿದೆ. ಈ ಯೋಜನೆಯಲ್ಲಿ ಒಟ್ಟು 547.5 ಜಿಬಿ ಡೇಟಾ ಲಭ್ಯವಾಗಲಿದೆ.
ರೂ. 399 ಪ್ಲಾನ್
ಇದು ಎಲ್ಲರ ಅಚ್ಚುಮೆಚ್ಚಿನ ಯೋಜನೆಯಾಗಿದೆ. ಜಿಯೋ ರೂ. 399 ಪ್ಲಾನ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 1.5 ಜಿಬಿ ಡೇಟಾ , ಸ್ಥಳೀಯ, ಎಸ್ಟಿಡಿ ಮತ್ತು ರೋಮಿಂಗ್ ಅನಿಯಮಿತ ಕರೆಗಳು, 100 ಎಸ್ಎಂಎಸ್ ಸೌಲಭ್ಯ ಒದಗಿಸಲಿದೆ. ಇದು ಹೆಚ್ಚು ಕಡಿಮೆ ಮೂರು ತಿಂಗಳ (84 ದಿನಗಳ) ವ್ಯಾಲಿಡಿಟಿ ಹೊಂದಿದೆ. ಈ ಪ್ಲಾನ್ ನಲ್ಲಿ ಗ್ರಾಹಕರಿಗೆ ಒಟ್ಟೂ 126 ಜಿಬಿ ಡೇಟಾ ಸಿಗಲಿದೆ.


Click it and Unblock the Notifications