ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನ (ಎಂಎಫ್‌ಎನ್) ಹಿಂದಕ್ಕೆ ಪಡೆಯಲಾಗಿತ್ತು.

ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನ (ಎಂಎಫ್‌ಎನ್) ಹಿಂದಕ್ಕೆ ಪಡೆಯಲಾಗಿತ್ತು. ಇದೀಗ ಅದರ ಬೆನ್ನಲ್ಲೇ ಪಾಕಿಸ್ತಾನದಿಂದ ಅಮದಾಗುವ ಎಲ್ಲ ಸರಕುಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಭಾರತ ಶೇ. 200 ರಷ್ಟು ಏರಿಕೆ ಮಾಡಿ ಬಿಸಿ ಮುಟ್ಟಿಸಿದೆ.
ಎಲ್ಲ ಸರಕುಗಳ ಮೇಲೆ ಕಸ್ಟಮ್ಸ್ ಸುಂಕವನ್ನು ಭಾರತ ಶೇ. 200 ರಷ್ಟು ಹೆಚ್ಚಿಸಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ತೃಪ್ತಿ ನೀಡಿದ್ದು, ತಕ್ಷಣದಲ್ಲಿ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ ಎಂದು ಆದಾಯ ಇಲಾಖೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.
2017-18ರಲ್ಲಿ ಎರಡು ದಕ್ಷಿಣ ಏಷ್ಯಾದ ನೆರೆಹೊರೆ ದೇಶಗಳ ನಡುವಿನ ಒಟ್ಟು ವ್ಯಾಪಾರವು ಶೇ. 6ರಷ್ಟು ಹೆಚ್ಚಿದ್ದು, 2.4 ಶತಕೋಟಿಯಷ್ಟಿದೆ. 1.9 ಶತಕೋಟಿ ಡಾಲರ್ ರಫ್ತು ಮತ್ತು ಪಾಕಿಸ್ತಾನದಿಂದ 500 ದಶಲಕ್ಷ ಡಾಲರ್ ಆಮದು ಪ್ರಮಾಣ ಹೊಂದಿದೆ.
ಭಾರತವು ಸಿಮೆಂಟ್, ತಾಜಾ ಹಣ್ಣು, ಪೆಟ್ರೋಲಿಯಂ ಉತ್ಪನ್ನಗಳು, ಖನಿಜ, ಅದಿರು ಮತ್ತು ಚರ್ಮದ ಉತ್ಪನ್ನಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದರಿಂದ ಪಾಕಿಸ್ತಾನದ ಮೇಲೆ ರೂ. 3,482 ಕೋಟಿ ಆರ್ಥಿಕ ಹೊರೆ ಬೀಳಬಹುದು ಎಂದು ಅಂದಾಜಿಸಿಲಾಗಿದೆ.
ಪಾಕಿಸ್ತಾನಕ್ಕೆ ಪರಮಾಪ್ತ ರಾಷ್ಟ್ರ ಸ್ಥಾನಮಾನ (ಎಂಎಫ್‌ಎನ್) ರದ್ದು ಮಾಡುವ ಭಾರತದ ನಿರ್ಧಾರದಿಂದ ಭಾವನಾತ್ಮಕ ಪರಿಣಾಮವಾಗಬಹುದೇ ಹೊರತು ಉಭಯ ರಾಷ್ಟ್ರಗಳ ವಾಣಿಜ್ಯ, ವಹಿವಾಟಿನ ಮೇಲೆ ಭಾರಿ ಪರಿಣಾಮವೇನೂ ಆಗುವುದಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಎರಡೂ ರಾಷ್ಟ್ರಗಳ ನಡುವಿನ ವಾರ್ಷಿಕ ವಹಿವಾಟು ಮೊತ್ತ ಅಂದಾಜು ರೂ. 21,385 ಕೋಟಿ ಮೀರುವುದಿಲ್ಲ. ಇದರಿಂದ ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ ಎನ್ನುವುದು ತಜ್ಞರ ಅಭಿಮತ. ಪಾಕಿಸ್ತಾನದಿಂದ ಆಮದು ಕಡಿತಗೊಳಿಸಿ ಆ ದೇಶಕ್ಕೆ ರಫ್ತು ಪ್ರಮಾಣ ಹೆಚ್ಚಿಸುವತ್ತ ಭಾರತ ಮುಂದಾಗಬೇಕು ಎಂದು ಭಾರತೀಯ ವಿದೇಶ ವಾಣಿಜ್ಯ ಸಂಸ್ಥೆಯ (ಐಐಎಫ್‌ಟಿ) ಅಂತರರಾಷ್ಟ್ರೀಯ ವಾಣಿಜ್ಯ ತಜ್ಞ ಮೋಹನ ಜೋಶಿ ಸಲಹೆ ನೀಡಿದ್ದಾರೆ.


Click it and Unblock the Notifications