ಜಿಯೋಗೆ ಟಕ್ಕರ್! ಏರ್ಟೆಲ್ 1000 GB ಬೋನಸ್ ಡೇಟಾ ಆಫರ್!!

ರಿಲಾಯನ್ಸ್ ಜಿಯೋ ಗಿಗಾಫೈಬರ್ ಪರಿಚಯಿಸುತ್ತಿದ್ದಂತೆ ಉಳಿದ ಟೆಲಿಕಾಂ ಕಂಪನಿಗಳಿಗೆ ಶಾಕ್ ಕೊಟ್ಟಂತಾಗಿದೆ. ಏರ್ಟೆಲ್ ಜಿಯೋ ಗಿಗಾಫೈಬರ್ ಗೆ ಟಕ್ಕರ್ ನೀಡಲು ಮುಂದಾಗಿದೆ.

ಮುಕೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಕಂಪನಿ ಜಿಯೋ ಪ್ರವೇಶಾತಿಯು ಇನ್ನುಳಿದ ಕಂಪನಿಗಳ ಮೇಲೆ ಭಾರೀ ಹೊಡೆತವನ್ನೇ ನೀಡಿದೆ! ಉಚಿತ ಮತ್ತು ಅಗ್ಗದ ಕರೆ, ಡೇಟಾದೊಂದಿಗೆ ಪ್ರವೇಶ ಮಾಡಿದ ಜಿಯೋ ಬ್ರಾಡ್ಬ್ಯಾಂಡ್ ಸೇವೆಯನ್ನೂ ಪರಿಚಯಿಸಿದೆ.

ಜಿಯೋ ಗಿಗಾಫೈಬರ್ ಬ್ರಾಡ್ಬ್ಯಾಂಡ್ ನಂತರ ಏರ್ಟೆಲ್ ಒಳಗೊಂಡಂತೆ ಇನ್ನಿತರ ಕಂಪನಿಗಳ ಮೇಲೆ ಭಾರೀ ಹೊಡೆತ ಬಿದ್ದಂತಾಗಿದೆ.

ಜಿಯೋಗೆ ಟಕ್ಕರ್

ಜಿಯೋಗೆ ಟಕ್ಕರ್

ರಿಲಾಯನ್ಸ್ ಜಿಯೋ ಗಿಗಾಫೈಬರ್ ಪರಿಚಯಿಸುತ್ತಿದ್ದಂತೆ ಉಳಿದ ಟೆಲಿಕಾಂ ಕಂಪನಿಗಳಿಗೆ ಶಾಕ್ ಕೊಟ್ಟಂತಾಗಿದೆ. ಏರ್ಟೆಲ್ ಜಿಯೋ ಗಿಗಾಫೈಬರ್ ಗೆ ಟಕ್ಕರ್ ನೀಡಲು ಮುಂದಾಗಿದೆ. ಈಗಾಗಲೇ ಬಿಎಸ್ಎನ್ಎಲ್ ತನ್ನ ಬ್ರಾಡ್ಬ್ಯಾಂಡ್ ಸೇವೆಯಲ್ಲಿ ಕೆಲ ಬದಲಾವಣೆ ಮಾಡಿದ್ದು, ಇದೀಗ ಏರ್ಟೆಲ್ ಸರದಿ. ಏರ್ಟೆಲ್ ತನ್ನ ಬ್ರಾಡ್ಬ್ಯಾಂಡ್ ನ ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಬೋನಸ್ ಡೇಟಾ ಘೋಷಣೆ ಮಾಡಿದೆ.

1000 ಜಿಬಿ ಬೋನಸ್ ಡೇಟಾ

1000 ಜಿಬಿ ಬೋನಸ್ ಡೇಟಾ

ರೂ. 999 ಪ್ಲಾನ್ ಅಡಿಯಲ್ಲಿ ಗ್ರಾಹಕರಿಗೆ 1000 ಜಿಬಿ ಡೇಟಾ ಬೋನಸ್ ರೂಪದಲ್ಲಿ ಸಿಗಲಿದೆ.
ರೂ. 999 ಪ್ಲಾನ್ 250GB ಬ್ರಾಡ್ಬ್ಯಾಂಡ್ ಡೇಟಾವನ್ನು ನೀಡುತ್ತದೆ. ಭಾರತದಾದ್ಯಂತ ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗೆ ಉಚಿತ ಧ್ವನಿ ಕರೆಗಳನ್ನು ಒದಗಿಸುತ್ತದೆ. ಏರ್ಟೆಲ್ ಈ ಯೋಜನೆಯಲ್ಲಿ 1000GB ಬೋನಸ್ ಡೇಟಾವನ್ನು ನೀಡುತ್ತಿದೆ. ಏರ್ಟೆಲ್ ರೂ. 799 ಅಥವಾ ಅದಕ್ಕೂ ಮೇಲ್ಪಟ್ಟ ಯೋಜನೆಗಳಿಗೆ ಆಫರ್ ಕೊಡುತ್ತಿದೆ.

500 ಜಿಬಿ ಡೇಟಾ ಬೋನಸ್

500 ಜಿಬಿ ಡೇಟಾ ಬೋನಸ್

ಏರ್ಟೆಲ್ ಬ್ರಾಡ್ಬ್ಯಾಂಡ್ ಯೋಜನೆಗಳು ರೂ. 499ರಿಂದ ಆರಂಭವಾಗಲಿವೆ. ರೂ. 499 ಪ್ಲಾನ್ ಆರು ತಿಂಗಳ ಮತ್ತು 12 ತಿಂಗಳ ಯೋಜನೆಗಳಂತೆ ಮಾತ್ರ ಲಭ್ಯವಿದೆ.
ರೂ. 799 ಬ್ರಾಡ್ಬ್ಯಾಂಡ್ ಯೋಜನೆ 100 ಜಿಬಿ ಡೇಟಾವನ್ನು ಭಾರತದಾದ್ಯಂತ ಉಚಿತ ಧ್ವನಿ ಕರೆಗಳೊಂದಿಗೆ ಒದಗಿಸುತ್ತದೆ. ಈ ಯೋಜನೆಯೊಂದಿಗೆ ನೀವು 500GB ಬೋನಸ್ ಡೇಟಾ ಪಡೆಯಲಿದ್ದಿರಿ.

1299 ಬ್ರಾಡ್ಬ್ಯಾಂಡ್ ಯೋಜನೆ

1299 ಬ್ರಾಡ್ಬ್ಯಾಂಡ್ ಯೋಜನೆ

ಮೂರನೇಯದಾಗಿ ರೂ. 1299 ಬ್ರಾಡ್ಬ್ಯಾಂಡ್ ಯೋಜನೆ. ಇದು ನೆಟ್ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಚಂದಾದಾರರಿಗೆ ಅನಿಯಮಿತ ಉಚಿತ ಧ್ವನಿ ಕರೆಗಳು, ಡೇಟಾ ರೋಲ್ ಓವರ್ ಸೌಲಭ್ಯ ಮತ್ತು 500GB ಡೇಟಾವನ್ನು ಒದಗಿಸುತ್ತದೆ. ಈ ಪ್ಲಾನ್ ಮೂಲಕ ಏರ್ಟೆಲ್ 1000GB ಬೋನಸ್ ಡೇಟಾವನ್ನು ನೀಡುತ್ತಿದೆ.
ಈ ಬೋನಸ್ ಡೇಟಾ ಸವಲಭ್ಯ ಮಾರ್ಚ್ 31, 2019 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+