For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಇಂಡಸ್ಟ್ರೀಸ್ ನೊಂದಿಗೆ ಹೂಡಿಕೆ ಮಾಡಲು ಸೌದಿ ಅರಾಮ್ಕೊ ಮಾತುಕತೆ

ವಿಶ್ವದ ಅತ್ಯಂತ ಲಾಭದಾಯಕ ಕಂಪೆನಿಯಾದ ಸೌದಿ ಅರಾಮ್ಕೊ, ಭಾರತದ ರಿಫೈನಿಂಗ್ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ನೊಂದಿಗೆ ಹೂಡಿಕೆ ಮಾಡಲು ಮಾತುಕತೆ ನಡೆಸಿದೆ.

|

ವಿಶ್ವದ ಅತ್ಯಂತ ಲಾಭದಾಯಕ ಕಂಪೆನಿಯಾದ ಸೌದಿ ಅರಾಮ್ಕೊ, ಭಾರತದ ರಿಫೈನಿಂಗ್ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ ನೊಂದಿಗೆ ಹೂಡಿಕೆ ಮಾಡಲು ಮಾತುಕತೆ ನಡೆಸಿದೆ.

ರಿಲಯನ್ಸ್  ನೊಂದಿಗೆ ಹೂಡಿಕೆ ಮಾಡಲು ಸೌದಿ ಅರಾಮ್ಕೊ ಮಾತುಕತೆ

ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ದೇಶದ ಇತರ ಕಂಪೆನಿಗಳೊಂದಿಗೆ ರಿಫೈನಿಂಗ್ ಮತ್ತು ಪೆಟ್ರೋಕೆಮಿಕಲ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸೌದಿ ಅರಾಮ್ಕೊ ಕಂಪನಿ ಮಾತುಕತೆ ನಡೆಸುತ್ತಿದೆ ಎಂದು ಸಿಇಒ ಅಮೀನ್ ಅಲ್ ನಾಸರ್ ಹೇಳಿದ್ದಾರೆ.

ವಿಶ್ವದ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕರಿಗೆ ಭಾರತವು ಮೊದಲ ಆದ್ಯತೆಯಾಗಿದ್ದು, ಉದ್ದೇಶಿತ ಹೂಡಿಕೆ ಪ್ರಮಾಣ 44 ಬಿಲಿಯನ್ ಡಾಲರ್ ಗಿಂತ ಹೆಚ್ಚಿದೆ ಎನ್ನಲಾಗಿದೆ.

ಆದರೆ ಸೌದಿ ಅರಾಮ್ಕೋ ಉದ್ದೇಶಿತ ಹೂಡಿಕೆಯ ವಿವರಗಳನ್ನು ಬಹಿರಂಗ ಪಡಿಸಿಲ್ಲ. ಭಾರತದಲ್ಲಿ ವ್ಯಾಪಾರಕ್ಕಾಗಿ ಅಪಾರ ನಿರೀಕ್ಷೆಗಳನ್ನು ಇರಿಸಲಾಗಿದೆ ಎಂದು ಸೌದಿ ಇಂಧನ ಸಚಿವ ಖಲಿದ್ ಅಲ್-ಫಾಲಿಹ್ ಹೇಳಿದ್ದಾರೆ. ಈಗಾಗಲೇ ಘೋಷಿಸಿರುವ ರಿಫೈನಿಂಗ್ ಜಂಟಿ ಉದ್ಯಮಕ್ಕಿಂತ ಹೆಚ್ಚು ಬಯಸುತ್ತಿದ್ದು, ಒಂದು ಯೋಜನೆ ಎಷ್ಟು ಬೃಹತ್ತಾಗಿದ್ದರೂ ಸಾಕಾಗುವುದಿಲ್ಲ ಎಂದಿದ್ದಾರೆ.

ಭಾರತ ಮೊದಲ ಆದ್ಯತೆ
ಏಷ್ಯಾದ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸುವ ಮತ್ತು ಕಚ್ಚಾ ತೈಲ ಮಾರಾಟದ ಮೇಲಿನ ಆರ್ಥಿಕತೆಯ ಅವಲಂಬನೆಯನ್ನು ತಗ್ಗಿಸುವುದಕ್ಕಾಗಿ ಭಾರತದ ರಿಫೈನಿಂಗ್ ಮತ್ತು ಪೆಟ್ರೊಕೆಮಿಕಲ್ ಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ಸೌದಿ ಅರೇಬಿಯಾ ಆಸಕ್ತಿ ತೋರಿಸಿದೆ.

English summary

Saudi Aramco in talks with Reliance Industries to invest in India

Saudi Aramco, the world’s most profitable company, is in talks with Indian refining giant Reliance Industries.
Story first published: Thursday, February 21, 2019, 13:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X