ಚಂದಾ ಕೊಚ್ಚಾರ್ ವಿರುದ್ಧ ಸಿಬಿಐನಿಂದ ನೋಟಿಸ್ ಜಾರಿ

ಐಸಿಸಿಐ ಬ್ಯಾಂಕಿನ ಮಾಜಿ ಎಂ.ಡಿ ಹಾಗು ಸಿಇಓ ಚಂದಾ ಕೊಚ್ಚಾರ್ ವಿರುದ್ಧ ಭ್ರಷ್ಟಾಚಾರ ಹಾಗೂ ವಂಚನೆ ಪ್ರಕರಣದಲ್ಲಿ ಆರೋಪ ಪಟ್ಟಿ ದಾಖಲಿಸಿದ್ದ ಸಿಬಿಐ, ಇದೀಗ ಅವರು ದೇಶಬಿಟ್ಟು ಹೋಗದಂತೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ.

ಐಸಿಸಿಐ ಬ್ಯಾಂಕಿನ ಮಾಜಿ ಎಂ.ಡಿ ಹಾಗು ಸಿಇಓ ಚಂದಾ ಕೊಚ್ಚಾರ್ ವಿರುದ್ಧ ಭ್ರಷ್ಟಾಚಾರ ಹಾಗೂ ವಂಚನೆ ಪ್ರಕರಣದಲ್ಲಿ ಆರೋಪ ಪಟ್ಟಿ ದಾಖಲಿಸಿದ್ದ ಸಿಬಿಐ, ಇದೀಗ ಅವರು ದೇಶಬಿಟ್ಟು ಹೋಗದಂತೆ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ.

ಚಂದಾ ಕೊಚ್ಚಾರ್ ವಿರುದ್ಧ ಸಿಬಿಐನಿಂದ ನೋಟಿಸ್ ಜಾರಿ

ಚಂದಾ ಕೊಚ್ಚಾರ್ ಪತಿ ದೀಪಕ್ ಕೊಚ್ಚಾರ್‌ ಹಾಗೂ ವೀಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ಜೊತೆಗೂಡಿ ವಂಚನೆಯ ಕೃತ್ಯದಲ್ಲಿ ಭಾಗಿಯಾದ ಆರೋಪದಲ್ಲಿ ಚಂದಾ ಕೊಚ್ಚಾರ್ ವಿರುದ್ಧ ಸಿಬಿಐ ಲುಕ್ಔಟ್ ನೋಟಿಸ್ ಜಾರಿ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

2009ರ ಜೂನ್‌ನಿಂದ 2011ರ ಅಕ್ಟೋಬರ್ ನಡುವಿನ ಅವಧಿಯಲ್ಲಿ ವೀಡಿಯೋಕಾನ್ ಅವ್ಯವಹಾರ ನಡೆದಿತ್ತು. ವೀಡಿಯೋಕಾನ್ ಸಂಸ್ಥೆಗೆ ರೂ. 1,875 ಕೋಟಿ ಮೌಲ್ಯದ ಆರು ಸಾಲಗಳನ್ನು ಅಕ್ರಮವಾಗಿ ವಿತರಿಸಿದ ಪ್ರಕರಣದಲ್ಲಿ ಚಂದಾ ಕೊಚ್ಚಾರ್ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ.

ಜನವರಿ 22ರಂದು ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಇದೀಗ ಮತ್ತೆ ದೀಪಕ್ ಕೊಚ್ಚಾರ್ ಮತ್ತು ವೇಣುಗೋಪಾಲ್ ಧೂತ್ ವಿರುದ್ಧ ಲುಕ್‌ಔಟ್ ನೋಟಿಸ್‌ಗಳನ್ನು ಮತ್ತೊಮ್ಮೆ ಜಾರಿ ಮಾಡಿದೆ.

ಚಂದಾ ಕೊಚ್ಚಾರ್ ಅವರು ಅಧಿಕಾರಾವಧಿ ಅಂತ್ಯಗೊಳ್ಳುವ ಆರು ತಿಂಗಳ ಮುಂಚೆಯೇ ಕಳೆದ ವರ್ಷ ಅಕ್ಟೋಬರ್ ನಲ್ಲಿ ರಾಜೀನಾಮೆ ನೀಡಿದ್ದರು. ಕೊಚ್ಚಾರ್ ನಿರ್ಗಮನದ ನಂತರ ಐಸಿಐಸಿಐ ಬ್ಯಾಂಕ್ ಮಂಡಳಿಯು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ (ಸಿಒಒ) ಸಂದೀಪ್ ಬಕ್ಷಿ ಅವರನ್ನು ನೂತನ ಸಿಇಓ ಆಗಿ ಐದು ವರ್ಷಗಳ ಅವಧಿಗೆ ನೇಮಕ ಮಾಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+