ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಆಸ್ತಿಯ ಹರಾಜು ನಡೆಸುತ್ತಿದ್ದು, ಅಪಾರ್ಟ್ಮೆಂಟ್, ಕಚೇರಿ, ಅಂಗಡಿ, ಕಾರ್ಖಾನೆಯಂತಹ ಆಸ್ತಿ ಖರೀದಿ ಮಾಡುವವರಿಗೆ ಸಂತಸದ ಸುದ್ದಿ ನೀಡಿದೆ.
ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಆಸ್ತಿಯ ಹರಾಜು ನಡೆಸುತ್ತಿದ್ದು, ಅಪಾರ್ಟ್ಮೆಂಟ್, ಕಚೇರಿ, ಅಂಗಡಿ, ಕಾರ್ಖಾನೆಯಂತಹ ಆಸ್ತಿ ಖರೀದಿ ಮಾಡುವವರಿಗೆ ಸಂತಸದ ಸುದ್ದಿ ನೀಡಿದೆ.
ಅಗ್ಗದ ಬೆಲೆಯಲ್ಲಿ ಅಪಾರ್ಟ್ಮೆಂಟ್, ಕಚೇರಿ, ಅಂಗಡಿ, ಕಾರ್ಖಾನೆ ಖರೀದಿ ಮಾಡಲು ಬಯಸಿದಲ್ಲಿ ಇದೊಂದು ಒಳ್ಳೆಯ ಅವಕಾಶ ಆಗಲಿದೆ. ಎಸ್ಬಿಐ ಬ್ಯಾಂಕ್ ದೇಶದಾದ್ಯಂತ 1000 ಪ್ರಾಪರ್ಟಿ ಹರಾಜು ಪ್ರಕ್ರಿಯೆ ಆನ್ಲೈನ್ ನಲ್ಲಿ ನಡೆಸಲಿದೆ. ಹರಾಜು ಪ್ರಕ್ರಿಯೆ ಇದೇ ಫೆಬ್ರವರಿ 27ರಂದು ಶುರುವಾಗಲಿದೆ.
ವೆಬ್ಸೈಟ್ ನಲ್ಲಿ ಹೆಸರು ನೋಂದಣಿ
ಪ್ರಾಪರ್ಟಿ ಖರೀದಿಸಲು ಬಯಸಿದಲ್ಲಿ ಎಸ್ಬಿಐನ www.sbi.auctiontiger.net ವೆಬ್ಸೈಟ್ ನಲ್ಲಿ ಹೆಸರು ನೋಂದಾಯಿಸಬೇಕು. ನಂತರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಬ್ಯಾಂಕ್ ತನ್ನ ಸಾಲ ವಸೂಲಿಗೆ ಈ ಆಸ್ತಿಯ ಹರಾಜು ನಡೆಸುತ್ತಿದೆ. ಎಸ್ಬಿಐ ಬ್ಯಾಂಕ್ ಆಸ್ತಿ ಹರಾಜು ಪಾರದರ್ಶಕವಾಗಿರಲಿದೆ.
ಆಸ್ತಿ ಖರೀದಿಗೆ ಏನು ಮಾಡಬೇಕು
ಆಸಕ್ತರು www.bankeauctions.com/sbi ರಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.
ಬ್ಯಾಂಕ್ ನ ವೆಬ್ಸೈಟ್ ನಲ್ಲಿ ಹರಾಜಾಗುತ್ತಿರುವ ಆಸ್ತಿಯ ವಿವರ, ಮಾಲೀಕನ ಹೆಸರು, ಇರುವ ಸ್ಥಳ ಸೇರಿದಂತೆ ಎಲ್ಲ ಮಾಹಿತಿ ಲಭ್ಯವಾಗಲಿದೆ. ಆಸ್ತಿ ಖರೀದಿಗೆ ಏನು ಮಾಡಬೇಕು ಎಂಬುದರ ವಿವರವೂ ಇದರಲ್ಲಿದೆ. ಯಾವೆಲ್ಲ ದಾಖಲೆ ಬೇಕು ಎಂಬುದನ್ನು ಖರೀದಿದಾರ ವೆಬ್ಸೈಟ್ ನಲ್ಲಿ ಪಡೆಯಬಹುದು.
EMD,KYC ಪ್ರಕ್ರಿಯೆ
ನೀವು ಇ-ಹರಾಜು ಪ್ರಾಪರ್ಟಿ ಅರ್ನೆಸ್ಟ್ ಮನಿ ಡಿಪಾಸಿಟ್ ಇಎಮ್ಡಿ ಜಮೆ ಮಾಡಬೇಕಾಗುತ್ತದೆ. ಸಂಬಂಧಪಟ್ಟ ಬ್ಯಾಂಕ್ ಶಾಖೆಯಲ್ಲಿ KYC ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ನೀವು ಡಿಜಿಟಲ್ ಸಹಿಯನ್ನು ಹೊಂದಿರಬೇಕು. ನೀವು ಬಿಡ್ ಮಾಡಲು ಬಯಸಿದರೆ, ಇ-ಹರಾಜುಗಾರ ಅಥವಾ ಮಾನ್ಯವಾದ ಏಜೆನ್ಸಿಗೆ ಹೋಗಿ ನಿಮ್ಮ ಡಿಜಿಟಲ್ ಸಹಿಯನ್ನು ತೆಗೆದುಕೊಳ್ಳಬಹುದು. ಇದಲ್ಲದೆ, ನೀವು ವೆಬ್ಸೈಟ್ ಗೆ ಪ್ರವೇಶಿಸಲು ಲಾಗಿನ್ ID ಮತ್ತು ಪಾಸ್ವರ್ಡ್ ಕೂಡ ಅಗತ್ಯವಿರುತ್ತದೆ.


Click it and Unblock the Notifications