ವೋಡಾಫೋನ್ ಬೋನಸ್ ಕಾರ್ಡ್ ಪ್ಲಾನ್: ಉಚಿತ ಕರೆ, ಡೇಟಾ ಆಫರ್..

ದೇಶದ ದೂರಸಂಪರ್ಕ ವಲಯದಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳು ದರ ಸಮರದಲ್ಲಿ ತೊಡಗಿ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿವೆ.

ದೇಶದ ದೂರಸಂಪರ್ಕ ವಲಯದಲ್ಲಿ ಪ್ರಮುಖ ಟೆಲಿಕಾಂ ಕಂಪನಿಗಳು ದರ ಸಮರದಲ್ಲಿ ತೊಡಗಿ ಗ್ರಾಹಕರನ್ನು ಆಕರ್ಷಿಸಲು ಮುಂದಾಗಿವೆ. ಈಗ ವೋಡಾಫೋನ್ ತನ್ನ ಗ್ರಾಹಕರನ್ನು ಆಕರ್ಷಿಸಲು ಹೊಸ ಪ್ರಿಪೇಡ್ ಪ್ಲಾನ್ ಆರಂಭಿಸಿದ್ದು, ವೋಡಾಫೋನ್ ರೂ. 129 ಪ್ಲಾನ್ ಒಂದು ಬೋನಸ್ ಕಾರ್ಡ್ ಯೋಜನೆಯಾಗಿದೆ.

ರೂ. 129 ಪ್ಲಾನ್

ರೂ. 129 ಪ್ಲಾನ್

ರೂ. 129 ಪ್ಲಾನ್ ಒಂದು ಬೋನಸ್ ಕಾರ್ಡ್ ಯೋಜನೆಯಾಗಿದ್ದು, ಅನಿಯಮಿತ ಉಚಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕರೆ ಸೌಲಭ್ಯ ಸಿಗಲಿದೆ.
ಈ ಪ್ಲಾನ್ ನಲ್ಲಿ1.5 ಜಿಬಿ ಡೇಟಾ, ಪ್ರತಿ ದಿನ 100 ಎಸ್ ಎಂಎಸ್ ಸಿಗಲಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಉತ್ತಮ ಆಯ್ಕೆ

ಉತ್ತಮ ಆಯ್ಕೆ

ವೋಡಾಫೋನ್ ಹೊಸದಾಗಿ ಬಿಡುಗಡೆ ಮಾಡಿರುವ ಬೋನಸ್ ಕಾರ್ಡ್ ಪ್ರಿಪೇಡ್ ಪ್ಲಾನ್ ರೂ. 129 ಚಂದಾದಾರರಿಗೆ ಉತ್ತಮ ಆಯ್ಕೆಯಾಗಿದೆ. ಕಡಿಮೆ ಬೆಲೆಯಲ್ಲಿ ತಿಂಗಳ ವ್ಯಾಲಿಡಿಟಿಯೊಂದಿಗೆ ಸೇವೆ ಪಡೆಯಲು ಬಯಸಿದರೆ ರೂ. 129 ಯೋಜನೆ ನಿಮಗೆ ಅತ್ಯುತ್ತಮ ಆಯ್ಕೆ ಮಾಡಬಲ್ಲದು. ಕಡಿಮೆ ಡೇಟಾ ಬಳಸುವ ಮತ್ತು ಹೆಚ್ಚಾಗಿ ಕರೆ ಮಾಡಲು ಇಚ್ಚಿಸುವ ಯಾರಿಗಾದರೂ ಈ ಯೋಜನೆ ಉತ್ತಮ ಆಯ್ಕೆಯಾಗಿದೆ.

ಕೆಲ ಪ್ರದೇಶಗಳಲ್ಲಿ ಮಾತ್ರ ಲಭ್ಯ

ಕೆಲ ಪ್ರದೇಶಗಳಲ್ಲಿ ಮಾತ್ರ ಲಭ್ಯ

ವೋಡಾಫೋನ್ ರೂ. 129 ಪ್ಲಾನ್ ನಲ್ಲಿ ಗುಜರಾತ್, ಚೆನ್ನೈ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮಾತ್ರ ಈ ಯೋಜನೆ ಬಿಡುಗಡೆ ಮಾಡಿದೆ.
ಲೈಫ್ ಟೈಂ ಫ್ರೀ ಒಳ ಬರುವ ಕರೆಯನ್ನು ರದ್ದು ಮಾಡಿರುವ ಕಾರಣ ವೋಡಾಫೋನ್ ಐಡಿಯಾಗೆ ಸಾಕಷ್ಟು ನಷ್ಟವಾಗಿದೆ. ಲೈಫ್ ಟೈಂ ಫ್ರೀ ಒಳ ಬರುವ ಕರೆ ಸೌಲಭ್ಯ ರದ್ದಾಗುತ್ತಿದ್ದಂತೆ ಲಕ್ಷಾಂತರ ಗ್ರಾಹಕರು ವೋಡಾಫೋನ್ ನಿಂದ ಹೊರ ಬಂದಿದ್ದಾರೆ.

ರೂ. 119 ಪ್ಲಾನ್

ರೂ. 119 ಪ್ಲಾನ್

ವೋಡಾಫೋನ್ ಗ್ರಾಹಕರನ್ನು ತನ್ನತ್ತ ಸೆಳೆಯಲು ರೂ. 129 ಪ್ಲಾನ್ ಜೊತೆ ರೂ. 119 ಪ್ಲಾನ್ ಕೂಡ ಪರಿಚಯಿಸಿದೆ. ಇದು ಅನಿಯಮಿತ ಕರೆ ಸೌಲಭ್ಯದೊಂದಿಗೆ ಪ್ರತಿದಿನ 1GB ಡೇಟಾ ಒದಗಿಸುತ್ತದೆ. 28 ದಿನಗಳ ವ್ಯಾಲಿಡಿಟಿಯೊಂದಿಗೆ, ನೂರು ಎಸ್ಎಂಎಸ್ ಸೌಲಭ್ಯ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+