ಕಳೆದ ಫೆಬ್ರವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ರೂ. 97,247 ಕೋಟಿಗಳಾಗಿದೆ. ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ರೂ. 1.02 ಲಕ್ಷ ಕೋಟಿ ಇಳಿಕೆಯಾಗಿದೆ.
ಕಳೆದ ಫೆಬ್ರವರಿ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ ರೂ. 97,247 ಕೋಟಿಗಳಾಗಿದೆ. ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ರೂ. 1.02 ಲಕ್ಷ ಕೋಟಿ ಇಳಿಕೆಯಾಗಿದೆ.

ಜಿಎಸ್ಟಿ ಇಳಿಕೆ ಕಂಡರೂ ಸೇಲ್ಸ್ ರಿಟರ್ನ್ಸ್ ಸಲ್ಲಿಕೆಯಲ್ಲಿ ಅಥವಾ ಜಿಎಸ್‌ಟಿಆರ್-3ಬಿ ದಾಖಲಿಸುವಿಕೆಯ ಸಂಖ್ಯೆ 73.3 ಲಕ್ಷಕ್ಕೆ ಏರಿಕೆ ಕಂಡಿದೆ. ಜನವರಿಯಲ್ಲಿ 73.3 ಲಕ್ಷ ಸಲ್ಲಿಕೆಯಾಗಿತ್ತು. ಫೆಬ್ರವರಿಯಲ್ಲಿ ಕೇಂದ್ರ ಜಿಎಸ್ಟಿ ರೂ. 17,626 ಕೋಟಿ, ರಾಜ್ಯ ಜಿಎಸ್ಟಿ ರೂ. 24,192 ಕೋಟಿ, ಐಜಿಎಸ್ಟಿ ರೂ. 46,953 ಕೋಟಿ ಹಾಗೂ ಸೆಸ್ ರೂ. 8,476 ಕೋಟಿ ಸಂಗ್ರಹವಾಗಿದೆ.
ಸಿನಿಮಾ ಟಿಕೆಟ್, ಟಿ.ವಿ, ಪವರ್ ಬ್ಯಾಂಕ್, ಮಾನಿಟರಿ ಸ್ಕ್ರೀನ್‌ಗಳ ಜಿಎಸ್ಟಿ ಕಡಿತವಾಗಿರುವುದರಿಂದ ಜಿಎಸ್ಟಿ ಸಂಗ್ರಹ ಇಳಿಕೆಯಾಗಿದೆ ಎನ್ನಲಾಗಿದೆ. 2017-18ರ ಸಾಲಿನಲ್ಲಿ ಒಟ್ಟು ರೂ. 10.02 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದ್ದು, ಒಟ್ಟು ಶೇ. 57ರಷ್ಟು ಹೆಚ್ಚಳವಾಗಿದೆ. 2017-18ರ ಸಾಲಿನ ಅವಧಿಯಲ್ಲಿ 1.06 ಕೋಟಿ ಜನ ಹೊಸಬರು ರಿಟರ್ನ್ಸ್ ಸಲ್ಲಿಸಿದ್ದಾರೆ. ಆದಾಯ ತೆರಿಗೆ ಸಂಗ್ರಹದಲ್ಲಿ ಏರಿಕೆಯಾಗಿದ್ದು, ಜಿಎಸ್ಟಿ ತೆರಿಗೆದಾರರ ಸಂಖ್ಯೆ ಮಾತ್ರವಲ್ಲದೆ, ಆದಾಯ ತೆರಿಗೆದಾರರ ಸಂಖ್ಯೆಯಲ್ಲೂ ಶೇ. 44 ವೃದ್ಧಿಯಾಗಿದೆ.


Click it and Unblock the Notifications