For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಉದ್ಯೋಗಿಗಳಿಗೆ ಫೆಬ್ರವರಿ ಸಂಬಳ ಇನ್ನೂ ಸಿಕ್ಕಿಲ್ಲ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಉದ್ಯೋಗಿಗಳು ಸಂಕಟದಲ್ಲಿ ಸಿಲುಕಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಬಿಎಸ್ಎನ್ಎಲ್ 1.76 ಲಕ್ಷ ಸಿಬ್ಬಂದಿಗೆ ಸಂಬಳ ಪಾವತಿಸಿಲ್ಲ.

|

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ ಉದ್ಯೋಗಿಗಳು ಸಂಕಟದಲ್ಲಿ ಸಿಲುಕಿದ್ದು, ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಬಿಎಸ್ಎನ್ಎಲ್ 1.76 ಲಕ್ಷ ಸಿಬ್ಬಂದಿಗೆ ಸಂಬಳ ಪಾವತಿಸಿಲ್ಲ.

 
ಬಿಎಸ್ಎನ್ಎಲ್ ಉದ್ಯೋಗಿಗಳಿಗೆ ಫೆಬ್ರವರಿ ಸಂಬಳ  ಇನ್ನೂ ಸಿಕ್ಕಿಲ್ಲ

ಬಿಎಸ್ಎನ್ಎಲ್ ಸಿಬ್ಬಂದಿಗಳಿಗೆ ಫೆಬ್ರವರಿ ತಿಂಗಳ ಸಂಬಳ ಈವರೆಗೂ ಸಿಕ್ಕಿಲ್ಲ ಎನ್ನಲಾಗಿದ್ದು, ದೂರಸಂಪರ್ಕ ಸಚಿವ ಮನೋಜ್ ಸಿನ್ಹಾರಿಗೆ ಪತ್ರ ಬರೆದಿದ್ದು, ಶೀಘ್ರ ಸಂಬಳ ನೀಡುವಂತೆ ಮನವಿ ಮಾಡಿದ್ದಾರೆ. ಬಿಎಸ್ಎನ್ಎಲ್ ತನ್ನ ಆದಾಯದ ಶೇ. 55ರಷ್ಟು ಹಣವನ್ನು ಸಂಬಳದ ರೂಪದಲ್ಲಿ ನೀಡುತ್ತಿದ್ದು, ಮಾರ್ಚ್ ತಿಂಗಳ ಸಂಬಳ ಕೂಡ ಆರು ದಿನ ತಡವಾಗಿ ಸಿಗಲಿದೆ ಎನ್ನಲಾಗಿದೆ.

 

ಬಿಸಿನೆಸ್ ಕಂಪನಿಗಳ ಬಿಲ್ಲಿಂಗ್ ನಂತರ ಬಿಎಸ್ಎನ್ಎಲ್ ಕಂಪನಿಗೆ ಹಣ ಸಂದಾಯವಾಗುತ್ತದೆ. ಬಿಎಸ್ಎನ್ಎಲ್ ಬೋರ್ಡ್ ಬ್ಯಾಂಕ್ ಸಾಲಕ್ಕೆ ಒಪ್ಪಿಗೆ ನೀಡಿತ್ತು. ಆದರೆ ದೂರಸಂಪರ್ಕ ಇಲಾಖೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತಿ ವರ್ಷ ಬಿಎಸ್ಎನ್ಎಲ್ ನಷ್ಟ ಏರುತ್ತಾ ಸಾಗುತ್ತಿದ್ದು, ಹಿಂದಿನ ವರ್ಷ ರೂ. 4,786 ಕೋಟಿಯಿದ್ದ ನಷ್ಟ ಈ ಬಾರಿ ರೂ. 8,000 ಕೋಟಿಗೆ ಏರಿದೆ.

ಸರ್ಕಾರ ಯಾವುದೇ ಆರ್ಥಿಕ ಸಹಾಯ ನೀಡದಿರುವುದರಿಂದ ಸಂಬಳ ಪಾವತಿ ವಿಳಂಬವಾಗುತ್ತಿದೆ. ಆದರೆ ಕೇರಳ, ಜಮ್ಮು ಮತ್ತು ಕಾಶ್ಮೀರ, ಒರಿಸ್ಸಾ ಸಿಬ್ಬಂದಿಗೆ ಫೆಬ್ರವರಿ ಸಂಬಳ ನೀಡಲಾಗ್ತಿದೆ ಎಂದು ಕಂಪನಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

Read more about: bsnl employment money
English summary

BSNL fails to pay salaries for the first time; 1.76 lakh employees affected

BSNL has failed to pay the February salaries to around 1.76 lakh employees due to its financial crisis.
Story first published: Wednesday, March 13, 2019, 14:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X