For Quick Alerts
ALLOW NOTIFICATIONS  
For Daily Alerts

ಕಾರು, ಬೈಕ್ ಬೇಡಿಕೆ ಅಪಾಯಕಾರಿ ಮಟ್ಟಕ್ಕೆ ಕುಸಿತ, ವಾಹನಗಳ ದಾಸ್ತಾನು ಮಟ್ಟ ಏರಿದೆ!

ಬೇಡಿಕೆಯಲ್ಲಿನ ಕುಸಿತ, ಗ್ರಾಹಕರ ನಿರಾಸಕ್ತಿ ಮತ್ತು ಬಿಗಿಯಾದ ಹಣಕಾಸು ಪರಿಸ್ಥಿತಿಯಿಂದಾಗಿ ಪ್ರಯಾಣಿಕರ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ದಾಸ್ತಾನು ರಾಶಿ ಭಾರೀ ಪ್ರಮಾಣದಲ್ಲಿ ಉಳಿಯುವಂತೆ ಮಾಡಿದೆ.

|

ಬೇಡಿಕೆಯಲ್ಲಿನ ಕುಸಿತ, ಗ್ರಾಹಕರ ನಿರಾಸಕ್ತಿ ಮತ್ತು ಬಿಗಿಯಾದ ಹಣಕಾಸು ಪರಿಸ್ಥಿತಿಯಿಂದಾಗಿ ಪ್ರಯಾಣಿಕರ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ದಾಸ್ತಾನು ರಾಶಿ ಭಾರೀ ಪ್ರಮಾಣದಲ್ಲಿ ಉಳಿಯುವಂತೆ ಮಾಡಿದೆ.

ವಾಹನ ವಿತರಕರು ವಾಹನ ದಾಸ್ತಾನು ಮಟ್ಟವನ್ನು ತಗ್ಗಿಸಲು ಬೃಹತ್ ರಿಯಾಯಿತಿಯನ್ನು ಘೋಷಿಸುತ್ತಿದ್ದರೂ, ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಉಳಿದಿದೆ.

ಫೆಬ್ರವರಿಯಲ್ಲಿ ವಾಹನ ದಾಸ್ತಾನು ಪ್ರಮಾಣ "ಗಾಬರಿಗೊಳಿಸುವ" ಮಟ್ಟವನ್ನು ತಲುಪಿದೆ ಎಂದು ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ ​​(FADA) ನಡೆಸಿದ ಸಮೀಕ್ಷೆ ತಿಳಿಸಿದೆ.

ದಾಸ್ತಾನು ಮಟ್ಟ

ದಾಸ್ತಾನು ಮಟ್ಟ

ಪ್ರಯಾಣಿಕ ವಾಹನಗಳ ದಾಸ್ತಾನು 50-60 ದಿನಗಳು, ದ್ವಿಚಕ್ರ ವಾಹನಗಳಿಗೆ 80-90 ದಿನಗಳು ಮತ್ತು ವಾಣಿಜ್ಯ ವಾಹನಗಳಿಗೆ 45-50 ದಿನಗಳು ತಲುಪಿದೆ ಬಿಡುಗಡೆಯಾದ ಮಾಹಿತಿ ವರದಿ ಮಾಡಿದೆ. 30 ದಿನಗಳಿಗಿಂತ ಕಡಿಮೆಯಿರುವ ದಾಸ್ತಾನು ಸಾಮಾನ್ಯವಾಗಿ ಆರೋಗ್ಯಕರವೆಂದು ಪರಿಗಣಿಸಲಾಗುತ್ತದೆ.

'ಗ್ರಾಮೀಣ ಬೇಡಿಕೆ ಕುಸಿತ'

'ಗ್ರಾಮೀಣ ಬೇಡಿಕೆ ಕುಸಿತ'

ಡಿಸೆಂಬರ್ ವೇಳೆಗೆ, ಪ್ರಯಾಣಿಕರ ಮತ್ತು ವ್ಯಾಪಾರಿ ವಾಹನಗಳಿಗೆ 55-60 ದಿನಗಳವರೆಗೆ ಮತ್ತು ದ್ವಿಚಕ್ರ ವಾಹನಗಳಿಗೆ 35-40 ದಿನಗಳವರೆಗೆ ದಾಸ್ತಾನು ಮಾಡಿದ್ದವು. ಇದು ಜನವರಿಯಲ್ಲಿ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳಿಗೆ 30-35 ದಿನಗಳಿಗೆ ಮತ್ತು ದ್ವಿಚಕ್ರದ ವಾಹನಗಳಿಗೆ 50-60 ದಿನಗಳಿಗೆ ಸುಧಾರಿಸಿದೆ.

ಅರ್ಥಶಾಸ್ತ್ರಜ್ಞ ಮದನ್ ಸಬ್ನಾವಿಸ್

ಅರ್ಥಶಾಸ್ತ್ರಜ್ಞ ಮದನ್ ಸಬ್ನಾವಿಸ್

ವಾಹನ ಮಾರಾಟದ ಮಟ್ಟವು ಸಾಮಾನ್ಯ ವರ್ಷದಲ್ಲಿ ವೇಗವನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಆದರೆ ಗ್ರಾಮೀಣ ಬೇಡಿಕೆಯ ಕುಸಿತದ ಕಾರಣ ಭಾಗಶಃ ಅದು ಸಂಭವಿಸಲಿಲ್ಲ ಎಂದು ಅರ್ಥಶಾಸ್ತ್ರಜ್ಞ ಮದನ್ ಸಬ್ನಾವಿಸ್ ಹೇಳಿದ್ದಾರೆ.
ವಾಹನ ಖರೀದಿಗಾಗಿ ಖರ್ಚು ಮಾಡುವುದನ್ನು ನೋಡಲು ಮಾರ್ಚ್ ಅಂತ್ಯದವರೆಗೂ ಕಾಯಬೇಕಾಗುತ್ತದೆ. ಏಪ್ರಿಲ್-ಮೇ ಮದುವೆಯ ಋತು, ತದನಂತರ ರಾಬೀ ಸುಗ್ಗಿಯ ನಂತರ ಮುಂದಿನ ಖರ್ಚು ನಡೆಯಲಿದೆ ಎಂದಿದ್ದಾರೆ.

Read more about: money business savings
English summary

Car & bike stocks with dealers pile up to ‘alarming’ levels as demand slumps

A slowdown in demand, weakening consumer sentiment and tighter financing conditions is leading to massive pile up of inventory of both passenger vehicles and two-wheelers.
Story first published: Thursday, March 14, 2019, 15:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X