ಏ.1ರಿಂದ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ವಿಲೀನ: ಗ್ರಾಹಕರು ಮಾಡಬೇಕಾದದ್ದೇನು?

ಎಸ್ಬಿಐ ಅದರ ಸಹವರ್ತಿ ಬ್ಯಾಂಕುಗಳೊಂದಿಗೆ ವಿಲೀನವಾದಂತೆ ಏಪ್ರಿಲ್ 1ರಂದು ದೇಶದ ಮೂರು ಬ್ಯಾಂಕುಗಳು ವಿಲೀನವಾಗಲಿವೆ. ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಇದರಿಂದ ಜನಸಾಮಾನ್ಯರ ಕೆಲಸ ಸ್ವಲ್ಪ ಹೆಚ್ಚಾಗಲಿದೆ.

ಎಸ್ಬಿಐ ಅದರ ಸಹವರ್ತಿ ಬ್ಯಾಂಕುಗಳೊಂದಿಗೆ ವಿಲೀನವಾದಂತೆ ಏಪ್ರಿಲ್ 1ರಂದು ದೇಶದ ಮೂರು ಬ್ಯಾಂಕುಗಳು ವಿಲೀನವಾಗಲಿವೆ. ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯಾಗುತ್ತಿದ್ದು, ಇದರಿಂದ ಜನಸಾಮಾನ್ಯರ ಕೆಲಸ ಸ್ವಲ್ಪ ಹೆಚ್ಚಾಗಲಿದೆ.
ಗ್ರಾಹಕರ ಪಾಸ್ಬುಕ್, ಚೆಕ್ಬುಕ್, ಎಟಿಎಂನಲ್ಲಿ ಬದಲಾವಣೆಯಾಗಲಿದೆ. ಹೀಗಾಗಿ ಗ್ರಾಹಕರು ಭಯಪಡುವ ಅಗತ್ಯವಿಲ್ಲ. ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಈ ಟಿಪ್ಸ್ ಪಾಲಿಸಿ..

ಮೂರು ಬ್ಯಾಂಕುಗಳು

ಮೂರು ಬ್ಯಾಂಕುಗಳು

ದೇಶದ ಪ್ರಮುಖ ಮೂರು ಬ್ಯಾಂಕುಗಳಾದ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಬರೋಡಾ ವಿಲೀನವಾಗಲಿದೆ. ಏಪ್ರಿಲ್ ಒಂದರಿಂದ ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕುಗಳು ಬ್ಯಾಂಕ್ ಆಫ ಬರೋಡಾ ಜೊತೆ ವಿಲೀನವಾಗಲಿವೆ.

ಗ್ರಾಹಕರ ಮಾಡಬೇಕಾದದ್ದೇನು?

ಗ್ರಾಹಕರ ಮಾಡಬೇಕಾದದ್ದೇನು?

ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಈ ಎರಡು ಬ್ಯಾಂಕುಗಳಲ್ಲಿ ಖಾತೆ ಹೊಂದಿರುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಬ್ಯಾಂಕಿನ ಗ್ರಾಹಕರು ದಾಖಲಾತಿ ಕೆಲಸಗಳನ್ನು ಮಾಡಬೇಕಾಗುತ್ತದೆ. ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಹೊಸ ಚೆಕ್ ಬುಕ್ ಹಾಗೂ ಪಾಸ್ ಬುಕ್ ಪಡೆಯಬೇಕಾಗುತ್ತದೆ.

ಗ್ರಾಹಕರಿಗೆ ಸಹಕಾರ

ಗ್ರಾಹಕರಿಗೆ ಸಹಕಾರ

ವಿಲೀನದ ನಂತರ ಕಾರ್ಯಚಟುವಟಿಕೆಗಳ ಬಗ್ಗೆ ಬ್ಯಾಂಕ್ ಮಾಹಿತಿ ನೀಡುವುದರ ಜೊತೆಗೆ ಗ್ರಾಹಕರಿಗೆ ಸಮಯ ನೀಡಲಿದೆ. ಗ್ರಾಹಕರಿಗೆ ಬ್ಯಾಂಕ್ ಸಂಪೂರ್ಣ ಸಹಕಾರ ನೀಡಲಿದೆ. ಮೂರು ಬ್ಯಾಂಕು ಗಳ ವಿಲೀನದಿಂದ ಗ್ರಾಹಕರಿಗೆ ಉತ್ತಮವಾದ ಸೇವೆ ಸಿಗಲಿದ್ದು, ಬ್ಯಾಂಕಿಂಗ್ ನೆಟ್ವರ್ಕ್ ದೊಡ್ಡದಾಗಲಿದೆ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+