ಏಪ್ರಿಲ್ 1ರಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ! ಯಾಕೆಂದರೆ ಸರ್ಕಾರ ದೇಶಿಯ ನೈಸರ್ಗಿಕ ಅನಿಲ ಬೆಲೆಯನ್ನು ಶೇ. 18ರಷ್ಟು ಹೆಚ್ಚಿಸಲಿದೆ.
ಏಪ್ರಿಲ್ 1ರಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ! ಯಾಕೆಂದರೆ ಸರ್ಕಾರ ದೇಶಿಯ ನೈಸರ್ಗಿಕ ಅನಿಲ ಬೆಲೆಯನ್ನು ಶೇ. 18ರಷ್ಟು ಹೆಚ್ಚಿಸಲಿದೆ. ಮಾರ್ಚ್ ಒಂದರಿಂದ ಎಲ್ಪಿಜಿ (ಸಬ್ಸಿಡಿ ಮತ್ತು ಸಬ್ಸಿಡಿ ರಹಿತ) ಬೆಲೆಯನ್ನು ಏರಿಕೆ ಮಾಡಲಾಗಿದೆ. ನಿಮಗಿದು ತಿಳಿದಿರಲಿ.. ಇಂದಿನಿಂದ ಪ್ರಮುಖ 6 ಬದಲಾವಣೆಗಳು ಆಗಲಿವೆ..
ಏಪ್ರಿಲ್ 1ರಿಂದ ಜಾರಿ
ದೇಶಿಯ ನೈಸರ್ಗಿಕ ಅನಿಲ ಬೆಲೆಯ ಹೊಸ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಸರ್ಕಾರದ ಈ ನಿರ್ಧಾರದಿಂದ ವಾಹನ ಇಂಧನವಾಗಿ ಬಳಕೆಯಾಗುತ್ತಿರುವ CNG ಹಾಗೂ ಮನೆಯಲ್ಲಿ ಅಡುಗೆಗೆ ಬಳಕೆಯಾಗುವ ಪೈಪ್ಡ್ ನೈಸರ್ಗಿಕ ಅನಿಲ PNG ಬೆಲೆ ಹೆಚ್ಚಾಗಲಿದೆ.
ಶೇ. 18 ರಷ್ಟು ಏರಿಕೆ
ಸರ್ಕಾರದ ಈ ನಿರ್ಧಾರದಿಂದ ಜನ ಸಾಮಾನ್ಯರಿಗೆ ಜೇಬಿಗೆ ನಷ್ಟ ಆಗಲಿದ್ದು, ದೇಶೀಯ ನೈಸರ್ಗಿಕ ಅನಿಲ ಬೆಲೆ ಶೇ. 18 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಒಂದು ವೇಳೆ ಶೇ. 18 ರಷ್ಟು ಬೆಲೆ ಹೆಚ್ಚಾದರೆ ಉತ್ಪಾದನೆ, ಸಾರಿಗೆ ಪ್ರಯಾಣ, ಶಕ್ತಿ ವಲಯದ ಮೇಲೆ ಭಾರೀ ಪ್ರಭಾವ ಬೀರಲಿದೆ.
ನೈಸರ್ಗಿಕ ಅನಿಲ ಬೆಲೆ ನಿಗದಿ ಹೇಗೆ?
ಗ್ಯಾಸ್ ಮಾರಾಟ ಮಾಡುವ ಅಮೆರಿಕಾ, ರಷ್ಯಾ ಮತ್ತು ಕೆನಡಾ ದೇಶಗಳ ತ್ರೈಮಾಸಿಕ ಸರಾಸರಿ ಬೆಲೆಯ ಆಧಾರದ ಮೇಲೆ ಭಾರತದಲ್ಲಿ ನೈಸರ್ಗಿಕ ಅನಿಲ ಬೆಲೆ ನಿಗದಿಯಾಗುತ್ತದೆ. ಯೂರಿಯಾ ಹಾಗೂ ಪೆಟ್ರೋ ಕೆಮಿಕಲ್ ಬೆಲೆ ಮೇಲೂ ಪರಿಣಾಮ ಬೀರಲಿದ್ದು, ಬೆಲೆ ಹೆಚ್ಚಳವಾಗುವ ಸಾಧ್ಯತೆಯಿದೆ. ಯಾಕೆಂದರೆ ಇದರ ತಯಾರಿಕೆಗೆ ನೈಸರ್ಗಿಕ ಅನಿಲವನ್ನು ಬಳಕೆ ಮಾಡಲಾಗುತ್ತದೆ. ವಿದ್ಯುತ್ ಉತ್ಪಾದನೆ ಮೇಲೂ ಇದು ಪ್ರಭಾವ ಉಂಟುಮಾಡುವ ಸಾಧ್ಯತೆಯಿದೆ. ಎಷ್ಟೇ ದುಡಿದರು ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಈ ಟಿಪ್ಸ್ ಪಾಲಿಸಿ..


Click it and Unblock the Notifications