For Quick Alerts
ALLOW NOTIFICATIONS  
For Daily Alerts

ಗುಡ್ ನ್ಯೂಸ್! ಎಟಿಎಂ ಕಾರ್ಡ್ ಇಲ್ಲದೆ ಹಣ ವಿತ್ ಡ್ರಾ, ಹೇಗೆ ಗೊತ್ತಾ..?

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಯೋನೊ ಅಪ್ಲಿಕೇಶನ್ ಮೂಲಕ ಕಾರ್ಡು ರಹಿತ ನಗದು ಹಿಂಪಡೆಯುವಿಕೆಯನ್ನು ಸುಲಭಗೊಳಿಸಲು ಯೊನೋ ಕ್ಯಾಶ್ ಅನ್ನು ಪರಿಚಯಿಸಿದೆ.

|

ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಯೋನೊ ಅಪ್ಲಿಕೇಶನ್ ಮೂಲಕ ಕಾರ್ಡು ರಹಿತ ನಗದು ಹಿಂಪಡೆಯುವಿಕೆಯನ್ನು ಸುಲಭಗೊಳಿಸಲು ಯೊನೋ ಕ್ಯಾಶ್ ಅನ್ನು ಪರಿಚಯಿಸಿದೆ. ಈ ಸೇವೆಗಾಗಿ ಸಕ್ರಿಯಗೊಳಿಸಲಾದ ಎಟಿಎಂಗಳನ್ನು ಎಸ್ಬಿಐ ಯೋನೊ ಕ್ಯಾಶ್ ಪಾಯಿಂಟ್ ಎಂದು ಕರೆಯಲಾಗುತ್ತದೆ.

ಯೋನೊ ಕ್ಯಾಶ್ ಎಸ್ಬಿಐ ಸಹಯೋಗದೊಂದಿಗೆ ಬಿಡುಗಡೆಯಾಗಿದ್ದು, ಎಸ್ಬಿಐ ಉದ್ಯಮದಲ್ಲಿ ಈ ಸೇವೆಯನ್ನು ನೀಡುವ ಮೊದಲ ಬ್ಯಾಂಕ್ ಎನಿಸಿದೆ.

ಎಸ್ಬಿಐ ಯೋನೊ ಕ್ಯಾಶ್ ಪ್ರಯೋಜನ

ಎಸ್ಬಿಐ ಯೋನೊ ಕ್ಯಾಶ್ ಪ್ರಯೋಜನ

ಎಟಿಎಂ ಕಾರ್ಡ್ ಇಲ್ಲದೇ ಹಣ ವಿತ್ ಡ್ರಾ ಮಾಡುವುದರಿಂದ ಸ್ಕಿಮ್ಮಿಂಗ್ ಮತ್ತು ಕ್ಲೋನಿಂಗ್ ಅಪಾಯವನ್ನು ತೊಡೆದು ಹಾಕುತ್ತದೆ. ಎಸ್ಬಿಐ ಯೋನೊ ಕ್ಯಾಶ್ ತನ್ನ ಭದ್ರತಾ ವೈಶಿಷ್ಟ್ಯದಿಂದ ಮತ್ತು ಕಾರ್ಡ್-ರಹಿತ ಹಣ ವಿತ್ ಡ್ರಾ ಅನುಕೂಲದಿಂದ ಗ್ರಾಹಕರು ಹಲವು ಲಾಭಗಳನ್ನು ತಮ್ಮದಾಗಿಸಬಹುದು. ಈ ಸೇವೆ ಮೂಲಕ ಎಟಿಎಂ ಕಾರ್ಡ್ ನಿಂದಾಗುವ ಮೋಸವನ್ನು ತಪ್ಪಿಸಬಹುದಾಗಿದೆ.

ಸೇವೆ ಪಡೆಯುವುದು ಹೇಗೆ?

ಸೇವೆ ಪಡೆಯುವುದು ಹೇಗೆ?

YONO ಕ್ಯಾಶ್ ಮೂಲಕ ನಗದು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯು 2 ಹಂತಗಳ ದೃಢೀಕರಣದೊಂದಿಗೆ ಸುರಕ್ಷಿತ ವಹಿವಾಟು ಮಾಡಬಹುದು. ಗ್ರಾಹಕರು YONO ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡುವ ಮೂಲಕ ಪ್ರಾರಂಭಿಸಬೇಕು. ವ್ಯವಹಾರಕ್ಕಾಗಿ ಆರು ಅಂಕಿಯ YONO ಕ್ಯಾಶ್ PIN ಅನ್ನು ಜನರೇಟ್ ಮಾಡಬೇಕು. ಯೋನೊ ಆಪ್ ನಲ್ಲಿ ಹಣ ವರ್ಗಾವಣೆಗೆ 6 ಡಿಜಿಟಲ್ ಪಿನ್ ನೀಡಲಾಗುವುದು. ಮೊಬೈಲ್ ನಲ್ಲಿ ಎಸ್ಎಂಎಸ್ ಮೂಲಕ 6 ಅಂಕಿಯ ರೆಫರೆನ್ಸ್ ನಂಬರ್ ಕೂಡ ಸಿಗಲಿದೆ.

ಹಣ ವಿತ್ ಡ್ರಾ ಪ್ರಕ್ರಿಯೆ

ಹಣ ವಿತ್ ಡ್ರಾ ಪ್ರಕ್ರಿಯೆ

ಆಂಡ್ರಾಯ್ಡ್ ಮತ್ತು ಐಒಎಸ್ ಚಾಲಿತ ಮೊಬೈಲ್ ಫೋನ್ ಗಳ ಮೂಲಕ ಮತ್ತು ವೆಬ್ ನಲ್ಲಿ ಒಂದು ಬ್ರೌಸರ್ ಮೂಲಕ ಯೋನೊವನ್ನು ಪ್ರವೇಶಿಸಬಹುದು. ಹಣ ವಿತ್ ಡ್ರಾ ಪ್ರಕ್ರಿಯೆಯನ್ನು ಪ್ರಾರಂಭಿಸುವಾಗ ಗ್ರಾಹಕರು SMS ಮೂಲಕ ನೋಂದಾಯಿತ ಮೊಬೈಲ್ ಸಂಖ್ಯೆಗೆ ಆರು ಅಂಕಿಯ ರೆಫರೆನ್ಸ್ ಸಂಖ್ಯೆಯನ್ನು ಪಡೆಯುತ್ತಾರೆ. ಕ್ಯಾಶ್ ಪಡೆಯಲು ಹತ್ತಿರದ YONO ಕ್ಯಾಶ್ ಪಾಯಿಂಟ್ ನಲ್ಲಿ 30 ನಿಮಿಷಗಳ ಒಳಗಾಗಿ ಪಿನ್ ನ್ನು ಬಳಸಬೇಕಾಗಿದೆ.

Read more about: sbi banking money atm
English summary

Now withdraw cash at bank ATMs without any card; Here’s how

SBI the country’s largest scheduled commercial bank, has introduced YONO Cash to facilitate cardless cash withdrawal through the YONO app
Story first published: Friday, March 15, 2019, 16:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X