For Quick Alerts
ALLOW NOTIFICATIONS  
For Daily Alerts

ಶಾಕಿಂಗ್ ನ್ಯೂಸ್! ಎಸಿ, ಫ್ರಿಜ್, ಟಿವಿ ಸೇರಿದಂತೆ ಗ್ರಾಹಕ ಸರಕುಗಳು ದುಬಾರಿ

ನೀವು ಬೇಸಿಗೆಯಲ್ಲಿ ಎಸಿ, ಫ್ರಿಜ್, ಟಿವಿ ಅಥವಾ ಇತರ ಯಾವುದೇ ಮನೆಯ ಉಪಕರಣಗಳನ್ನು ಖರೀದಿಸುವುದರ ಕುರಿತು ಯೋಚಿಸುತ್ತಿದ್ದರೆ, ಅದನ್ನು ತ್ವರಿತವಾಗಿ ಖರೀದಿಸಿ. ಮುಂಬರುವ ದಿನಗಳಲ್ಲಿ ಈ ಉತ್ಪನ್ನಗಳು ದುಬಾರಿಯಾಗಬಹುದು.

|

ನೀವು ಬೇಸಿಗೆಯಲ್ಲಿ ಎಸಿ, ಫ್ರಿಜ್, ಟಿವಿ ಅಥವಾ ಇತರ ಯಾವುದೇ ಮನೆಯ ಉಪಕರಣಗಳನ್ನು ಖರೀದಿಸುವುದರ ಕುರಿತು ಯೋಚಿಸುತ್ತಿದ್ದರೆ, ಅದನ್ನು ತ್ವರಿತವಾಗಿ ಖರೀದಿಸಿ. ಮುಂಬರುವ ದಿನಗಳಲ್ಲಿ ಈ ಉತ್ಪನ್ನಗಳು ದುಬಾರಿಯಾಗಬಹುದು. ಏರ್ ಕಂಡಿಷನರ್, ಫ್ರಿಜ್, ವಾಷಿಂಗ್ ಮಷಿನ್ ಮತ್ತು ಮೈಕ್ರೋವೇವ್ ಓವನ್ ಗಳಲ್ಲಿ ಬಳಸಲಾಗುವ ಕಚ್ಚಾ ಸಾಮಗ್ರಿಗಳ ಮೇಲೆ ಕೇಂದ್ರ ಸರ್ಕಾರವು ಆಮದು ಸುಂಕವನ್ನು ಹೆಚ್ಚಿಸುತ್ತಿದೆ. 2017 ರಿಂದ ಈ ಉತ್ಪನ್ನಗಳ ಬೆಲೆ ಶೇ. 8-12 ಹೆಚ್ಚಾಗಿದೆ.

 

ಕಳೆದ ವರ್ಷ ಆಮದು ಸುಂಕ 7.5 ರಿಂದ ಶೇ 10 ಕ್ಕೆ ಏರಿಕೆ

ಕಳೆದ ವರ್ಷ ಆಮದು ಸುಂಕ 7.5 ರಿಂದ ಶೇ 10 ಕ್ಕೆ ಏರಿಕೆ

ವಾಣಿಜ್ಯ ಸಚಿವಾಲಯವು ಎಸಿ ಮತ್ತು ಫ್ರಿಜ್ ಕಂಪ್ರೆಸರ್ ಮತ್ತು ಕಂಡೆನ್ಸರ್ ಮೇಲೆ ಹಚ್ಚುವ ಉಕ್ಕು ಹಾಳೆ ಮತ್ತು ತಾಮ್ರದ ಕೊಳವೆಗಳ ಮೇಲೆ ಕಸ್ಟಮ್ ಸುಂಕ ಹೆಚ್ಚಿಸುವ ಪ್ರಸ್ತಾವನೆಯನ್ನು ಪರಿಗಣಿಸುತ್ತಿದೆ. ಕಳೆದ ವರ್ಷ ಸರ್ಕಾರ ಕಂಪ್ರೆಸರ್ ಮೇಲೆ ಆಮದು ಸುಂಕ ಶೇ. 7.5 ರಿಂದ ಶೇ. 10 ರಷ್ಟು ಹೆಚ್ಚಿಸಿದೆ. ಸಂಪೂರ್ಣ ಎಸಿ, ರೆಫ್ರಿಜರೇಟರ್ ಮತ್ತು ವಾಷಿಂಗ್ ಮಷಿನ್ ಮೇಲೆ ತೆರಿಗೆ ದುಪ್ಪಟ್ಟುಗೊಳಿಸಿ ಶೇ. 20ರಷ್ಟು ಏರಿಸಲಾಗಿತ್ತು.

ತಯಾರಕರ ಸಮಸ್ಯೆ ಹೆಚ್ಚಾಗಬಹುದು

ತಯಾರಕರ ಸಮಸ್ಯೆ ಹೆಚ್ಚಾಗಬಹುದು

ಅಲ್ಲದೆ ಬಿಸಿನೆಸ್ ಸ್ಟ್ಯಾಂಡರ್ಡ್ ಪ್ರಕಾರ, ಸರ್ಕಾರದ ಈ ನಿರ್ಧಾರದಿಂದ ತಯಾರಕರ ಸಮಸ್ಯೆ ಹೆಚ್ಚಬಹುದು ಎಂದು ಹೇಳಿದೆ. ಕಳೆದ ಬಾರಿ ಆಮದು ಸುಂಕದ ಹೆಚ್ಚಳದಿ ದಾಗಿ ತಯಾರಕರು ಈ ಉತ್ಪನ್ನಗಳ ಬೆಲೆಯನ್ನು ಏ. 3-5ಕ್ಕೆ ಹೆಚ್ಚಿಸಬೇಕಾಗಿತ್ತು. ಆಮದು ಸುಂಕ ಹೆಚ್ಚಿದ ಕಾರಣ ಸ್ಥಳೀಯ ಉತ್ಪಾದಕರು ನಷ್ಟವನ್ನು ಅನುಭವಿಸಬೇಕಾಗಬಹುದು. ಹೆಚ್ಚಿನ ಉತ್ಪಾದನಾ ಕಂಪನಿಗಳು ಟಿವಿ ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ ಕಸ್ಟಮ್ ತೆರಿಗೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಬೇಡಿಕೆ ಇಟ್ಟಿವೆ.

ಕಚ್ಚಾ ಸಾಮಗ್ರಿಗಳ ವಾಣಿಜ್ಯ ತೆರಿಗೆ ಹೆಚ್ಚಳಕ್ಕೆ ವ್ಯಾಪಾರಿಗಳ ವಿರೋಧ
 

ಕಚ್ಚಾ ಸಾಮಗ್ರಿಗಳ ವಾಣಿಜ್ಯ ತೆರಿಗೆ ಹೆಚ್ಚಳಕ್ಕೆ ವ್ಯಾಪಾರಿಗಳ ವಿರೋಧ

ಮತ್ತೊಂದೆಡೆ, ಎಲ್ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಉಪಾಧ್ಯಕ್ಷ ವಿಜಯ್ ಬಾಬು ಪ್ರಕಾರ, ಈ ಕಂಪನಿಯು ಈ ತೆರಿಗೆ ಹೆಚ್ಚಳದ ವಿಷಯವನ್ನು ಕೇಂದ್ರ ಸರಕಾರದ ಮುಂದೆ ಇಟ್ಟಿದೆ. ಎಲ್ಜಿ ಹೊರತುಪಡಿಸಿ, ಲಾಯ್ಡ್, ಪ್ಯಾನಾಸೊನಿಕ್, ಸ್ಯಾಮ್ಸಂಗ್ ಸಂಸ್ಥೆಗಳು ಗ್ರಾಹಕರ ಎಲೆಕ್ಟ್ರಾನಿಕ್ಸ್ ಮತ್ತು ಅಪ್ಲೈಯನ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಶನ್ (ಸಿಇಎಂಎ) ಮೂಲಕ ತಮ್ಮ ಅಭಿಪ್ರಾಯವನ್ನು ಸರ್ಕಾರದ ಮುಂದೆ ಇರಿಸಿವೆ.
ದೇಶದಲ್ಲಿ ಕಂಪೊನೆಂಟ್ಸ್ ಉತ್ಪಾದನೆಗೆ ಯಾವುದೇ ಪೂರಕ ಪರಿಸರ ವ್ಯವಸ್ಥೆ ಇಲ್ಲದಿರುವುದರಿಂದ ಕಸ್ಟಮ್ ಸುಂಕವನ್ನು ಹೆಚ್ಚಿಸಬಾರದು ಎಂದು CEAMA ಅಧ್ಯಕ್ಷ ಕಮಲ್ ನಂದಿ ಹೇಳಿದ್ದಾರೆ.

Read more about: money business finance news
English summary

Centre likely to hike import duty on consumer durables yet again

Not content with raising the import duty on key components of television (TV) sets last year, the government is now mulling another round of duty hike.
Story first published: Monday, March 18, 2019, 15:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X