ಪೇಟಿಎಂ ನಂತೆ ಇದೀಗ ಮಿ ಪೇ ಆಪ್ ಮಾರುಕಟ್ಟೆ ಪ್ರವೇಶಿಸಿದೆ. ಚೀನಾದ ಶಿಯೋಮಿ ಸಂಸ್ಥೆ ಭಾರತದಲ್ಲಿ ಮಿ ಪೇ ಆಪ್ ಬಿಡುಗಡೆ ಮಾಡಿದ್ದು, ಚೀನಾ ನಂತರ ಭಾರತದಲ್ಲಿ ಮಿ ಪೇ ಕಾರ್ಯಾರಂಭಿಸಲಿದೆ. ಈ ಪೇಮೆಂಟ್ ಸೇವೆ ಯುಪಿಐ ಆಧರಿಸಿದೆ.
ಪೇಟಿಎಂ ನಂತೆ ಇದೀಗ ಮಿ ಪೇ ಆಪ್ ಮಾರುಕಟ್ಟೆ ಪ್ರವೇಶಿಸಿದೆ. ಚೀನಾದ ಶಿಯೋಮಿ ಸಂಸ್ಥೆ ಭಾರತದಲ್ಲಿ ಮಿ ಪೇ ಆಪ್ ಬಿಡುಗಡೆ ಮಾಡಿದ್ದು, ಚೀನಾ ನಂತರ ಭಾರತದಲ್ಲಿ ಮಿ ಪೇ ಕಾರ್ಯಾರಂಭಿಸಲಿದೆ. ಈ ಪೇಮೆಂಟ್ ಸೇವೆ ಯುಪಿಐ ಆಧರಿಸಿದೆ.
ಗೂಗಲ್ ಪೇ ನಂತೆಯೇ ಮಿ ಪೇ ಕೆಲಸ ಮಾಡಲಿದೆ. ಮಿ ಪೇ ಬಳಕೆ ಸುಲಭವಾಗಿದ್ದು, ಗೂಗಲ್ ಪೇನಂತೆ ಫೋನ್ ನಂಬರ್ ಮೂಲಕ ಖಾತೆ ವಿವರಗಳನ್ನು ಪಡೆಯಬಹುದು. ಇದು ಪೇಟಿಎಂ, ಗೂಗಲ್ ಪೇ ನಂತಹ ಮನಿ ಆಪ್ ಗಳಿಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ.
ಮಿ ಪೇ ಬಳಕೆದಾರರಿಗೆ ಆಫರ್
ಮಿ ಪೇ ಗ್ರಾಹಕರಿಗೆ ರೆಡ್ ಮಿ ನೋಟ್ 7 ಸ್ಮಾರ್ಟ್ಫೋನ್ ಹಾಗೂ ಮಿ ಟಿವಿ ಖರೀದಿ ಮಾಡುವ ಅವಕಾಶ ಸಿಗಲಿದೆ. ಮಿ ಪೇ ಬಳಕೆದಾರರಿಗೆ ಶಿಯೋಮಿ ಹೊಸ ಹೊಸ ಕೊಡುಗೆಗಳನ್ನು ನೀಡಲಿದೆ. ಗ್ರಾಹಕರು MIUI ಅಪ್ಡೇಟ್ ಮಾಡಿದಾಗ ಮಿ ಪೇ ಸಿಗಲಿದೆ.
ಹಣ ವರ್ಗಾವಣೆ
ಮಿ ಪೇಗೆ ಕ್ಯೂಆರ್ ಕೋಡ್ ಕೂಡ ನೀಡಲಾಗಿದ್ದು, ಇದನ್ನು ಸ್ಕ್ಯಾನ್ ಮಾಡಿ ಹಣವನ್ನು ವರ್ಗಾವಣೆ ಮಾಡಬಹುದು. ಹಣಕ್ಕೆ ವಿನಂತಿ ಸಲ್ಲಿಸಬಹುದು. ಶಿಯೋಮಿ ಪ್ರಕಾರ ಎಸ್ಎಂಎಸ್ ಮೂಲಕ ಬಳಸಬಹುದಾಗಿದ್ದು, ಶಿಯೋಮಿ ಸ್ಮಾರ್ಟ್ಫೋನ್ ನಿಮ್ಮ ಬಳಿಯಿದ್ದರೆ ನೀವು ಕಂಪನಿಗೆ ಎಸ್ಎಂಎಸ್ ಕಳುಹಿಸಿ ಮಿ ಪೇ ಸೌಲಭ್ಯ ಪಡೆಯಿರಿ.
ಮಿ ಪೇ ಸೇವೆಗಳು
ಮೊಬೈಲ್ ರಿಚಾರ್ಜ್
ಕರೆಂಟ್ ಬಿಲ್
ನೀರಿನ ಬಿಲ್
ಗ್ಯಾಸ್ ಬಿಲ್
ಟೆಲಿಫೋನ್ ಬಿಲ್
ಪ್ರಿಪೇಡ್ ಫೋನ್ ಬಿಲ್ ರೀಚಾರ್ಜ್ ಸೇರಿದಂತೆ ಎಲ್ಲ ಬಿಲ್ ಗಳನ್ನು ಇದರಲ್ಲಿ ಪಾವತಿ ಮಾಡಬಹುದು.
ಭಾರೀ ಪೈಫೋಟಿ
ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಮಿ ಪೇ ಭಾರೀ ಪೈಫೋಟಿ ಯನ್ನು ಎದುರಿಸಬೇಕಾಗುತ್ತದೆ. ಗೂಗಲ್ ಪೇ, ಪೇಟಿಎಂ, ಫೋನ್ ಪೇ, ಮೊಬಿಕ್ವಿಕ್ ನಂತಹ ಆಪ್ ಗಳು ಭಾರತದಲ್ಲಿ ಈಗಾಗಲೇ ತಮ್ಮ ವ್ಯಾಪಕ ಜಾಲವನ್ನು ಹೊಂದಿವೆ.
ಮಿಪೇ ಆಪ್ ನ್ನು ಗೂಗಲ್ ಸ್ಟೋರ್ ನಿಂದ ಡೌನ್ಲೋಡ್ ಮಾಡಲು ಸಾಧ್ಯವಿಲ್ಲ. ಶಿಯೋಮಿ ಮೊಬೈಲ್ ಹೊಂದಿದವರಿಗೆ ಮಾತ್ರ ಈ ಆಪ್ ಸಿಗಲಿದೆ.


Click it and Unblock the Notifications