ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ರೂ. 199 ರೂಪಾಯಿ ರೂ. 499 ಪ್ರಿಪೇಡ್ ಯೋಜನೆಯ ಘೋಷಣೆ ಮಾಡಿದ್ದು, ಈ ಯೋಜನೆಯಲ್ಲಿ ಗ್ರಾಹಕರಿಗೆ ಉಚಿತವಾಗಿ ಕ್ರಿಕೆಟ್ ಎಸ್ಎಂಎಸ್ ಅಪ್ಡೇಟ್ ಸಿಗಲಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ರೂ. 199 ರೂಪಾಯಿ ರೂ. 499 ಪ್ರಿಪೇಡ್ ಯೋಜನೆಯ ಘೋಷಣೆ ಮಾಡಿದ್ದು, ಈ ಯೋಜನೆಯಲ್ಲಿ ಗ್ರಾಹಕರಿಗೆ ಉಚಿತವಾಗಿ ಕ್ರಿಕೆಟ್ ಎಸ್ಎಂಎಸ್ ಅಪ್ಡೇಟ್ ಸಿಗಲಿದೆ.
ಐಪಿಎಲ್ ಕ್ರಿಕೆಟ್ ಸರಣಿ ನಡೆಯುತ್ತಿರುವ ಸಂದರ್ಭದಲ್ಲಿ ಬಿಎಸ್ಎನ್ಎಲ್ ಕಂಪನಿ ಹೊಸ ಐಪಿಎಲ್ ಯೋಜನೆಗಳನ್ನು ಆರಂಭಿಸಿದೆ. ಇದು ಹಲವಾರು ಪ್ರಯೋಜನಗಳನ್ನು ತನ್ನ ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.
ರೂ. 199 ಯೋಜನೆ
ಐಪಿಎಲ್ ರೀಚಾರ್ಜ್ ಪ್ಲಾನ್ ಭಾಗವಾಗಿ ಈ ಯೋಜನೆ ಮೂಲಕ ಅನಿಯಮಿತ ಕರೆ ಹಾಗೂ ಡೇಟಾ ಸೌಲಭ್ಯವನ್ನು ನೀಡಲಾಗುತ್ತಿದೆ.
ರೂ. 199 ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿದೆ. ಇದರಲ್ಲಿ ಗ್ರಾಹಕರಿಗೆ ಉಚಿತ ಕರೆ ಹಾಗೂ ದಿನಕ್ಕೆ 1 ಜಿಬಿ ಡೇಟಾ ಸಿಗಲಿದೆ.
ರೂ. 499 ಪ್ಲಾನ್
ರೂ. 499 ಪ್ಲಾನ್ 90 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದರಲ್ಲಿ ಉಚಿತ ಧ್ವನಿ ಕರೆ ಸೌಲಭ್ಯ, ಪ್ರತಿ ದಿನ 1 ಜಿಬಿ ಡೇಟಾವನ್ನು ಗ್ರಾಹಕರಿಗೆ ನೀಡುತ್ತಿದೆ. ಅಂದರೆ 90 ದಿನಗಳಿಗೆ ಒಟ್ಟು 90 ಜಿಬಿ ಡೇಟಾ ಪಡೆಯಬಹುದು. 499 ರೂಪಾಯಿ ಪ್ಲಾನ್ ನಲ್ಲಿ ಪ್ರತಿ ದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. 4ಜಿ ಸಿಮ್ ಗೆ ಅಪ್ಗ್ರೇಡ್ ಆಗುವ ಗ್ರಾಹಕರಿಗೆ ಬಿಎಸ್ಎನ್ಎಲ್ ಉಚಿತ ಡೇಟಾ ಸೌಲಭ್ಯ ನೀಡುತ್ತಿದೆ.
VoLTE ಸೇವೆ
ಹೆಚ್ಚುವರಿಯಾಗಿ, BSNL ತನ್ನ ಕೆಲವು ವಲಯಗಳಲ್ಲಿ VoLTE ಸೇವೆಗಳನ್ನು ನೀಡಲು ಪ್ರಾರಂಭಿಸಿದೆ. ಹೊಸದಾಗಿ ಬಿಡುಗಡೆಯಾದ 4 ಜಿ ಸೇವೆಯ ವ್ಯಾಪಕವಾಗಿ ಹರಡಲು, ಬಿಎಸ್ಎನ್ಎಲ್ 4 ಜಿ ಸಿಮ್ ನವೀಕರಿಸುತ್ತಿರುವ ಚಂದಾದಾರರಿಗೆ ಉಚಿತ ಡೇಟಾವನ್ನು ನೀಡಲು ಪ್ರಾರಂಭಿಸಿದೆ. ಬಿಎಸ್ಎನ್ಎಲ್ ಜನವರಿಯಲ್ಲಿ ಘೋಷಿಸಿದಂತೆ, 4 ಜಿ ಸಿಮ್ ಅಪ್ಗ್ರೇಡ್ ಮಾಡುವ ಚೆನ್ನೈ ವಲಯದಲ್ಲಿ ಚಂದಾದಾರರು ಉಚಿತ ಬೋನಸ್ ಡೇಟಾ ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಕೇರಳ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ವಲಯಗಳಲ್ಲಿ ಲಭ್ಯವಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಶೀಘ್ರದಲ್ಲೇ ಗುಜರಾತ್ ನಲ್ಲಿ ಲಭ್ಯವಿರುತ್ತದೆ.


Click it and Unblock the Notifications