ಭಾರತಕ್ಕೆ ಬಂದ ಖ್ಯಾತ ಒಳ ಉಡುಪುಗಳ ಬ್ರಾಂಡ್ ವಾಕೋಲ್

ಬೆಂಗಳೂರು, ಮಾರ್ಚ್ 27: ಜಪಾನ್ನಿನ ಅಅಗ್ರಗಣ್ಯ ಒಳ ಉಡುಪುಗಳ ಬ್ರಾಂಡ್ ಆದ ವಾಲೋಕ್ ಭಾರತದಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದೆ. ಕಂಪನಿಯ ಜಾಗತಿಕ ಪ್ರಗತಿ ಕಾರ್ಯತಂತ್ರದ ಅಂಗವಾಗಿ, ಭಾರತದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಿದೆ.

ವ್ಯವಹಾರದ ಗಾತ್ರದಲ್ಲಿ ಹೆಚ್ಚಳವನ್ನು ಸೃಷ್ಟಿಸುವ ಸಲುವಾಗಿ ತನ್ನ ಬಲವನ್ನು 12 ಮಳಿಗೆಗಳಿಂದ 70 ಎಕ್ಸ್ ಕ್ಲೂಸಿವ್ ಮಳಿಗೆಗಳಿಗೆ ವಿಸ್ತರಿಸಲು ಮತ್ತು 80 ಮಾರಾಟ ಮಳಿಗೆಗಳನ್ನು ತೆರೆಯಲು ಹಾಗೂ ದೇಶಾದ್ಯಂತ 150 ಮಳಿಗೆಗಳನ್ನು ಆರಂಭಿಸಲು ಉದ್ದೇಶಿಸಿದೆ.

ಹಾಲಿ ಇರುವ ಮಾರುಕಟ್ಟೆಯಲ್ಲಿ ಅಂದರೆ ಮುಂಬೈ, ದೆಹಲಿ, ಪುಣೆ, ಚೆನ್ನೈ, ಬೆಂಗಳೂರು ಹಾಗೂ ಕೊಲ್ಕತ್ತಗಳಲ್ಲಿ ಹೆಚ್ಚು ಮಳಿಗೆಗಳನ್ನು ಸ್ಥಾಪಿಸುವ ಜತೆಗೆ ವಾಕೋಲ್, ಹಾಲಿ ಇರುವ ಕಾರ್ಯಾಚರಣೆ ಚಾಲದ ಲಾಭ ಪಡೆದು ನಾಲ್ಕೂ ವಲಯಗಳಲ್ಲಿ ಅಂದರೆ ಪಶ್ಚಿಮ (ಮುಂಬೈ), ಉತ್ತರ (ದೆಹಲಿ), ದಕ್ಷಿಣ (ಚೆನ್ನೈ) ಹಾಗೂ ಪೂರ್ವ (ಕೊಲ್ಕತ್ತಾ)ಗಳ ಅಗ್ರ 10 ನಗರಗಳ ಮೇಲೆ ತೀವ್ರ ಗಮನ ಹರಿಸಲು ನಿರ್ಧರಿಸಿದೆ.

ಮುಂದಿನ ದೊಡ್ಡ ಹೆಜ್ಜೆಗಳಾಗಿ, ಈ ಬ್ರಾಂಡ್ 1 ಮತ್ತು 2ನೆ ಸ್ತರದ 30ಕ್ಕೂ ಹೆಚ್ಚು ನಗರಗಳಿಗೆ ಲಗ್ಗೆ ಹಾಕಲು ನಿರ್ಧರಿಸಿದೆ. ಇದರಲ್ಲಿ ಪ್ರಮುಖವಾಗಿ ನಾಸಿಕ್, ರಾಜಕೋಟ್, ಅಲಹಾಬಾದ್, ನಾಗ್ಪುರ ಮತ್ತು ಇಂಧೋರ್ ಸೇರಿವೆ.

ಪ್ರಮುಖ ಇ-ವಾಣಿಜ್ಯ ಪ್ಲಾಟ್‍ಫಾರಂ ಜತೆ ಮೈತ್ರಿ

ಪ್ರಮುಖ ಇ-ವಾಣಿಜ್ಯ ಪ್ಲಾಟ್‍ಫಾರಂ ಜತೆ ಮೈತ್ರಿ

ವಾಕೋಲ್ ಭಾರತದಲ್ಲಿ ಪ್ರಮುಖ ಇ-ವಾಣಿಜ್ಯ ಪ್ಲಾಟ್‍ಫಾರಂಗಳಾದ ಮಿಂತ್ರಾ, ಜಬಾಂಬ್, ಟಾಟಾ ಕ್ಲಿಕ್ ಜತೆ ಪಾಲುದಾರಿಕೆ ಮಾಡಿಕೊಂಡು ಮತ್ತು ತನ್ನ ಸ್ವಂತ ವೆಬ್‍ಸೈಟ್ ಮೂಲಕ ತನ್ನ ಮಾರಾಟವನ್ನು ಹೆಚ್ಚಿಸಲು ಕೂಡಾ ಉದ್ದೇಶಿಸಿದೆ. ಇದರ ಜತೆಗೆ ಕ್ರಾಸ್ ಪ್ಲಾಟ್‍ಫಾರಂ ಮಾರಾಟ ಮತ್ತು ಪಿಆರ್ ಅಭಿಯಾನವನ್ನೂ ಹಮ್ಮಿಕೊಳ್ಳಲಾಗುತ್ತದೆ.

ನಿರ್ದೇಶಕ ಟೊಮೊಯೊಸು ಇಟೊ

ನಿರ್ದೇಶಕ ಟೊಮೊಯೊಸು ಇಟೊ

ಈ ಘೋಷಣೆಯ ಬಗ್ಗೆ ಮಾತನಾಡಿದ ವಾಕೋಲ್ ಕಾರ್ಪೊರೇಷನ್‍ನ ಅಧ್ಯಕ್ಷ ಮತ್ತು ಪಾರ್ಪೊರೇಟ್ ಅಧಿಕಾರಿ, ಪ್ರತಿನಿಧಿ ನಿರ್ದೇಶಕ ಟೊಮೊಯೊಸು ಇಟೊ, "ವಾಕೋಲ್ 2015ರಲ್ಲಿ ಭಾರತಕ್ಕ ಆಗಮಿಸಿದ ಕ್ಷಣದಿಂದಲೇ ನಾವು ಅದ್ಭುತ ಪ್ರಗತಿಯನ್ನು ಕಾಣುತ್ತಿದ್ದೇವೆ. ಈ ವಿಸ್ತರಣೆಯೊಂದಿಗೆ, ನಮ್ಮ ಸಂಪೂರ್ಣ ಶಕ್ತಿಯನ್ನು ಕಂಡುಕೊಳ್ಳಲು ನಾವು ಮುಂದಾಗುತ್ತಿದ್ದು, ದೇಶದ ವಿಲಾಸಿ ಒಳ ಉಡುಪುಗಳ ಮಾರುಕಟ್ಟೆಯಲ್ಲಿ ದೇಶದಲ್ಲೇ ಅಗ್ರಗಣ್ಯ ಸಂಸ್ಥೆಯಾಗಿ ನಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲಿದ್ದೇವೆ.

ಒಳ ಉಡುಪುಗಳ ವಿಸ್ತೃತ ಶ್ರೇಣಿ

ಒಳ ಉಡುಪುಗಳ ವಿಸ್ತೃತ ಶ್ರೇಣಿ

ಹೆಚ್ಚುವರಿ ಮೆಟ್ರೊಗಳಲ್ಲಿ ನಮ್ಮ ಅಸ್ತಿತ್ವದಿಂದಾಗಿ, ಆಧುನಿಕ ಮಹಿಳೆಯ ಈವನದ ಪ್ರಮುಖ ಅಂಶವಾದ ನಮ್ಮ ಸೂಕ್ತ ಹಾಗೂ ಆರಾಮದಾಯಕ ಒಳ ಉಡುಪುಗಳ ವಿಸ್ತೃತ ಶ್ರೇಣಿಯನ್ನು ಹೆಚ್ಚಿನ ಗ್ರಾಹಕರಿಗೆ ಪರಿಚಯಿಸಲು ಸಾಧ್ಯವಾಗಲಿದೆ. ಆರಂಭದಿಂದಲೂ ನಮ್ಮ ಅದ್ಭುತ ಯಶಸ್ಸು, ವಾಕೋಲ್ ಬ್ರಾಂಡನ್ನು ಭಾರತದ ಒಳ ಉಡುಪುಗಳ ಕ್ಷೇತ್ರದಲ್ಲಿ ಅಸಾಧಾರಣ ಅಸ್ತಿತ್ವವನ್ನು ಪ್ರಸ್ತುತಪಡಿಸಿದೆ. ವಾಕೋಲ್‍ನ ವಿನೂತನ, ಅಪರಿಮಿತ ಸಂಗ್ರಹಗಳ ಅಪೇಕ್ಷೆಯನ್ನು ಹೊಂದಿದ ಪ್ರೌಢ ಮಾರುಕಟ್ಟೆಯಾಗಿ ಭಾರತವನ್ನು ಬಿಂಬಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ" ಎಂದು ಬಣ್ಣಿಸಿದರು.

ವಾಕೋಲ್ ಉತ್ಪನ್ನಗಳ ಬೆಲೆ ರೂಪಾಯಿ 995-3995

ವಾಕೋಲ್ ಉತ್ಪನ್ನಗಳ ಬೆಲೆ ರೂಪಾಯಿ 995-3995

ಅತ್ಯುತ್ಕೃಷ್ಟ, ಸೂಕ್ತ, ಗುಣಮಟ್ಟದ ವಿಶಿಷ್ಟ ಕಸುವಿನ ಉತ್ಪನ್ನಗಳು ಹಾಗೂ ವಾಕೋಲ್‍ನ ಮಾನವ ವಿಜ್ಞಾನ ಸಂಶೋಧನಾ ಕೇಂದ್ರದ ತೀವ್ರ ಉತ್ಪನ್ನ ಸಂಶೋಧನೆಗಳಿಗೆ ವಾಕೋಲ್ ಹೆಸರಾಗಿದೆ. ಗ್ರಾಹಕರ ಅನುಭವವನ್ನು ವಿಸ್ತೃತಗೊಳಿಸುವ ಸಲುವಾಗಿ, ಭಾರತದ ಗ್ರಾಹಕರಿಗಾಗಿಯೇ ವಿಶೇಷವಾದ ಹೊಸ ಉತ್ಪನ್ನಗಳನ್ನು ಪರಿಚಯಿಸುವ ಗುರಿ ಹಾಕಿಕೊಂಡಿದೆ. ಸ್ಥಳೀಯ ಶೈಲಿ ಮತ್ತು ಬಣ್ಣಕ್ಕೆ ಹೊಂದಿಕೆಯಾಗುವಂತೆ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ವಿಸ್ತೃತ ಶ್ರೇಣಿ ಇದರಲ್ಲಿ ಸೇರಿದೆ. ಎಲ್ಲ ವಾಕೋಲ್ ಉತ್ಪನ್ನಗಳ ಬೆಲೆ ರೂಪಾಯಿ 995-3995 ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+