ಏರ್ಪೋರ್ಟ್ ಉದ್ಯಮ್ಕಕೆ ಟಾಟಾ ಗ್ರೂಪ್ ಪ್ರವೇಶ, ಜಿಎಂಆರ್ ಇನ್ಫ್ರಾಸ್ಟ್ರಕ್ಚರ್ ನಲ್ಲಿ ಶೇ. 20ರಷ್ಟು ಪಾಲು ಖರೀದಿ

ಸಿಂಗಾಪುರ ಸಾವರಿನ್ ವೇಲ್ತ್ ಫಂಡ್ ಜಿಐಸಿ ಮತ್ತು ಎಸ್ಎಸ್ ಜಿ ಕ್ಯಾಪಿಟಲ್ ಮ್ಯಾನೆಜ್ಮೆಂಟ್ ಜೊತೆಗೂಡಿ ಟಾಟಾ ಗ್ರೂಪ್ ಜಿಎಂಆರ್ ಏರ್ಪೋರ್ಟ್ ಲಿಮಿಟೆಡ್ (ಜಿಎಎಲ್) ನಲ್ಲಿ ರೂ. 8 ಸಾವಿರ ಕೋಟಿ ಹೂಡಿಕೆ ಮಾಡಲಿದೆ.

ಸಿಂಗಾಪುರ ಸಾವರಿನ್ ವೇಲ್ತ್ ಫಂಡ್ ಜಿಐಸಿ ಮತ್ತು ಎಸ್ಎಸ್ ಜಿ ಕ್ಯಾಪಿಟಲ್ ಮ್ಯಾನೆಜ್ಮೆಂಟ್ ಜೊತೆಗೂಡಿ ಟಾಟಾ ಗ್ರೂಪ್ ಜಿಎಂಆರ್ ಏರ್ಪೋರ್ಟ್ ಲಿಮಿಟೆಡ್ (ಜಿಎಎಲ್) ನಲ್ಲಿ ರೂ. 8 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಎಂದು ಜಿಎಂಆರ್ ಇನ್ಫ್ರಾಸ್ಟ್ರಕ್ಚರ್ ಬುಧವಾರ ಹೇಳಿದೆ.

ಏರ್ಪೋರ್ಟ್ ಉದ್ಯಮ್ಕಕೆ ಟಾಟಾ ಗ್ರೂಪ್ ಪ್ರವೇಶ

8 ಸಾವಿರ ಕೋಟಿ ಹೂಡಿಕೆಯೊಂದಿಗೆ ಟಾಟಾ ಗ್ರೂಪ್ ಏರ್ಪೋರ್ಟ್ ಉದ್ಯಮವನ್ನು ಪ್ರವೇಶಿಸಿದೆ. 8 ಸಾವಿರ ಕೋಟಿ ಹೂಡಿಕೆ ಮೊತ್ತದಲ್ಲಿ ರೂ. 1,000 ಕೋಟಿ ಇಕ್ವಿಟಿ ಇನ್ಫ್ಯೂಷನ್ ಮತ್ತು ರೂ. 7,000 ಕೋಟಿ ಮೊತ್ತ GAL ಮತ್ತು ಅದರ ಅಂಗಸಂಸ್ಥೆಗಳ ಈಕ್ವಿಟಿ ಷೇರುಗಳ ಖರೀದಿಯನ್ನು ಒಳಗೊಂಡಿರುತ್ತದೆ ಎಂದು ಹೇಳಿದೆ.

8 ಸಾವಿರ ಕೋಟಿಯ ಬೃಹತ್ ಹೂಡಿಕೆಯ ನಂತರ, GAL ನಲ್ಲಿ ಜಿಎಂಆರ್ ಇನ್ಫ್ರಾಸ್ಟ್ರಕ್ಚರ್ ಮತ್ತು ಅದರ ಅಂಗಸಂಸ್ಥೆಗಳು ಶೇ. 54 ರಷ್ಟು ಪಾಲನ್ನು ಹೊಂದಲಿವೆ. ಟಾಟಾ ಗ್ರೂಪ್ ಶೇ. 20ರಷ್ಟು ಪಾಲು, ಜಿಐಸಿ ಶೇ. 15, ಎಸ್ಎಸ್ ಜಿ ಶೇ. 10 ರಷ್ಟು ಮತ್ತು ಎಂಪ್ಲಾಯೀಸ್ ವೆಲ್ಫೇರ್ ಟ್ರಸ್ಟ್ ಶೇ. 2ರಷ್ಟು ಪಾಲನ್ನು ಹೊಂದಲಿವೆ.

ಹೂಡಿಕೆ ನಂತರ, ಜಿಎಂಆರ್ ಇನ್ಫ್ರಾಸ್ಟ್ರಕ್ಚರ್ ಅದರ ಶಕ್ತಿ, ಹೆದ್ದಾರಿಗಳು, ನಗರ ಮೂಲಸೌಕರ್ಯ ಮತ್ತು ಸಾರಿಗೆ ವ್ಯವಹಾರಗಳನ್ನು ಪ್ರತ್ಯೇಕಿಸಲು ಉದ್ದೇಶಿಸಿದೆ, ಅದರ ವಿಮಾನ ವ್ಯವಹಾರದ ಪ್ರತ್ಯೇಕತೆಗೆ ಕಾರಣವಾಗುತ್ತದೆ, ಸಾಂಪ್ರದಾಯಿಕ ಸಮ್ಮತಿಗಳಿಗೆ, ನಿಯಂತ್ರಕ ಮತ್ತು ಕಾರ್ಪೊರೇಟ್ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.
ಬಂಡವಾಳದ ನಂತರ ಜಿಎಂಆರ್ ಇನ್ಫ್ರಾಸ್ಟ್ರಕ್ಚರ್ ಹೆದ್ದಾರಿಗಳು, ಎನರ್ಜಿ, ನಗರ ಮೂಲಸೌಕರ್ಯ ಮತ್ತು ಸಾರಿಗೆ ವ್ಯವಹಾರಗಳನ್ನು ಪ್ರತ್ಯೇಕಿಸಲು ಉದ್ದೇಶಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+