ಹಣಕಾಸು ವರ್ಷದ ಕೊನೆಯ ವಹಿವಾಟನ್ನು ಶುಕ್ರವಾರ ಮುಗಿಯುತ್ತಿದ್ದಂತೆ, ಬಿಎಸ್ಇ ಸೆನ್ಸೆಕ್ಸ್ ಶೇ. 17ರಷ್ಟು ಲಾಭವನ್ನು ದಾಖಲಿಸಿತು.
ಹಣಕಾಸು ವರ್ಷದ ಕೊನೆಯ ವಹಿವಾಟನ್ನು ಶುಕ್ರವಾರ ಮುಗಿಯುತ್ತಿದ್ದಂತೆ, ಬಿಎಸ್ಇ ಸೆನ್ಸೆಕ್ಸ್ ಶೇ. 17ರಷ್ಟು ಲಾಭವನ್ನು ದಾಖಲಿಸಿತು. ಇದು ನಾಲ್ಕು ಹಣಕಾಸು ವರ್ಷಗಳಲ್ಲಿ ಸೆನ್ಸೆಕ್ಸ್ ನ ಉತ್ತಮ ಲಾಭವಾಗಿತ್ತು. 2019ರ ಹಣಕಾಸು ವರ್ಷದಲ್ಲಿ ಬಿಎಸ್ಇ ಸ್ಮಾಲ್ಕ್ಯಾಪ್ ಮತ್ತು ಮಿಡ್ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ. 12 ಮತ್ತು ಶೇ 5 ರಷ್ಟು ಇಳಿಕೆಯಾಗಿದೆ.

ದಿನದ ಅಂತ್ಯದ ವೇಳೆಗೆ ಸೆನ್ಸೆಕ್ಸ್ ಸೂಚ್ಯಂಕ 127.19 ಪಾಯಿಂಟ್ ಏರಿಕೆಯೊಂದಿಗೆ 38,672 ಅಂಶಗಳಲ್ಲಿ ಹಾಗು ನಿಪ್ಟಿ ಸೂಚ್ಯಂಕ 53.90 ಅಂಕ ಏರಿಕೆಯೊಂದಿಗೆ 11623 ಆಂಶಗಳಲ್ಲಿ ವಹಿವಾಟು ಮುಗಿಸಿದೆ.
ಜಾಗತಿಕ ಷೇರುಪೇಟೆಯಲ್ಲಿನ ಸಕರಾತ್ಮಕತೆ ಮತ್ತು ಹೆಚ್ಚಿದ ವಿದೇಶೀ ಬಂಡವಾಳದ ಒಳ ಹರಿವಿನ ಪರಿಣಾಮದಿಂದ ಮುಂಬಯಿ ಷೇರುಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ಜಿಗಿತ ಕಂಡಿತ್ತು.
ಹಣಕಾಸು, ಐಟಿ ಮತ್ತು ಎಫ್ಎಂಸಿಜಿ ಷೇರುಗಳು ಧನಾತ್ಮಕತೆಯಿಂದಾಗಿ ಬೆಂಚ್ಮಾರ್ಕ್ ಸೂಚ್ಯಂಕಗಳು ಮೂರನೇ ನೇರ ಹಣಕಾಸು ವರ್ಷದಲ್ಲಿ ಎರಡಂಕಿಯ ಆದಾಯ ಕಂಡಿದೆ.
ಬಜೆಜ್ ಫೈನಾನ್ಸ್, ಆರ್ಐಎಲ್, ಆಕ್ಸಿಸ್ ಬ್ಯಾಂಕ್, ಷೇರುಗಳು ಶೇ. 50 ರಷ್ಟು ಏರಿಕೆ ಕಂಡರೆ, ಟಿಸಿಎಸ್, ಐಸಿಐಸಿಐ ಬ್ಯಾಂಕ್, ಎಸ್ಬಿಐ ಮತ್ತು ಎಚ್ಐಎಲ್ ಷೇರುಗಳು ಶೆ. 26-50 ನಡುವಿನ ಲಾಭ ಗಳಿಸಿವೆ.
ಎನ್ಎಸ್ಇ ನಿಫ್ಟಿ ಸೂಚ್ಯಂಕ 11,600 ಅಂಕಗಳ ಮಟ್ಟವನ್ನು ದಾಟಿ ಮುನ್ನಡೆಯುವಲ್ಲಿ ಯಶಸ್ವಿಯಾಗಿತ್ತು. ಬೆಳಗ್ಗೆ 11.20ರ ಸುಮಾರಿಗೆ ಸೆನ್ಸೆಕ್ಸ್ 66.79 ಪಾಯಿಂಟ್ ಏರಿಕೆಯೊಂದಿಗೆ 38,621.51 ಅಂಶಗಳಲ್ಲಿ, ನಿಫ್ಟಿ 18.30 ಅಂಕಗಳೊಂದಿಗೆ 11,588.30 ಅಂಶಗಳಲ್ಲಿ ವ್ಯವಹಾರ ನಡೆಸಿದ್ದವು.
ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಯೆಸ್ ಬ್ಯಾಂಕ್, ಮಾರುತಿ ಸುಜುಕಿ, ಎಸ್‌ಬಿಐ, ರಿಲಯನ್ಸ್, ಟಿಸಿಎಸ್ ಷೇರುಗಳು ಹೆಚ್ಚು ಕ್ರಿಯಾಶೀಲವಾಗಿದ್ದವು.


Click it and Unblock the Notifications