ನೀವು ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರೇ? ಹಾಗಿದ್ದರೆ ಇಲ್ಲಿ ನೋಡಿ..

ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರಿಗೆ ತಮ್ಮ ನೆಚ್ಚಿನ ಚಾನೆಲ್ ಗಳನ್ನು ಆಯ್ಕೆ ಮಾಡಲು ಕೇವಲ ಎರಡು ದಿನಗಳು ಬಾಕಿ ಇವೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು.

ಕೇಬಲ್ ಟಿವಿ, ಡಿಟಿಎಚ್ ಗ್ರಾಹಕರಿಗೆ ತಮ್ಮ ನೆಚ್ಚಿನ ಚಾನೆಲ್ ಗಳನ್ನು ಆಯ್ಕೆ ಮಾಡಲು ಕೇವಲ ಎರಡು ದಿನಗಳು ಬಾಕಿ ಇವೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ನಿಯಮ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಹಿಂದಿನ ಗಡುವು ಫೆಬ್ರವರಿ 1ರಿಂದ ಮಾರ್ಚ್ 31ರವರೆಗೆ ವಿಸ್ತರಿಸಲಾಗಿತ್ತು.

ಟ್ರಾಯ್ ಹೊಸ ನಿಯಮ

ಟ್ರಾಯ್ ಹೊಸ ನಿಯಮ

ಟ್ರಾಯ್ ಹೊಸ ನಿಯಮ ಕೇಬಲ್ ಹಾಗೂ ಡಿಟಿಎಚ್ ಗ್ರಾಹಕರ ಮೇಲೆ ಪ್ರಭಾವ ಬೀರೋದು ಪಕ್ಕಾ. ಇನ್ನುಮುಂದೆ ಅಪರೇಟರ್ ಗಳು ಮನಸ್ಸಿಗೆ ಬಂದಂತೆ ಶುಲ್ಕ ವಸೂಲಿ ಮಾಡುವಂತಿಲ್ಲ. ಗ್ರಾಹಕರಿಗೆ ಕೇಬಲ್, ಡಿಟಿಎಚ್ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇರಲಿದೆ. ಗ್ರಾಹಕರು ತಾವು ಇಷ್ಟಪಡುವ ಚಾನೆಲ್ ಗಳನ್ನು ನೋಡಬಹುದು ಹಾಗು ಅವುಗಳಿಗೆ ಮಾತ್ರ ಶುಲ್ಕ ಕಟ್ಟಬಹುದು.

ಟ್ರಾಯ್ ವೆಬ್ ಅಪ್ಲಿಕೇಷನ್

ಟ್ರಾಯ್ ವೆಬ್ ಅಪ್ಲಿಕೇಷನ್

ಟ್ರಾಯ್ ವೆಬ್ ಅಪ್ಲಿಕೇಷನ್ ಆರಂಭಿಸಿದ್ದು, ಗ್ರಾಹಕರಿಗೆ ಯಾವ ಪ್ಲಾನ್ ಬೆಸ್ಟ್ ಎಂಬುದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಮಾತ್ರ ಹಣ ಪಾವತಿ ಮಾಡಬೇಕು. ಗ್ರಾಹಕರು https://channel.trai.gov.in/ ಲಿಂಕ್ ಗೆ ಹೋಗಬೇಕು. ಅಲ್ಲಿ Get Started ಮೇಲೆ ಕ್ಲಿಕ್ ಮಾಡಿ. ಅಲ್ಲಿನ ಪ್ರಶ್ನೆಗಳಿಗೆ ಉತ್ತರಿಸಿ, ನೆಚ್ಚಿನ ಚಾನೆಲ್ ಪ್ಯಾಕ್ ಆಯ್ಕೆ ಮಾಡಿಕೊಳ್ಳಬೇಕು. ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ನಿಮ್ಮ ಕೇಬಲ್ ಬಂದ್ ಆಗಲಿದೆ.

ಬೇಸಿಕ್ ಪ್ಯಾಕ್ 100 ಚಾನೆಲ್ ಉಚಿತ

ಬೇಸಿಕ್ ಪ್ಯಾಕ್ 100 ಚಾನೆಲ್ ಉಚಿತ

ಮಾರ್ಚ್ ೩೧ರ ಒಳಗೆ ಗ್ರಾಹಕರು ತಮ್ಮ ಇಷ್ಟದ ಚಾನೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಗ್ರಾಹಕರಿಗೆ 100 ಏರ್ ಚಾನೆಲ್ ಗಳಿಗೆ ಉಚಿತವಾಗಿ ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡಲಾಗುತ್ತದೆ. 100 ರ ನಂತರ, ಗ್ರಾಹಕರು ಆಯ್ಕೆ ಮಾಡುವ ಚಾನಲ್ ಆಧರಿಸಿ ಪಾವತಿಸಬೇಕಾಗುತ್ತದೆ. ಬೇಸಿಕ್ ಪ್ಯಾಕೇಜ್ (Base pack) ನಲ್ಲಿ ಮಾಸಿಕ ರೂ. 130 ಶುಲ್ಕ ಪಾವತಿಸಿ 100 ಟಿವಿ ಚಾನೆಲ್ ಗಳನ್ನು ವೀಕ್ಷಿಸಬಹುದು. ಇದಕ್ಕೆ ಶೇ.18ರಷ್ಟು ಜಿಎಸ್ಟಿ ಸೇರಿ ರೂ. 153 ಪಾವತಿಸಬೇಕಿದೆ.

ಚಾನೆಲ್ ದರಪಟ್ಟಿ

ಚಾನೆಲ್ ದರಪಟ್ಟಿ

ಏಪ್ರಿಲ್ ಒಂದರಿಂದ ಜಾರಿಯಾಗಲಿರುವ ಹೊಸ ಕೇಬಲ್ ಮತ್ತು ಡಿಟಿಹೆಚ್ ನಿಯಮಗಳ ಪ್ರಕಾರ, ಕನ್ನಡದ ಪೇಯ್ಡ್ ಚಾನೆಲ್ ಗಳ ದರಪಟ್ಟಿ ಇಂತಿದೆ.
ಕಲರ್ಸ್ ಕನ್ನಡ ರೂ. 19
ಸ್ಟಾರ್ ಸುವರ್ಣ ರೂ. 19
ನ್ಯೂಸ್ 18 ಕನ್ನಡ 25 ಪೈಸೆ
ಚಿಂಟು ಟಿವಿ ಕನ್ನಡ ರೂ. 6
ಜೀ ಕನ್ನಡ ರೂ. 19
ಉದಯ ಕಾಮಿಡಿ ರೂ. 6
ಉದಯ ಮೂವೀಸ್ ರೂ. 16
ಉದಯ ಮ್ಯೂಸಿಕ್ ರೂ. 6
ಉದಯ ಟಿವಿ ರೂ. 17
ಸುವರ್ಣ ಪ್ಲಸ್ ಚಾನಲ್ ರೂ. 5
ಡಿಸ್ಕವರಿ ಚಾನೆಲ್ ಗೆ ರೂ. 4
ಡಿಸ್ಕವರಿ ಕಿಡ್ಸ್ ಚಾನೆಲ್ 3 ರೂ.
ಅನಿಮಲ್ ಪ್ಲಾನೆಟ್ ರೂ. 24
ಸ್ಟಾರ್ ಸ್ಪೋರ್ಟ್ಸ್ ಕನ್ನಡ ರೂ. 19
ಸೋನಿ ಇ.ಎಸ್.ಪಿ.ಎನ್. ಹೆಚ್ಡಿ ರೂ. 7
ಸೋನಿ ಇ.ಎಸ್.ಪಿ.ಎನ್ ರೂ. 5
ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ರೂ. 4

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+