ಬಿಎಸ್ಎನ್ಎಲ್ ನಷ್ಟ 12 ಸಾವಿರ ಕೋಟಿ, ಸಾಲ ಕೇಳಿದ್ರೆ ಶಾಕ್ ಆಗ್ತಿರಾ..!
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಆರ್ಥಿಕ ಬಿಕ್ಕಟ್ಟಿನಲ್ಲಿರುವುದು ನಿಮಗೆಲ್ಲ ತಿಳಿದಿದೆ. 2018-19 ನೇ ಸಾಲಿನ ಬಿಎಸ್ಎನ್ಎಲ್ ಸಂಸ್ಥೆಯ ನಷ್ಟದ ಮೊತ್ತ ರೂ. 12,000 ಕೋಟಿ ದಾಟಿದೆ.
ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಆರ್ಥಿಕ ಬಿಕ್ಕಟ್ಟಿನಲ್ಲಿರುವುದು ನಿಮಗೆಲ್ಲ ತಿಳಿದಿದೆ. 2018-19 ನೇ ಸಾಲಿನ ಬಿಎಸ್ಎನ್ಎಲ್ ಸಂಸ್ಥೆಯ ನಷ್ಟದ ಮೊತ್ತ ರೂ. 12,000 ಕೋಟಿ ದಾಟಿದೆ.

ಬಿಎಸ್ಎನ್ಎಲ್ ಗೆ ಇತರ ಯೋಜನೆಗಳಿಂದ ಬರುವ ಆದಾಯವನ್ನೂ ಸೇರಿಸಿದರೆ ನಷ್ಟ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ತೋರುತ್ತದೆ ಎಂದು ಆಡಳಿತ ಮಂಡಳಿ ಸಭೆ ಅಭಿಪ್ರಾಯಿಸಿದೆ. ಆದರೆ ಬಿಎಸ್ಎನ್ಎಲ್ ನೀಡುತ್ತಿರುವ ಸೇವೆಗಳಿಂದ ಬರುವ ಆದಾಯವನ್ನು ಪರಿಗಣಿಸಿದರೆ ಈ ವರ್ಷದ ನಷ್ಟ ರೂ. 12,000 ಕೋಟಿ ಅಷ್ಟಿದೆ. ಫೆಬ್ರವರಿ ತಿಂಗಳಲ್ಲಿ ಬಿಎಸ್ಎನ್ಎಲ್ ಎದುರಿಸಿದ್ದ ವೇತನ ಸಮಸ್ಯೆ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಕಳೆದ ವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಮಾನವ ಸಂಪನ್ಮೂಲ ವಿಷಯಗಳ ಬಗ್ಗೆ ಚರ್ಚಿಸಲಾಗಿತ್ತು. ಏಪ್ರಿಲ್ 16 ರಂದು ಸಭೆ ನಡೆಯಲಿದ್ದು, ಇತರ ಹೂಡಿಕೆ ಯೋಜನೆ ಮತ್ತು ಹೊಸ ಟ್ರೆಂಡ್ ಗಳ ಬಗ್ಗೆಯೂ ಚರ್ಚೆ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಬಿಎಸ್ಎನ್ಎಲ್ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ನಷ್ಟದ ಪ್ರಮಾಣ ಶೇ.5 0 ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ. ಕಳೆದ 13 ವರ್ಷಗಳಿಂದ ಬಿಎಸ್ಎನ್ಎಲ್ ನಷ್ಟದಲ್ಲಿದ್ದು, ಆದರೆ ನಷ್ಟದ ಮೊತ್ತವನ್ನು ಪ್ರಕಟಿಸಿಲ್ಲ. ಸಂಸತ್ತಿನಲ್ಲಿ ದೂರಸಂಪರ್ಕ ಸಚಿವರು ಬಹಿರಂಗಪಡಿಸಿದ ಮಾಹಿತಿಯ ಆಧಾರದಲ್ಲಿ ನಷ್ಟದ ಮೊತ್ತ ಗೊತ್ತಾಗಿದೆ. ಕೋಟಕ್ ಈಕ್ವಿಟಿಯ ವಿಶ್ಲೇಷಣೆಯ ಅನುಸಾರ ಬಿಎಸ್ಎನ್ಎಲ್ ಒಟ್ಟಾರೆ ನಷ್ಟದ ಮೊತ್ತ ರೂ. 90,000 ಕೋಟಿ ದಾಟಿರುವ ಸಾಧ್ಯತೆ ಇದೆ. ಅಲ್ಲದೇ ಸಾಲ ಮರುಪಾವತಿ ಹೊಣೆಗಾರಿಕೆ ಇದ್ದು, ರೂ. 15,000 ಕೋಟಿ ಸಾಲ ಹೊಂದಿದೆ.


Click it and Unblock the Notifications