ಎಟಿಎಂ ಗ್ರಾಹಕರಿಗೆ ಬರೆ! ಹೆಚ್ಚಾಗಲಿದೆ ಶುಲ್ಕ

ಎಟಿಎಂಗಳ ನಿರ್ವಹಣಾ ವೆಚ್ಚ ಏರಿಕೆಯಾಗುವ ಕಾರಣ 2019ರಲ್ಲಿ ದೇಶದ ಶೇಕಡಾ 50ರಷ್ಟು ಎಟಿಎಂಗಳು ಸ್ಥಗಿತಗೊಳ್ಳಲಿವೆ ಎಂಬ ಸುದ್ದಿ ಕಳೆದ ವರ್ಷವೇ ನೀವು ಓದಿರಬಹುದು.

ಎಟಿಎಂ ಗ್ರಾಹಕರಿಗೆ ಬರೆ! ಹೆಚ್ಚಾಗಲಿದೆ ಶುಲ್ಕ

ಎಟಿಎಂಗಳ ನಿರ್ವಹಣಾ ವೆಚ್ಚ ಏರಿಕೆಯಾಗುವ ಕಾರಣ 2019ರಲ್ಲಿ ದೇಶದ ಶೇಕಡಾ 50ರಷ್ಟು ಎಟಿಎಂಗಳು ಸ್ಥಗಿತಗೊಳ್ಳಲಿವೆ ಎಂಬ ಸುದ್ದಿ ಕಳೆದ ವರ್ಷವೇ ನೀವು ಓದಿರಬಹುದು.
ಆದರೆ ಎಟಿಎಂ ಗಳು ಕಾರ್ಯ ನಿರ್ವಹಣೆಯನ್ನು ಸ್ಥಗಿತಗೊಳಿಸುವುದಿಲ್ಲವೆಂದು ತಿಳಿದು ಬಂದಿದೆ. ಆದರೆ ಈ ಸಂತಸದ ಸಂಗತಿಯೊಂದಿಗೆ ಶಾಕಿಂಗ್ ಸುದ್ದಿ ಕೂಡ ಇದೆ. ಅದೇನೆಂದರೆ ಎಟಿಎಂಗಳ ನಿರ್ವಹಣೆ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಈ ಹೊರೆಯನ್ನು ಗ್ರಾಹಕರ ಮೇಲೆ ಹೇರಲು ಸಿದ್ಧತೆ ನಡೆದಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರ 2016 ರಲ್ಲಿ ನವೆಂಬರ್ ನಲ್ಲಿ ರೂ. 1000 ಹಾಗೂ 500 ಮುಖಬೆಲೆಯ ನೋಟುಗಳನ್ನು ರದ್ದತಿ ಮಾಡಿದ ಬಳಿಕ ಎಟಿಎಂಗಳು ತೀವ್ರ ನಷ್ಟವನ್ನನುಭವಿಸಿದ್ದವು. ಅಲ್ಲದೇ ಹೊಸ ನೋಟುಗಳನ್ನು ಎಟಿಎಂಗಳಲ್ಲಿ ಸಂಗ್ರಹಿಸಲು ನೂತನ ಸಾಫ್ಟ್ವೇರ್ ಅಳವಡಿಸಬೇಕಾಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಂಗ್ ಸುರಕ್ಷತೆಗಾಗಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿರುವುದು ಕೂಡಾ ನಿರ್ವಹಣಾ ವೆಚ್ಚ ಹೆಚ್ಚಳಕ್ಕೆ ಕಾರಣವೆನ್ನಲಾಗಿದೆ.
ಹೀಗಾಗಿ ಎಟಿಎಂಗಳ ನಿರ್ವಹಣಾ ಶುಲ್ಕ ಹೆಚ್ಚಳ ಆಗುವ ಸಾಧ್ಯತೆಯಿದ್ದು, ಒಂದೊಮ್ಮೆ ಇದಕ್ಕೆ ಅನುಮೋದನೆ ಸಿಕ್ಕರೆ ಶೇ. 10 ರಿಂದ 15 ರಷ್ಟು ಶುಲ್ಕ ಏರಿಕೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+