For Quick Alerts
ALLOW NOTIFICATIONS  
For Daily Alerts

ಹೆಚ್‍ಡಿಎಫ್‍ಸಿ ನಂಬರ್ ಒನ್ ಬ್ಯಾಂಕ್, ಕೊನೆ ಸ್ಥಾನದಲ್ಲಿ ಎಸ್ಬಿಐ

ದೇಶದ ಅತ್ಯುತ್ತಮ ಬ್ಯಾಂಕುಗಳ ಪಟ್ಟಿಯಲ್ಲಿ ಹೆಚ್‍ಡಿಎಫ್‍ಸಿ ಬ್ಯಾಂಕ್ ಭಾರತದ ನಂಬರ್ ಒನ್ ಬ್ಯಾಂಕ್ ಆಗಿ ಹೊರಹೊಮ್ಮಿದೆ. ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐ ಅಗ್ರ ಹತ್ತರ ಪಟ್ಟಿಯಲ್ಲೂ ಕಾಣಿಸಿಕೊಂಡಿಲ್ಲ.

|

ದೇಶದ ಅತ್ಯುತ್ತಮ ಬ್ಯಾಂಕುಗಳ ಪಟ್ಟಿಯಲ್ಲಿ ಹೆಚ್‍ಡಿಎಫ್‍ಸಿ ಬ್ಯಾಂಕ್ ಭಾರತದ ನಂಬರ್ ಒನ್ ಬ್ಯಾಂಕ್ ಆಗಿ ಹೊರಹೊಮ್ಮಿದೆ. ದೇಶದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಎಸ್ಬಿಐ ಅಗ್ರ ಹತ್ತರ ಪಟ್ಟಿಯಲ್ಲೂ ಕಾಣಿಸಿಕೊಂಡಿಲ್ಲ ಎಂದು ಫೋರ್ಬ್ಸ್ ವರ್ಲ್ಡ್ಸ್ ಬ್ಯಾಂಕ್ ಸರ್ವೆಯಲ್ಲಿ ತಿಳಿಸಿದೆ.

ಹೆಚ್‍ಡಿಎಫ್‍ಸಿ ನಂಬರ್ ಒನ್ ಬ್ಯಾಂಕ್,  ಕೊನೆ ಸ್ಥಾನದಲ್ಲಿ ಎಸ್ಬಿಐ

ಫೋರ್ಬ್ಸ್ ಕಂಪನಿ ಸ್ಟಾಟಿಸ್ಟ ಎಂಬ ಕಂಪನಿ ಜೊತೆ ಸೇರಿ ಫೋರ್ಬ್ಸ್ ವರ್ಲ್ಡ್ಸ್ ಬೆಸ್ಟ್ ಬ್ಯಾಂಕ್ ಸರ್ವೇ ನಡೆಸಿದ್ದು, 23 ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ಬ್ಯಾಂಕುಗಳ ವಹಿವಾಟು, ಬ್ಯಾಲೆನ್ಸ್ ಶೀಟ್ ಇತ್ಯಾದಿಯನ್ನು ನೋಡದೆ ಜನರ ಅಭಿಪ್ರಾಯದ ಮೇರೆಗೆ ಈ ಸಮೀಕ್ಷೆ ಕೈಗೊಳ್ಳಲಾಗಿದೆ. ನಂಬಿಕೆ, ಷರತ್ತು, ಗ್ರಾಹಕರ ಸೇವೆ, ಡಿಜಿಟಲ್ ಸೇವೆ ಹಾಗೂ ಆರ್ಥಿಕ ಸಲಹೆಗೆ ಸಂಬಂಧಿಸಿದ ಮಾನದಂಡದ ಆಧಾರದ ಮೇಲೆ ಜನಾಭಿಪ್ರಾಯ ಸಂಗ್ರಹಿಸಿ ಶ್ರೇಯಾಂಕ ನೀಡಲಾಗಿದೆ.

ಟಾಪ್ 10 ಬ್ಯಾಂಕುಗಳ ಪಟ್ಟಿ
ಹೆಚ್ಡಿಎಫ್ಸಿ, ಐಸಿಐಸಿಐ, ಡಿಬಿಎಸ್ ಬ್ಯಾಂಕ್‍, ಸಿಂಡಿಕೇಟ್, ವಿಜಯಾ, ಪಿ.ಎನ್‍.ಬಿ., ಐಡಿಎಫ್ಸಿ, ಕೋಟಕ್ ಮಹಿಂದ್ರಾ ಬ್ಯಾಂಕ್, ಅಲಹಾಬಾದ್, ಆಕ್ಸಿಸ್ ಬ್ಯಾಂಕ್‍ ಗಳು ಅಗ್ರ 10ರ ಪಟ್ಟಿಯಲ್ಲಿವೆ. ಆದರೆ ಸಾರ್ವಜನಿಕ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್‍.ಬಿ.ಐ 11ನೇ ಸ್ಥಾನದಲ್ಲಿದೆ.

English summary

HDFC Bank ranked No. 1 in India by Forbes; Surprise at No. 3; SBI not in top 10

the HDFCr has been identified as number 1 bank by customers in India, as per Forbes World's Best Bank survey.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X