ಕ್ರಿಕೆಟ್ ಪ್ರೇಮಿಗಳಿಗಾಗಿ! ಭರ್ಜರಿ 'ಜಿಯೋ ಕ್ರಿಕೆಟ್ ಡೇಟಾ ಪ್ಲಾನ್'...

ರಿಲಯನ್ಸ್ ಜಿಯೋ ಬಳಸದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಜಿಯೋ ದೂರಸಂಪರ್ಕ ವಲಯವನ್ನು ಆವರಿಸಿದೆ! ದಿನದಿಂದ ದಿನಕ್ಕೆ ಹೊಸ ಹೊಸ ಆಫರ್ ಗಳ ಮುಖಾಂತರ ಗ್ರಾಹಕರನ್ನು ಆಕರ್ಷಿಸುತ್ತ ಬಂದಿರುವ ಜಿಯೋ ಇದೀಗ ಜಿಯೋ ಕ್ರಿಕೆಟ್ ಡೇಟಾ ಪ್ಲಾನ್ ಬಿಡುಗಡ

ರಿಲಯನ್ಸ್ ಜಿಯೋ ಬಳಸದೇ ಇರಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಜಿಯೋ ದೂರಸಂಪರ್ಕ ವಲಯವನ್ನು ಆವರಿಸಿದೆ! ದಿನದಿಂದ ದಿನಕ್ಕೆ ಹೊಸ ಹೊಸ ಆಫರ್ ಗಳ ಮುಖಾಂತರ ಗ್ರಾಹಕರನ್ನು ಆಕರ್ಷಿಸುತ್ತ ಬಂದಿರುವ ಜಿಯೋ ಇದೀಗ ಜಿಯೋ ಕ್ರಿಕೆಟ್ ಡೇಟಾ ಪ್ಲಾನ್ ಬಿಡುಗಡೆಗೊಳಿಸಿದೆ.
ಐಪಿಎಲ್ ನಡೆಯುತ್ತಿರುವ ಸಂದರ್ಭದಲ್ಲಿ ನೆಚ್ಚಿನ ತಂಡಗಳ ಪಂದ್ಯಗಳನ್ನು ವೀಕ್ಷಿಸಲು ಅನುಕೂಲವಾಗಲಿ ಎಂದು ಗ್ರಾಹಕರನ್ನು ಸೆಳೆಯಲು ಈ ಯೋಜನೆ ಪರಿಚಯಿಸಿದೆ.

ಕ್ರಿಕೆಟ್ ಡೇಟಾ ಪ್ಲಾನ್

ಕ್ರಿಕೆಟ್ ಡೇಟಾ ಪ್ಲಾನ್

ಹೆಸರಿಗೆ ತಕ್ಕಂತೆ ಕ್ರಿಕೆಟ್ ಡೇಟಾ ಪ್ಲಾನ ಘೋಷಿಸಿರುವ ಜಿಯೋ ತನ್ನ ಗ್ರಾಹಕರಿಗೆ ಪ್ರತಿ ದಿನ 2GB ಡೇಟಾ ನೀಡುತ್ತಿದೆ. ಇದು ೫೦ ದಿನಗಳ ವ್ಯಾಲಿಡಿಟಿ ಹೊಂದಿದೆ. ಡೇಟಾವನ್ನು ಎಲ್ಲಾ ತರಹದ ಇಂಟರ್ನೆಟ್ ಸೌಲಭ್ಯ ಪಡೆಯಲು ಬಳಸಬಹುದು.
ರೂ. 251 ಪ್ಲಾನ್ ಮೂಲಕ ಗ್ರಾಹಕರು ಧ್ವನಿ ಕರೆ ಅಥವಾ ಎಸ್ಎಂಎಸ್ ಸೌಲಭ್ಯ ಪಡೆಯುವುದಿಲ್ಲ. ಪ್ರತಿದಿನ ೨ಜಿಬಿ ಡೇಟಾ ಬಳಸಿದ ನಂತರ ಗ್ರಾಹಕರು ವಾಟ್ಸಾಪ್ ನಲ್ಲಿ ಚಾಟ್ ಮಾಡಬಹುದು. ಆದರೆ ವೇಗ 64kbps ಕುಸಿಯಲಿದೆ. ಜಿಯೋ ಧಮಾಕಾ! 10 ಸಾವಿರ ಕ್ಯಾಶ್ಬ್ಯಾಕ್ ಆಫರ್.. ಪಡೆಯಲು ಹೀಗೆ ಮಾಡಿ

ರೂ. 198 ಪ್ಲಾನ್

ರೂ. 198 ಪ್ಲಾನ್

ಈ ಮೇಲಿನ ಪ್ಲಾನ್ ಗೆ ಹೊರತಾಗಿ ೨ಜಿಬಿ ಪಡೆಯಲು ಬಯಸುವ ಗ್ರಾಹಕರು ಈ ಯೋಜನೆ ಆಯ್ಕೆ ಮಾಡಬಹುದು. ಈ ಯೋಜನೆ ಅಡಿಯಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಜಿಯೋ ಬಳಕೆದಾರರು 56GB ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಧ್ವನಿ ಕರೆಗಳು ಅನಿಯಮಿತವಾಗಿದ್ದು, ಪ್ರತಿದಿನ 100 SMS ಸೌಲಭ್ಯವಿರುತ್ತದೆ. ಈ ಅಪ್ಲಿಕೇಶನ್ ಅಡಿಯಲ್ಲಿ ಬಳಕೆದಾರರು ಎಲ್ಲಾ ಜಿಯೋ ಅಪ್ಲಿಕೇಶನ್ ಗಳ ಪೂರಕ ಚಂದಾದಾರಿಕೆಯನ್ನು ಪಡೆಯುತ್ತಾರೆ.

ರೂ. 398 ಪ್ಲಾನ್

ರೂ. 398 ಪ್ಲಾನ್

ಈ ಯೋಜನೆಯಲ್ಲಿ ಜಿಯೋ ಬಳಕೆದಾರರು 70 ದಿನಗಳ ವ್ಯಾಲಿಡಿಯೊಂದಿಗೆ ಪ್ರತಿದಿನ ೨ಜಿಬಿಯಂತೆ 140 ಜಿಬಿ ಡೇಟಾ ಪ್ರಯೋಜನ ಪಡೆಯುತ್ತಾರೆ. ಧ್ವನಿ ಕರೆಗಳು ಅನಿಯಮಿತವಾಗಿದ್ದು, ಪ್ರತಿದಿನ 100 SMS ಇರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+