ಒಂದೊಂದು ಟೆಲಿಕಾಂ ಕಂಪನಿ ಒಂದೊಂದು ತೆರನಾದ ಆಫರ್ ಗಳನ್ನು ಘೋಷಿಸಿ, ಗ್ರಾಹಕರನ್ನು ಸೆಳೆಯಲು ಮುಂದಾಗುತ್ತವೆ. ವೋಡಾಫೋನ್ ಸಂಸ್ಥೆ ಹೊಸ ಆಫರ್ ಪರಿಚಯಿಸಿದ್ದು, ನಿಮ್ಮ ಜೇಬಲ್ಲಿ 16 ರೂಪಾಯಿ ಇದ್ದರೆ ಇಡೀ ದಿನ ಇಂಟರನೆಟ್ ಸೇವೆ ಆನಂದಿಸಬಹುದು!
ಒಂದೊಂದು ಟೆಲಿಕಾಂ ಕಂಪನಿ ಒಂದೊಂದು ತೆರನಾದ ಆಫರ್ ಗಳನ್ನು ಘೋಷಿಸಿ, ಗ್ರಾಹಕರನ್ನು ಸೆಳೆಯಲು ಮುಂದಾಗುತ್ತವೆ. ವೋಡಾಫೋನ್ ಸಂಸ್ಥೆ ಹೊಸ ಆಫರ್ ಪರಿಚಯಿಸಿದ್ದು, ನಿಮ್ಮ ಜೇಬಲ್ಲಿ 16 ರೂಪಾಯಿ ಇದ್ದರೆ ಇಡೀ ದಿನ ಇಂಟರನೆಟ್ ಸೇವೆ ಆನಂದಿಸಬಹುದು!ಇಂತಹ ಪ್ಲಾನ್ ಅನ್ನು ವೋಡಾಫೋನ್ ಘೋಷಿಸಿದೆ.
ಫಿಲ್ಮಿ ರೀಚಾರ್ಜ್ ಆಫರ್
ವೋಡಾಫೋನ್ "ಫಿಲ್ಮಿ ರೀಚಾರ್ಜ್" ಎಂಬ ಆಫರ್ ನ್ನು ಕೇವಲ ರೂ. 16ಕ್ಕೆ ಪರಿಚಯಿಸಿದ್ದು, ಇದು ಪ್ರಿಪೇಡ್ ರೀಚಾರ್ಜ್ ಪ್ಲಾನ್ ಆಗಿದೆ. ಪ್ರಿಪೇಡ್ ರೀಚಾರ್ಜ್ ಯೋಜನೆ 24 ಗಂಟೆಗಳವರೆಗೆ 1GB ಡೆಟಾವನ್ನು 2G/3G/4G ವೇಗದಲ್ಲಿ ನೀಡುತ್ತಿದೆ. ಇದರ ಜೊತೆಗೆ ರೂ. 33, ರೂ. 49, ಮತ್ತು ರೂ. 98 ಇತರೆ ಪ್ಲಾನ್ ಗಳು ಲಭ್ಯವಿವೆ.
ಎಲ್ಲಿ ಲಭ್ಯ
ಈ ಯೋಜನೆ ಪ್ರಮುಖವಾಗಿ ಅಸ್ಸಾಂ, ಗೋವಾ, ಗುಜರಾತ್ ಮತ್ತು ಮಹಾರಾಷ್ಟ್ರ ವಲಯಗಳು ಒಳಗೊಂಡಂತೆ ಆಯ್ದ ವಲಯಗಳಲ್ಲಿ ಲಭ್ಯವಿರುತ್ತದೆ. ವೊಡಾಫೋನ್ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ವೊಡಾಫೋನ್.ಇನ್, ಮೈ ವೊಡಾಫೋನ್ ಅಪ್ಲಿಕೇಶನ್, ಮತ್ತು ಅಧಿಕೃತ ಚಿಲ್ಲರೆ ವ್ಯಾಪಾರಿಗಳ ಮೂಲಕ ಲಭ್ಯವಿದೆ.
ಯೋಜನೆಯಲ್ಲಿ ಏನಿದೆ? ಏನಿಲ್ಲ?
Vodafone.in ವೆಬ್ಸೈಟ್ನ ಅಧಿಕೃತ ಪಟ್ಟಿ ಪ್ರಕಾರ, ಫಿಲ್ಮಿ ರೀಚಾರ್ಜ್ 24 ಗಂಟೆಗಳ ಕಾಲ 1 ಜಿಬಿ ಡೇಟಾ ಒದಗಿಸುತ್ತದೆ. ಪೂರ್ತಿ ದಿನ ಸಿನೆಮಾ ಮತ್ತು ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ. ಸಿನಿಮಾ ಮತ್ತು ವಿಡಿಯೋಗಳನ್ನು ಡೌನ್ಲೋಡ್ ಮಾಡುವ ಗ್ರಾಹಕರಿಗೆ ಇದು ಒಳ್ಳೆ ಪ್ಲಾನ್. ವೊಡಾಫೋನ್ ಪ್ರಿಪೇಡ್ ರೀಚಾರ್ಜ್ ಯೋಜನೆಯಡಿ ಯಾವುದೇ ಧ್ವನಿ ಅಥವಾ SMS ಪ್ರಯೋಜನಗಳು ಇರುವುದಿಲ್ಲ. ಇದು ಒಂದು ದಿನದ ವ್ಯಾಲಿಡಿಟಿ ಹೊಂದಿದೆ.
ಶೀಘ್ರ ಲಭ್ಯವಾಗಲಿದೆ..
ರೂ. 16 ವೊಡಾಫೋನ್ ಪ್ರಿಪೇಯ್ಡ್ ಫಿಲ್ಮಿ ರಿಚಾರ್ಜ್ ಯೋಜನೆಯು ಅಸ್ಸಾಂ, ಗುಜರಾತ್, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾದಂತಹ ವಲಯಗಳಲ್ಲಿ ಲಭ್ಯವಾಗಲಿದೆ. ಆದಾಗ್ಯೂ, ಭಾರತದ ಎಲ್ಲಾ ವಲಯಗಳಿಗೆ ವೊಡಾಫೋನ್ ಇನ್ನೂ ತಲುಪಬೇಕಾಗಿದೆ.


Click it and Unblock the Notifications