ಜಿಯೋಗೆ ಟಕ್ಕರ್! ಏರ್ಟೆಲ್ ಘೋಷಿಸಿದೆ ಈ ಹಿಂದೆ ನೀಡದಂತ ಭರ್ಜರಿ ಆಫರ್

ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಈ ಹಿಂದೆ ಯಾವ ಟೆಲಿಕಾಮ ಕಂಪನಿ ಕೂಡ ನೀಡದಂತ ಆಫರ್ ನ್ನು ಪರಿಚಯಿಸಿದೆ!

ಭಾರ್ತಿ ಏರ್ಟೆಲ್ ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಈ ಹಿಂದೆ ಯಾವ ಟೆಲಿಕಾಮ ಕಂಪನಿ ಕೂಡ ನೀಡದಂತ ಆಫರ್ ನ್ನು ಪರಿಚಯಿಸಿದೆ! ಜಿಯೋ ಪ್ರವೇಶಾತಿ ನಂತರ ಏರ್ಟೆಲ್ ಮೇಲೆ ಭಾರೀ ಪರಿಣಾಮ ಬಿದ್ದಿದ್ದು, ಇದೀಗ ಜಿಯೋಗೆ ಟಕ್ಕರ್ ನೀಡಲು ಮುಂದಾಗಿರುವ ಏರ್ಟೆಲ್ ಒಂದು ಅದ್ಬುತವಾದ ಯೋಜನೆಯನ್ನು ಪ್ರಸ್ತುತಪಡಿಸಿದೆ. ಹಾಗಿದ್ದರೆ ವಿಶೇಷ ಆಫರ್ ಯಾವುದು ಎಂಬುದನ್ನು ನೋಡೋಣ ಬನ್ನಿ..

ರೂ. 199 ಪ್ಲಾನ್ - ನಾರ್ಟನ್ ಮೊಬೈಲ್ ಸೆಕ್ಯೂರಿಟಿ

ರೂ. 199 ಪ್ಲಾನ್ - ನಾರ್ಟನ್ ಮೊಬೈಲ್ ಸೆಕ್ಯೂರಿಟಿ

ಏರ್ಟೆಲ್ ತನ್ನ ಪ್ರಿಪೇಡ್ ಗ್ರಾಹಕರಿಗಾಗಿ ಪರಿಚಯಿಸಿರುವ ವಿಶೇಷ ಆಫರ್ ರೂ. 199 ಅಥವಾ ಅದಕ್ಕಿಂತಲೂ ಹೆಚ್ಚಿನ ಮೌಲ್ಯದ ರೀಚಾರ್ಜ್ ಮೇಲೆ ಒಂದು ವರ್ಷದವರೆಗೆ ಉಚಿತವಾಗಿ ನಾರ್ಟನ್ ಮೊಬೈಲ್ ಸೆಕ್ಯೂರಿಟಿ ಸೇವೆ ಘೋಷಿಸಿದೆ.
ನಾರ್ಟನ್ ಮೊಬೈಲ್ ಸೆಕ್ಯುರಿಟಿಯು ಆಂಟಿ ವೈರಸ್ ಭದ್ರತೆಯನ್ನು ಒದಗಿಸುತ್ತದೆ. ಆಂಟಿ ವೈರಸ್ ಸಾಫ್ಟ್ವೇರ್ ಆಗಿರುವ ನಾರ್ಟನ್ ಮೊಬೈಲ್ ಸೆಕ್ಯೂರಿಟಿ ಅಪಾಯಕಾರಿ ಅಪ್ಲಿಕೇಶನ್ ಗಳಿಂದ ನಿಮ್ಮ ಮೊಬೈಲ್ ಅನ್ನು ರಕ್ಷಿಸಬಲ್ಲದು. ಮುಖ್ಯವಾಗಿ ನಿಮ್ಮ ಕಳ್ಳತನವಾದಲ್ಲಿ ಅಥವಾ ಕಳೆದುಕೊಂಡ ಸಂದರ್ಭದಲ್ಲಿ ಗೌಪ್ಯತೆ ಕಾಪಾಡಿ, ಅದನ್ನು ಮರಳಿ ಪಡೆಯಲು ನೆರವಾಗುತ್ತದೆ. ಆನ್ಲೈನ್ ಪ್ರೈವೆಸಿ ಕೂಡ ಲಭ್ಯವಿದೆ.

200 ಕ್ಯಾಶ್ ಬ್ಯಾಕ್ ಲಭ್ಯ

200 ಕ್ಯಾಶ್ ಬ್ಯಾಕ್ ಲಭ್ಯ

ರೂ. 199 ಪ್ರಿಪೇಡ್ ರೀಚಾರ್ಜ್ ಮತ್ತು ಅದಕ್ಕಿಂತಲೂ ಹೆಚ್ಚಿನ ರೀಚಾರ್ಜ್ ನೊಂದಿಗೆ ಈ ಪ್ರಯೋಜನ ಪಡೆಯಬಹುದಾಗಿದೆ. ಈ ರಿಚಾರ್ಜ್ ಮೇಲೆ ರೂ. 200 ಕ್ಯಾಶ್ಬ್ಯಾಕ್ ಕೂಡ ಪಡೆಯಬಹುದಾಗಿದೆ. ಮೈ ಏರ್ಟೆಲ್ ಆಪ್ ಮೂಲಕ ಇದು ಸಿಗಲಿದೆ. ಗ್ರಾಹಕರು ರೀಚಾರ್ಜ್ ಮಾಡಿ ಏರ್ಟೆಲ್ ಆಪ್ ನಲ್ಲಿ ನಾರ್ಟನ್ ಮೊಬೈಲ್ ಸೆಕ್ಯೂರಿಟಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಪ್ರತಿದಿನ 1.5 ಜಿಬಿ ಡೇಟಾ

ಪ್ರತಿದಿನ 1.5 ಜಿಬಿ ಡೇಟಾ

ರೂ. 199 ಪ್ಲಾನ್ ಮೂಲಕ ಗ್ರಾಹಕರಿಗೆ ಪ್ರತಿದಿನ 1.5 ಜಿಬಿ ಡೇಟಾ ಸಿಗಲಿದೆ. ಅನಿಯಮಿತ ಸ್ಥಳೀಯ, ಎಸ್ಟಿಡಿ, ರೋಮಿಂಗ್ ಕರೆಗಳು, ಪ್ರತಿದಿನ 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ರೂ. 248 ಪ್ರೀಪೇಡ್ ರೀಚಾರ್ಜ್ ಪ್ಲಾನ್

ರೂ. 248 ಪ್ರೀಪೇಡ್ ರೀಚಾರ್ಜ್ ಪ್ಲಾನ್

ಹೊಸ ಚಂದಾದಾರರಿಗಾಗಿ ಏರ್ಟೆಲ್ ಇತ್ತೀಚಿಗೆ ರೂ. 248 ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಈ ಹೊಸ ಯೋಜನೆಯಡಿ ಪ್ರತಿದಿನ 1.4GB ಡೇಟಾ, ಅನಿಯಮಿತ ಸ್ಥಳೀಯ, ಎಸ್ಟಿಡಿ, ರೋಮಿಂಗ್ ಕರೆಗಳು ಲಭ್ಯವಿವೆ. ಜೊತೆಗೆ ಪ್ರತಿದಿನ ೧೦೦ ಎಸ್ಎಂಎಸ್ ಲಭ್ಯವಿದ್ದು, 28 ದಿನಗಳ ವ್ಯಾಲಿಡಿಟಿ ಹೊಂದಿದೆ.

ಉಚಿತ 4 ಜಿ ಹಾಟ್ ಸ್ಪಾಟ್ ಡಿವೈಸ್

ಉಚಿತ 4 ಜಿ ಹಾಟ್ ಸ್ಪಾಟ್ ಡಿವೈಸ್

ಏರ್ಟೆಲ್ ಒಂದು ಸ್ಪರ್ಧಾತ್ಮಕ ಹೆಜ್ಜೆಯನ್ನಿಟ್ಟಿದ್ದು, 4 ಜಿ ಹಾಟ್ ಸ್ಪಾಟ್ ಡಿವೈಸ್ ಅನ್ನು ಉಚಿತವಾಗಿ ಒದಗಿಸಲು ನಿರ್ಧರಿಸಿದೆ. ಪ್ರಸ್ತುತ ಏರ್ಟೆಲ್ ಕೇವಲ ಎರಡು ಆಯ್ಕೆಗಳನ್ನು ನೀಡುತ್ತಿದ್ದು, ರೂ. 399 ಮತ್ತು ರೂ. 599. ಹಿಂದೆ ಇದು ಹಾಟ್ ಸ್ಪಾಟ್ ಡಿವೈಸ್ ಗಳಿಗಾಗಿ ಹತ್ತು ವಿವಿಧ ಯೋಜನೆಗಳ ಆಫರ್ ನೀಡಿತ್ತು. ರೂ. 399 ಹೊಸ ಯೋಜನೆ ತಿಂಗಳಿಗೆ ಹೆಚ್ಚಿನ ವೇಗದ 50 ಜಿಬಿ ಡೇಟಾವನ್ನು ನೀಡುತ್ತದೆ. ರೂ. 599 ಯೋಜನೆಯಡಿ ಹೆಚ್ಚಿನ ವೇಗದ 100 ಜಿಬಿ ಡೇಟಾವನ್ನು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+