For Quick Alerts
ALLOW NOTIFICATIONS  
For Daily Alerts

ಅಂಚೆ ಇಲಾಖೆ ಗ್ರಾಹಕರಿಗೆ ಗುಡ್ ನ್ಯೂಸ್! ಸಿಗಲಿವೆ ಆಧುನಿಕ ಸೌಲಭ್ಯಗಳು..

ಗ್ರಾಮೀಣ ಪ್ರದೇಶಗಳಲ್ಲಿ ಹಾಗು ನಗರ ಭಾಗಗಳಲ್ಲಿನ ತನ್ನ ಗ್ರಾಹಕರಿಗೆ ಪರಿಣಾಮಕಾರಿಯಾಗಿ ಸೇವೆಗಳನ್ನು ನೀಡುವ ಸಲುವಾಗಿ ದೇಶದ 1.5 ಲಕ್ಷ ಅಂಚೆ ಕಚೇರಿಗಳ ನೆಟ್ವರ್ಕ್ ಆಧುನೀಕರಣಕ್ಕೆ ಸಮಗ್ರ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

|

ಭಾರತೀಯ ಅಂಚೆ ಇಲಾಖೆ ದೇಶದಾದ್ಯಂತ ಹಲವಾರು ಸೇವೆಗಳನ್ನು ಒದಗಿಸುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹಾಗು ನಗರ ಭಾಗಗಳಲ್ಲಿನ ತನ್ನ ಗ್ರಾಹಕರಿಗೆ ಪರಿಣಾಮಕಾರಿಯಾಗಿ ಸೇವೆಗಳನ್ನು ನೀಡುವ ಸಲುವಾಗಿ ದೇಶದ 1.5 ಲಕ್ಷ ಅಂಚೆ ಕಚೇರಿಗಳ ನೆಟ್ವರ್ಕ್ ಆಧುನೀಕರಣಕ್ಕೆ ಸಮಗ್ರ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

 

ಟಿಸಿಎಸ್ ನೊಂದಿಗೆ ಒಪ್ಪಂದ

ಟಿಸಿಎಸ್ ನೊಂದಿಗೆ ಒಪ್ಪಂದ

ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾಗಿರುವ ಟಿಸಿಎಸ್, ಅಂಚೆ ಇಲಾಖೆಯೊಂದಿಗೆ ರೂ. 1100 ಕೋಟಿ ಒಪ್ಪಂದ ಮಾಡಿಕೊಂಡಿದ್ದು, ಅಂಚೆ ಇಲಾಖೆಗೆ ಆಧುನೀಕರಣ ಮತ್ತು ಡಿಜಿಟಲೀಕರಣಕ್ಕೆ ತಂತ್ರಜ್ಞಾನದ ನೆರವನ್ನು ನೀಡಿದೆ. ಸಮಗ್ರ ಪರಿಹಾರಕ್ಕಾಗಿ ದೇಶದ 1.5 ಲಕ್ಷ ಅಂಚೆ ಕಚೇರಿಗಳ ನೆಟ್ವರ್ಕ್ ನ್ನು ಆಧುನಿಕರಿಸಿದೆ.

ಅಂಚೆ ವ್ಯವಹಾರ ಸುಲಭ

ಅಂಚೆ ವ್ಯವಹಾರ ಸುಲಭ

ಟಿಸಿಎಸ್ ನೂತನ ತಂತ್ರಜ್ಞಾನದ ಮೂಲಕ ಅಂಚೆ ಇಲಾಖೆಯ ಕೋರ್ ಸಿಸ್ಟಮ್ ಇಂಟಿಗ್ರೇಷನ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿ ಅನುಷ್ಠಾನಗೊಳಿಸಿದೆ. ಸಮಗ್ರ ಇ.ಆರ್.ಪಿ. ಸಲ್ಯೂಷನ್ ಒಳಗೊಂಡಿರುವ ಈ ವ್ಯವಸ್ಥೆಯಿಂದಾಗಿ ಅಂಚೆ ಪತ್ರಗಳ ವಿಲೇವಾರಿ, ಎಚ್ ಆರ್ ಸಲ್ಯೂಷನ್, ಹಣಕಾಸು ಅಕೌಂಟಿಂಗ್ ನಂತಹ ವ್ಯವಹಾರಗಳ ನಿರ್ವಹಣೆಗೆ ಸಹಕಾರಿಯಾಗಲಿದೆ ಎನ್ನಲಾಗಿದೆ.

ಗ್ರಾಮೀಣ ಭಾಗಗಳಿಗೆ ಹೊಸ ಸ್ಪರ್ಶ
 

ಗ್ರಾಮೀಣ ಭಾಗಗಳಿಗೆ ಹೊಸ ಸ್ಪರ್ಶ

1.5 ಲಕ್ಷ ಅಂಚೆ ಕಚೇರಿಗಳನ್ನು ಆಧುನಿಕರಿಸಲಾಗಿದ್ದು, ಗ್ರಾಮೀಣ ಭಾಗದ ಅಂಚೆ ಇಲಾಖೆಗಳಿಗೂ ಹೊಸ ಸ್ಪರ್ಶ ನೀಡಲಾಗಿದೆ. ಈಗ ಪ್ರತಿದಿನಕ್ಕೆ ಸರಾಸರಿ 30 ಲಕ್ಷ ಅಂಚೆ ವರ್ಗಾವಣೆಗಳ ಸಂಸ್ಕರಣೆ, 5 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ತಂತ್ರಜ್ಞಾನದ ನೆರವು ಸಿಗಲಿದೆ. ಹಿಂದುಳಿದ/ಗ್ರಾಮೀಣ ಪ್ರದೇಶಗಳಲ್ಲಿ ಹಣಕಾಸು ಸೇವೆ, ಅಂಚೆ ಬ್ಯಾಂಕಿಂಗ್ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

Read more about: post office schemes money savings
English summary

Post Office transformation: TCS modernises 1.5 lakh post offices

This involved deploying an integrated ERP solution that caters to mail operations, finance and accounting, and HR functions, and connects its vast network.
Story first published: Monday, April 22, 2019, 12:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X