For Quick Alerts
ALLOW NOTIFICATIONS  
For Daily Alerts

ಭಾರತದ ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಯಾರನ್ನು ದೂರುವುದು?

ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತವು ನಿಧಾನವಾಗುತ್ತಿದೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಕಳೆದ ಐದಾರು ತಿಂಗಳುಗಳಲ್ಲಿನ ಆರ್ಥಿಕ ಚಟುವಟಿಕೆಗಳಲ್ಲಾದ ಇಳಿಕೆಯಿಂದ ಇದು ಸ್ಪಷ್ಟವಾಗಿ ಗೋಚರವಾಗಿದೆ

|

ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಭಾರತವು ನಿಧಾನವಾಗುತ್ತಿದೆ ಎಂದರೆ ಆಶ್ಚರ್ಯವಾಗಬಹುದು. ಆದರೆ ಕಳೆದ ಐದಾರು ತಿಂಗಳುಗಳಲ್ಲಿನ ಆರ್ಥಿಕ ಚಟುವಟಿಕೆಗಳಲ್ಲಾದ ಇಳಿಕೆಯಿಂದ ಇದು ಸ್ಪಷ್ಟವಾಗಿ ಗೋಚರವಾಗಿದೆ.

 

ಭಾರತದ ನಿಧಾನಗತಿಯ ಆರ್ಥಿಕ ಬೆಳವಣಿಗೆಗೆ ಯಾರನ್ನು ದೂರುವುದು?

ವಾಹನಗಳ ಮಾರಾಟ ಮತ್ತು ಬಾಳಿಕೆ ಬರುವ ಸರಕುಗಳ ಕುಸಿತದಿಂದ ಆರ್ಥಿಕತೆ ನಿಧಾನವಾಗಿ ಸಾಗುತ್ತಿದೆ. ವಿಮಾನಯಾನ ಸಂಸ್ಥೆಗಳ ಹಾರಾಟ ಹಾಗು ಬೆಳವಣಿಗೆಯಲ್ಲಿ ಕುಸಿತ ಕಂಡಿದೆ. ಜೊತೆಗೆ ಸಾಬೂನುಗಳು ಮತ್ತು ಡಿಟರ್ಜೆಂಟ್ ನಂತಹ ಉತ್ಪನ್ನಗಳ ಮಾರಾಟ ಕೂಡ ದುರ್ಬಲಗೊಂಡಿದೆ.

ಆರ್ಥಿಕತೆಯಲ್ಲಿ ಸಾಕಷ್ಟು ಹಣ ಇಲ್ಲದಿರುವುದು ಪ್ರಮುಖ ಸಮಸ್ಯೆ ಎನ್ನಲಾಗಿದೆ. ಕಳೆದ ಎರಡು ವರ್ಷಗಳಿಂದ, ಗ್ರಾಹಕ ಉತ್ಪನ್ನಗಳ ವಿತರಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಲಿಕ್ವಿಡಿಟಿ ಹೆಚ್ಚುತ್ತಿರುವ ಕೊರತೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಪಾಲಿಸಿಗಳನ್ನು ಜಾರಿ ತರಬೇಕಾದವರು ವಿತರಕರ ಮತ್ತು ಚಿಲ್ಲರೆ ವ್ಯಾಪಾರಿಗಳ ಅಭಿಪ್ರಾಯವನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

 

ಸರ್ಕಾರವು 2016 ರ ಅಂತ್ಯದ ಹೊತ್ತಿಗೆ ತಾತ್ಕಾಲಿಕವಾಗಿ ಕರೆನ್ಸಿ ಪ್ರಸರಣ ಹಿಂತೆಗೆದುಕೊಂಡಿರುವುದು ಮತ್ತು ರಾಷ್ಟ್ರವ್ಯಾಪಿ ಸರಕು ಮತ್ತು ಸೇವಾ ತೆರಿಗೆ ಜಾರಿ ತಂದಿರುವುದು ಆರ್ಥಿಕ ಬೆಳವಣಿಗೆಯಲ್ಲಿ ಹೊಂದಿಕೊಳ್ಳಲು ಕಷ್ಟವಾಯಿತು.
GST ಜಾರಿಯಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದ್ದು, ಇದರ ಪರಿಣಾಮದಿಂದಾಗಿ ಆರ್ಥಿಕ ಬೆಳವಣಿಗೆ ನಿಧಾನವಾಗಿರುವುದು ಹೆಚ್ಚು ಸ್ಪಷ್ಟವಾಗುತ್ತದೆ. ಆದ್ದರಿಂದ ದ್ರವ್ಯತೆ ಕೊರತೆ ಎದುರಾಗಿದ್ದು, ಕಳೆದ ಎರಡು ವರ್ಷಗಳಿಂದ ಹಣ ಪೂರೈಕೆ, GDP ಬೆಳವಣಿಗೆ ಕುಸಿದಿದೆ. ಜಿಡಿಪಿ ಅನುಪಾತವು ಶೇ. 85 ರಿಂದ ಶೇ. 80ಕ್ಕಿಂತ ಕಡಿಮೆಯಾಗಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಹೆಚ್ಚು ನಿಯಂತ್ರಣ, ಪ್ರಾಬಲ್ಯವನ್ನು ಹೊಂದಿದ್ದು ಹೆಚ್ಚು ಆಸ್ತಿಯನ್ನು ನಿಯಂತ್ರಿಸುತ್ತಿವೆ. ಎನ್ಪಿಎ ಹೆಚ್ಚಾಗಿದ್ದು ಆರ್ಥಿಕ ಸಂಕಟದಲ್ಲಿ ಸಿಲುಕಿವೆ.

Read more about: gdp india economy money
English summary

Who’s to Blame for India’s Economic Slowdown?

India, the world's fastest growing large economy, is slowing: There has been a visible deceleration in activity in the past six months.
Story first published: Monday, April 22, 2019, 16:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X