ಏರ್ಟೆಲ್ ನ್ನು ಹಿಂದಿಕ್ಕಿ ಜಿಯೋ ಮುಂದೆ!

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಕಂಪನಿಯು ಚಂದಾದಾರರ ಆಧಾರದ ಮೇಲೆ ಭಾರ್ತಿ ಏರ್ಟೆಲ್ ಅನ್ನು ಹಿಂದಿಕ್ಕಿ ಭಾರತದ ಎರಡನೆಯ ಅತಿದೊಡ್ಡ ದೂರಸಂಪರ್ಕ ಕಂಪೆನಿಯಾಗಿ ಹೊರಹೊಮ್ಮಿದೆ.

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಕಂಪನಿಯು ಚಂದಾದಾರರ ಆಧಾರದ ಮೇಲೆ ಭಾರ್ತಿ ಏರ್ಟೆಲ್ ಅನ್ನು ಹಿಂದಿಕ್ಕಿ ಭಾರತದ ಎರಡನೆಯ ಅತಿದೊಡ್ಡ ದೂರಸಂಪರ್ಕ ಕಂಪೆನಿಯಾಗಿ ಹೊರಹೊಮ್ಮಿದೆ.

ಏರ್ಟೆಲ್ ನ್ನು ಹಿಂದಿಕ್ಕಿ ಜಿಯೋ ಮುಂದೆ!

ರಿಲಯನ್ಸ್ ಜಿಯೊ 30.6 ಕೋಟಿ ಗ್ರಾಹಕರನ್ನು ಹೊಂದಿದ್ದು, ಏರ್ಟೆಲ್ 28.4 ಕೋಟಿ ಗ್ರಾಹಕರನ್ನು ಹೊಂದಿದೆ. ಡಿಸೆಂಬರ್ 2018 ರಲ್ಲಿ ವೊಡಾಫೋನ್-ಐಡಿಯಾ 38.7 ಕೋಟಿ ಚಂದಾದಾರರನ್ನು ಹೊಂದಿದೆ ಎಂದು ಪ್ರಕಟಿಸಿದೆ.

ರಿಲಯನ್ಸ್ ಜಿಯೋ ಶೀಘ್ರದಲ್ಲೇ ವೊಡಾಫೋನ್-ಐಡಿಯಾವನ್ನು ಮೀರಿಸಬಹುದೆಂದು ಟೆಲಿಕಾಂ ಉದ್ಯಮದ ವಿಶ್ಲೇಷಕರು ನಿರೀಕ್ಷಿಸಿದ್ದಾರೆ. ಮೂರು ಖಾಸಗಿ ಸಂಸ್ಥೆಗಳಲ್ಲಿ ವೊಡಾಫೋನ್-ಐಡಿಯಾ ಅತ್ಯಂತ ದುರ್ಬಲವಾಗಿದೆ ಎಂದಿದ್ದಾರೆ.

ರಿಲಯನ್ಸ್ ಜಿಯೊ ಆಕ್ರಮಣಕಾರಿ, ಅಗ್ಗದ ಯೋಜನೆಗಳಿಂದ ಮುಂಚೂಣಿಯತ್ತ ಧಾವಿಸುತ್ತಿದೆ. ಭಾರ್ತಿ ಏರ್ಟೆಲ್ ಭಾರತದ ಟೆಲಿಕಾಂ ವಲಯವನ್ನು ಸುಮಾರು ಎರಡು ದಶಕಗಳಿಂದ ಮಾರುಕಟ್ಟೆಯ ನಾಯಕನಾಗಿ ನಿಯಂತ್ರಿಸಿತ್ತು. ಆದರೆ ಪತನ ನಾಟಕೀಯವಾಗಿದೆ. ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಸೆಲ್ಯುಲರ್ ವಿಲೀನವು ಕೂಡ ಏರ್ಟೆಲ್ ಮೇಲೆ ಪರಿಣಾಮ ಬೀರಿತು.
ರಿಲಯನ್ಸ್ ಜಿಯೋ ಸೇವೆಗಳನ್ನು ಸೆಪ್ಟೆಂಬರ್ 2016 ರಲ್ಲಿ ಪ್ರಾರಂಭಿಸಿತು. ಆಕ್ರಮಣಕಾರಿ ಮತ್ತು ಉಚಿತ ಧ್ವನಿ ಕರೆ ಸೌಲಭ್ಯದೊಂದಿಗೆ ಅಗ್ಗದ ಯೋಜನೆಗಳ ಮೂಲಕ ಟೆಲಿಕಾಂ ವಲಯ ಪ್ರವೇಶಿಸಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+