ಪೋಸ್ಟ್ ಆಫೀಸ್ ಒದಗಿಸುವ ಹಲವು ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆ ಕೂಡ ಒಂದು. ಇದು ಹಲವಾರು ಜನರಿಗೆ ತಿಳಿದಿಲ್ಲ. ಬ್ಯಾಂಕಿಂಗ್ ಸೇವೆಗೆ ಸಂಬಂಧಿಸಿದಂತೆ ಉಳಿತಾಯ ಖಾತೆ ತೆರೆಯಬಹುದು. ಅದೂ ಕೇವಲ 20 ರೂಪಾಯಿ ಮೂಲಕ ಉಳಿತಾಯ ಖಾತೆ ತೆರೆಯಲು ಅವಕಾಶವಿದೆ
ಪೋಸ್ಟ್ ಆಫೀಸ್ ಒದಗಿಸುವ ಹಲವು ಸೇವೆಗಳಲ್ಲಿ ಬ್ಯಾಂಕಿಂಗ್ ಸೇವೆ ಕೂಡ ಒಂದು. ಇದು ಹಲವಾರು ಜನರಿಗೆ ತಿಳಿದಿಲ್ಲ. ಬ್ಯಾಂಕಿಂಗ್ ಸೇವೆಗೆ ಸಂಬಂಧಿಸಿದಂತೆ ಉಳಿತಾಯ ಖಾತೆ ತೆರೆಯಬಹುದು. ಅದೂ ಕೇವಲ 20 ರೂಪಾಯಿ ಮೂಲಕ ಉಳಿತಾಯ ಖಾತೆ ತೆರೆಯಲು ಅವಕಾಶವಿದೆ.
ಮಿನಿಮಮ್ ಬ್ಯಾಲೆನ್ಸ್ 50
ಅಂಚೆ ಕಚೇರಿ ಉಳಿತಾಯ ಖಾತೆಯ ಇನ್ನೊಂದು ವಿಶೇಷತೆಯೆಂದರೆ ಮಿನಿಮಮ್ ಬ್ಯಾಲೆನ್ಸ್. ಗ್ರಾಹಕರು ಕೇವಲ ರೂ. 50 ಕನಿಷ್ಠ ಬ್ಯಾಲೆನ್ಸ್ ರೂಪದಲ್ಲಿಟ್ಟರೆ ಸಾಕು. ಬ್ಯಾಂಕಿನ ಉಳಿತಾಯ ಖಾತೆಯಂತೆ ಅಂಚೆ ಕಚೇರಿ ಉಳಿತಾಯ ಖಾತೆ ಕಾರ್ಯ ನಿರ್ವಹಿಸುತ್ತದೆ. ಅಂಚೆ ಕಚೇರಿ ಗ್ರಾಹಕರಿಗೆ ಎಟಿಎಂ ಕಾರ್ಡ್ ಜೊತೆ ಚೆಕ್ ಬುಕ್ ಕೂಡ ನೀಡಲಾಗುತ್ತದೆ. ಈ ಖಾತೆಯಲ್ಲಿ ಶೇ. 4ರಷ್ಟು ಬಡ್ಡಿ ಸಿಗುತ್ತದೆ.
ಅಂಚೆ ಕಚೇರಿ ಖಾತೆ ವಿಶೇಷ
ಅಂಚೆ ಕಚೇರಿಯಲ್ಲಿ ಬೇರೆ ಬೇರೆ ಉಳಿತಾಯ ಖಾತೆಗಳನ್ನು ತೆರೆಯಬಹುದಾಗಿದ್ದು, ಉಳಿತಾಯ ಖಾತೆಯಲ್ಲಿ ಸಿಗುವ ಬಡ್ಡಿಯಲ್ಲಿ ರೂ. 10,000 ತೆರಿಗೆ ಮುಕ್ತವಾಗಿರುತ್ತದೆ. ಪೋಸ್ಟ್ ಆಫೀಸ್ ಖಾತೆಯನ್ನು ದೇಶದ ಯಾವುದೇ ಅಂಚೆ ಕಚೇರಿಗೆ ವರ್ಗಾವಣೆ ಮಾಡಬಹುದು. ಉಳಿತಾಯ ಖಾತೆ ತೆರೆಯುವವರು ಅಂಚೆ ಕಚೇರಿ ಹಾಗೂ ವೆಬ್ಸೈಟ್ ನಲ್ಲಿ ಅರ್ಜಿ ಪಡೆಯಬಹುದು. ಚೆಕ್ ಬುಕ್ ಬೇಕಾದರೆ ರೂ. 500 ನೀಡಿ ಖಾತೆ ತೆರೆಯಬೇಕು. ಚೆಕ್ ಬುಕ್ ಅಗತ್ಯ ಇರದಿದ್ದಲ್ಲಿ ರೂ. 20ಗೆ ಖಾತೆ ತೆರೆಯಬಹುದು.
ಖಾತೆ ತೆರೆಯಲು ಕೆವೈಸಿ ಪ್ರಕ್ರಿಯೆ
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ತೆರೆಯಲು ಚುನಾವಣಾ ಚೀಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ನಂತಹ ದಾಖಲಾತಿಗಳು ಬೇಕಾಗುತ್ತದೆ. ಅಂಚೆ ಕಚೇರಿ ಅಥವಾ ಆನ್ಲೈನ್ ನಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿ, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.


Click it and Unblock the Notifications