ಗುಡ್ ನ್ಯೂಸ್! ಪಿಎಫ್ ಬಡ್ಡಿದರ ಏರಿಕೆ

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) 2018-19 ನೇ ಹಣಕಾಸು ಸಾಲಿನ ಶೇ. 8.65 ರಷ್ಟು ಬಡ್ಡಿ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ) 2018-19 ನೇ ಹಣಕಾಸು ಸಾಲಿನ ಶೇ. 8.65 ರಷ್ಟು ಬಡ್ಡಿ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಅನುಮೋದನೆ ನೀಡಿದೆ.
ಫೆಬ್ರವರಿ ತಿಂಗಳಲ್ಲಿ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದಲ್ಲಿ ನಡೆದ ಇಪಿಎಫ್ಒ ಮಂಡಳಿ ಸಭೆಯಲ್ಲಿ ಬಡ್ಡಿ ದರ ಏರಿಕೆ ಮಾಡುವ ನಿರ್ಣಯ ಕೈಗೊಳ್ಳಲಾಗಿತ್ತು.
ಇಪಿಎಫ್ಒ ನಿಗದಿಪಡಿಸಿರುವ ಈ ಬಡ್ಡಿದರ ಹೆಚ್ಚಳ ನಿರ್ಧಾರದಿಂದ ಸಂಘಟಿತ ವಲಯದ ಸುಮಾರು 6 ಕೋಟಿ ನೌಕರರಿಗೆ ಲಾಭವಾಗಲಿದೆ. ಈಗಾಗಲೇ ಹಣಕಾಸು ಸಚಿವಾಲಯದ ಅನುಮೋದನೆ ಸಿಕ್ಕಿದ್ದು, ಕಾರ್ಮಿಕ ಸಚಿವಾಲಯದಿಂದ ಅಧಿಕೃತ ಘೋಷಣೆ ಹೊರ ಬರಬೇಕಿದೆ.

ಭವಿಷ್ಯ ನಿಧಿ ಹಣ ಇತ್ಯರ್ಥ

ಭವಿಷ್ಯ ನಿಧಿ ಹಣ ಇತ್ಯರ್ಥ

ಈ ಅನುಮೋದನೆಗೆ ಪೂರಕವಾಗಿ ಆದಾಯ ತೆರಿಗೆ ಇಲಾಖೆ, ಕಾರ್ಮಿಕ ಸಚಿವಾಲಯ ಬಡ್ಡಿದರ ಘೋಷಣೆಯ ಅಧಿಕೃತ ಅಧಿಸೂಚನೆ ಹೊರಡಿಸಲಿವೆ. ತದನಂತರ ಇಪಿಎಫ್ಒ ಉದ್ಯೋಗಿಗಳ ಖಾತೆಗೆ ಬಡ್ಡಿದರ ಸೇರಿಸಲು ತನ್ನ ಕ್ಷೇತ್ರ ಅಧಿಕಾರಿಗಳಿಗೆ ಸೂಚನೆ ನೀಡಲಿದೆ. ಹೊಸ ಬಡ್ಡಿದರಕ್ಕೆ ಅನುಗುಣವಾಗಿ ಉದ್ಯೋಗಿಗಳ ಭವಿಷ್ಯ ನಿಧಿ ಹಣ ಇತ್ಯರ್ಥವಾಗಲಿದೆ.

ಶೇ. 8.7ರಷ್ಟು ಬಡ್ಡಿದರ ಪಾವತಿಸಿದ್ದರೆ?

ಶೇ. 8.7ರಷ್ಟು ಬಡ್ಡಿದರ ಪಾವತಿಸಿದ್ದರೆ?

ಶೇಕಡಾ 8.65 ರಂತೆ ಬಡ್ಡಿದರ ಪಾವತಿಸಿದ ನಂತರ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ)ಯಲ್ಲಿ ರೂ. 151.67 ಕೋಟಿ ಉಳಿಯಲಿದೆ. ಆಕಸ್ಮಾತ್ ಇಪಿಎಫ್ಒ ಬಡ್ಡಿದರವನ್ನು ಶೇ. 8.7ರಷ್ಟು ನಿಗದಿಪಡಿಸಿದ್ದರೆ ರೂ. 158 ಕೋಟಿ ಕೊರತೆಯಾಗುತ್ತಿತ್ತು. ಹೀಗಾಗಿ ಶೇಕಡಾ 8.65 ಬಡ್ಡಿದರ ನಿಗದಿಪಡಿಸಲಾಗಿದೆ. ಶೇಕಡಾ 8.65 ಬಡ್ಡಿದರ ಪಾವತಿಸಲು ಹಣಕಾಸು ಸೇವೆಗಳ ಇಲಾಖೆ ಸಹಮತ ಸೂಚಿಸಿದೆ.

ಮೂರು ವರ್ಷಗಳಲ್ಲೇ ಏರಿಕೆ

ಮೂರು ವರ್ಷಗಳಲ್ಲೇ ಏರಿಕೆ

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಪ್ರಥಮ ಬಾರಿಗೆ ಇಪಿಎಫ್ ಬಡ್ಡಿದರ ಏರಿಕೆ ನಿರ್ಧಾರ ಮಾಡಲಾಗಿದ್ದು, ೨೦೧೭-೧೮ರಲ್ಲಿ ಬಡ್ಡಿದರ ಶೇ. 8.55 ರಷ್ಟಿತ್ತು. ೨೦೧೫-೧೬ರಲ್ಲಿ ಹೆಚ್‌ಚು ಬಡ್ಡಿದರ ಅಂದರೆ ಶೇ. ೮.೮ರಷ್ಟು ನಿಗದಿ ಮಾಡಲಾಗಿತ್ತು. ೨೦೧೬-೧೭ರಲ್ಲಿ ಶೇ. 8.65ಕ್ಕೆ ಇಳಿಸಿ ಇದೀಗ ಶೇ. 8.65ಕ್ಕೆ ಏರಿಸಲಾಗಿದೆ. ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ಟಾಪ್ 15 ಬ್ಯಾಂಕುಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+