For Quick Alerts
ALLOW NOTIFICATIONS  
For Daily Alerts

ಈ ಮೂರು ಬ್ಯಾಂಕುಗಳು ವಿಲೀನ ಆಗಲಿವೆ

ಶೀಘ್ರದಲ್ಲೇ ಸಾರ್ವಜನಿಕ ವಲಯದ ಕೆಲ ಬ್ಯಾಂಕುಗಳು ವಿಲೀನಗೊಳ್ಳಲು ಸರ್ಕಾರದಿಂದ ಆಮಂತ್ರಣ ಪಡೆಯಬಹುದು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

|

ಶೀಘ್ರದಲ್ಲೇ ಸಾರ್ವಜನಿಕ ವಲಯದ ಕೆಲ ಬ್ಯಾಂಕುಗಳು ವಿಲೀನಗೊಳ್ಳಲು ಸರ್ಕಾರದಿಂದ ಆಮಂತ್ರಣ ಪಡೆಯಬಹುದು ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.

ಈ ಮೂರು ಬ್ಯಾಂಕುಗಳು ವಿಲೀನ ಆಗಲಿವೆ

ಶೀಘ್ರದಲ್ಲೇ ವಿಲೀನ ನಡೆಯಲಿದೆ. ಈ ಬಗ್ಗೆ ಚರ್ಚೆ ನಡೆಸಲು ಆಯ್ದ ಅಧಿಕಾರಿಗಳ ಜೊತೆ ಸರ್ಕಾರ ಶೀಘ್ರವೇ ಮಾತುಕತೆ ನಡೆಸಲಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್,‌ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳು ಒಳಗೊಳ್ಳುವ ಸಾಧ್ಯತೆ ಇದೆ. ವಿಲೀನಕ್ಕೆ ತುಂಬಾ ಸಮಯ ತೆಗೆದುಕೊಳ್ಳದೇ, ವಿಲೀನ ಪ್ರಕ್ರಿಯೆ ಪ್ರಸ್ತುತ ಹಣಕಾಸು ವರ್ಷದ ಎರಡನೇ ಮತ್ತು ಮೂರನೇ ತ್ರೈಮಾಸಿಕದಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬ್ಯಾಂಕುಗಳಿಂದ ನಿರ್ಧಾರ ಸಾಧ್ಯವಾಗದಿದ್ದರೆ ಪರ್ಯಾಯ ಕಾರ್ಯತಂತ್ರ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌
ಕೇಂದ್ರ ಸರ್ಕಾರ ಅಕ್ಟೋಬರ್ 2018ರಲ್ಲಿ ಮೂರು ಬ್ಯಾಂಕುಗಳ ವಿಲೀನ ನಿರ್ಧಾರ ಕೈಗೊಂಡು, ಬ್ಯಾಂಕ್ ಆಫ್ ಬರೋಡಾ, ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಗಳನ್ನು ವಿಲೀನಗೊಳಿಸಿ ದೇಶದ ಮೂರನೇ ದೊಡ್ಡ ಬ್ಯಾಂಕ್ ಆಗಿ ಮಾಡಿದ್ದು, ಏಪ್ರಿಲ್ 1, 2019 ರಂದು ಬ್ಯಾಂಕ್ ಆಫ್ ಬರೋಡಾ ಜೊತೆ ವಿಜಯಾ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ವಿಲೀನಗೊಂಡಿವೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್,‌ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಈ ಮೂರು ಬ್ಯಾಂಕ್ ಗಳ ವಿಲೀನ ಮಾಡುವುದು ಉದ್ದೇಶವಲ್ಲ. ಬ್ಯಾಂಕುಗಳ ಬ್ಯಾಲೆನ್ಸ್ ಶೀಟ್ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌ ಬ್ಯಾಂಕ್ ಆಫ್ ಇಂಡಿಯಾ ಹೊರತುಪಡಿಸಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ವಿಲೀನವಾಗುವ ಸಾಧ್ಯತೆಯಿದೆ.

Read more about: bank money
English summary

Punjab National Bank, Union Bank, Bank of India in talks for merger

Some public sector banks may soon receive an invitation from the government to discuss another round of mergers in the sector.
Story first published: Tuesday, April 30, 2019, 14:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X